ಅಥಣಿ : ಫಡತರವಾಡಿ ಗ್ರಾಮದ ನವನಾಥ ನಿಕ್ಕಂ ಅವರು ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್‌ನ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್‌ನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಚೆನ್ನವೀರ ಹೀರೆಮಠ (ಕಡಣಿ) ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ನೂತನ ಬೆಳಗಾವಿ ಜಿಲ್ಲಾ ಅಧ್ಯಕ್ಷರಿಗೆ ತಮ್ಮ ಅಧಿಕಾರದ ಅವಧಿಯಲ್ಲಿ ಸಂಗೀತ, ಸಾಹಿತ್ಯ, ಅಧ್ಯಾತ್ಮ , ಯೋಗ ಮತ್ತು ಭಾರತಿಯ ಕಲಾ ಪರಂಪರೆಯ ಸೇವೆಗಾಗಿ ಶ್ರಮಿಸಬೇಕೆಂದು ಕರೆ ನೀಡಿದ್ದಾರೆ.
ಡಾ. ಪಂಡಿತ್ ಪುಟ್ಟರಾಜರು ಹುಟ್ಟು ಹಾಕಿದ ಈ ಸಂಸ್ಥೆಯ ಪೂಜ್ಯರ ಅಭಿಮಾನಿ ಭಕ್ತರನ್ನು ಈ ಪರಿಷತ್‌ನ ಮುಖ್ಯ ವಾಹಿನಿಗೆ ತಂದು ಜಿಲ್ಲಾದ್ಯಂತ ಈ ಪರಿಷತ್ ಕಟ್ಟಿ ಬೆಳೆಸಲು ಸಾಮಾನ್ಯ ಸದಸ್ಯತ್ವ ಅಭಿಯಾನ ಆರಂಭಿಸಲು ಸೂಚಿಸಿದ್ದಾರೆ.