ಬೆಳಗಾವಿ : ನಗರದ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹುತಾತ್ಮ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಗೌರವ ನಮನ ಸಲ್ಲಿಸಲಾಯಿತು.
ಈ ವೇಳೆ ಅರಣ್ಯ ಇಲಾಖೆ ಅಧಿಕಾರಿ ಬಸವರಾಜ ಪಾಟೀಲ್ ಮಾತನಾಡಿ, ಕರ್ತವ್ಯ ನಿರ್ವಹಣೆ ವೇಳೆ ಅದೆಷ್ಟೇ ಕಷ್ಟಗಳು, ಸವಾಲುಗಳು ಎದುರಾದರೂ ಕೂಡ ತಮ್ಮ ಜೀವವನ್ನು ಪಣಕ್ಕಿಟ್ಟು ಅರಣ್ಯ ಸಂಪತ್ತನ್ನು ನಮ್ಮ ಇಲಾಖೆ ಸಿಬ್ಬಂದಿ ಅಧಿಕಾರಿ ವರ್ಗದವರು ಕಾಪಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡ ಎಲ್ಲ ಹುತಾತ್ಮರನ್ನು ಸ್ಮರಿಸಬೇಕಾದದ್ದು ನಮ್ಮ ಆಧ್ಯ ಕರ್ತವ್ಯವಾಗಿದೆ. ಇನ್ನು ಹುತಾತ್ಮ ಯೋಧರ ಕುಟುಂಬಗಳ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.
ಬಳಿಕ ಡಿಎಫ್‌ಓ ಎಂ.ವಿ.ಅಮರನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್‌ಎಫ್‌ಓ ಎಸ್.ಕೆ.ಕಲ್ಲೋಳಿಕರ್, ಎಸಿಎಫ್ ಅಶೋಕ ಮಾದರ್, ಆರ್‌ಎಫ್‌ಓ ಆರ್.ಎಚ್.ದೊಂಬರಗಿ, ಡಿವೈಸಿಎಫ್ ಜೆ.ಆರ್.ನಾಯಕ್, ಅಧಿಕಾರಿಗಳಾದ ವಿನಯ್ ಗೌಡರ, ಎಂ.ಎ.ಕಿಲ್ಲೇದಾರ, ಶಿವಾನಂದ ಮಂಜರಗಿ ಇದ್ದರು.