ETV Bharat / state

ಅಲ್ಪಹಣದಲ್ಲಿ ಚಿಕಿತ್ಸೆ ನೀಡುತ್ತಾರೆ ಅಥಣಿಯಲ್ಲಿ ಓರ್ವ ನಾಟಿ ವೈದ್ಯ.. ಕೈ- ಕಾಲು ಮುರಿತ, ಸೆಳೆತಕ್ಕೆ ಇವರು ರಾಮಬಾಣ! - ವೈದ್ಯಕೀಯ ಪದ್ದತಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದಲ್ಲಿ ಕೈ- ಕಾಲು ಮುರಿತ, ಕಾಲು ಸೆಳೆತ ಇನ್ನಿತರ ತೊಂದರೆಗಳಿಗೆ ನಾಟಿ ವೈದ್ಯ ಮುರಗೇಪ್ಪಾ ಸಿದ್ದಾ ಉಗಾರೆ ಅವರು ಚಿಕಿತ್ಸೆ ನೀಡುತ್ತಾ ಜನರಿಂದ ಮೆಚ್ಚುಗೆ ಗಳಿಸಿದ್ದಾರೆ.

ನಾಟಿ ವೈದ್ಯ
ನಾಟಿ ವೈದ್ಯ
author img

By

Published : Jan 20, 2023, 6:55 PM IST

ನಾಟಿ ವೈದ್ಯ ಮುರಗೇಪ್ಪಾ ಸಿದ್ದಾಉಗಾರೆ ಅವರು ಮಾತನಾಡಿದರು

ಚಿಕ್ಕೋಡಿ : ದೇಶದಲ್ಲಿ ಬಹಳ ಹಿಂದಿನಿಂದಲೂ ನಾಟಿ ವೈದ್ಯಕೀಯ ಚಿಕಿತ್ಸೆ ಎಂಬುದು ಪ್ರಸಿದ್ಧಿಯನ್ನು ಪಡೆದಿದೆ. ಅದರಂತೆಯೇ ಚಿಕ್ಕೋಡಿಯಲ್ಲೊಬ್ಬರು ಪರಂಪರೆಯ ನಾಟಿ ವೈದ್ಯ ಚಿಕಿತ್ಸೆಯನ್ನು ಬಳಸಿಕೊಂಡು ಅಸಂಖ್ಯಾತ ರೋಗಿಗಳಿಗೆ ಚಿಕಿತ್ಸೆ ನೀಡಿ ಅನಾರೋಗ್ಯದ ಸಮಸ್ಯೆ ಹೋಗಲಾಡಿಸಿ ಎಲೆಮರೆ ಕಾಯಿಯಂತೆ ತಮ್ಮ ವೈದ್ಯ ಪದ್ಧತಿಯನ್ನು ಮುನ್ನಡೆಸಿಕೊಂಡು ಹೋಗಿ ಬಡ ರೋಗಿಗಳ ಬಾಳಲ್ಲಿ ಸಂಜೀವಿನಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದ ಮುರಗೇಪ್ಪಾ ಸಿದ್ದಾ ಉಗಾರೆ ಎಂಬುವವರು ಪಾರಂಪರಿಕವಾಗಿ ಪಂಚಕರ್ಮ ಚಿಕಿತ್ಸೆ ನೀಡುತ್ತಾ ಬಡವರ ಪಾಲಿಗೆ ದೇವರಂತೆ ಕೆಲಸ ಮಾಡುತ್ತಾ ಅಲ್ಪ ಹಣದಲ್ಲಿ ನರ ರೋಗ, ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡುತ್ತಾರೆ. ಗಿಡಮೂಲಿಕೆಗಳಿಂದ ತಯಾರಾದ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ಒಂದು ಬಟ್ಟೆ ತುಂಡಿನಿಂದ ಮುರಿತವಾದ ಸ್ಥಳಕ್ಕೆ ಕಟ್ಟಿ ಚಿಕಿತ್ಸೆ ನೀಡುತ್ತಾರೆ.

ಜಿಲ್ಲೆಗಳ ಜನರಿಗೆ ಸಂಜೀವಿನಿ: ಕಳೆದ 30 ವರ್ಷಗಳಿಂದ ನಾಟಿ ಚಿಕಿತ್ಸೆ ನೀಡುತ್ತಾ ಪಕ್ಕದ ಮಹಾರಾಷ್ಟ್ರ ರಾಜ್ಯ ಮತ್ತು ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಜನರಿಗೆ ಸಂಜೀವಿನಿಯಾಗಿದ್ದಾರೆ. ನರದ ತೊಂದರೆ, ಮೂಳೆ ಮುರಿತವನ್ನು ಕೈಯಿಂದ ಮುಟ್ಟಿ‌ನೋಡಿ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾರೆ. ಕೂಲಿ ಕಾರ್ಮಿಕರು, ಆಟೋ ಡ್ರೈವರ್ ಸೇರಿದಂತೆ ಎಲ್ಲ ವರ್ಗದ ಜನರೂ ಇವರ ಬಳಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿದ್ದು ಕೈ ಕಾಲಿಗೆ ಪೆಟ್ಟಾದರೆ, ನಡೆಯುವಾಗ ಆಯತಪ್ಪಿ ಬಿದ್ದು ಕಾಲು ಉಳುಕಿದರೆ, ಅವಘಡಗಳಲ್ಲಿ ಸಿಕ್ಕಿ ಕಾಲು ಮುರಿದ ತಕ್ಷಣ ಈ ನಾಟಿ ವೈದ್ಯರ ಹತ್ತಿರ ಬಂದು ಜನರು ಚಿಕಿತ್ಸೆ ಪಡೆಯುತ್ತಾರೆ.

ದೀರ್ಘಕಾಲಿಕ ಚಿಕಿತ್ಸೆ: ಮೊಳಕಾಲು ನೋವು, ನರ ತೊಡಕು ಸಮಸ್ಯೆಯಿಂದ ದಿನಂಪ್ರತಿ ಹತ್ತಾರು ಆಸ್ಪತ್ರೆ ಅಲೆದು ಗುಣಮುಖರಾಗದೆ, ಇವರ ಬಳಿ ಚಿಕಿತ್ಸೆ ಪಡೆದು ಗುಣಮುಖರಾದ ಹಲವರು ಇವರ ಕೈಗುಣ, ಚಿಕಿತ್ಸೆ ಕುರಿತು ಹಾಡಿ ಹೊಗಳಿ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ದೇಹದ ಯಾವುದೇ ನರ ನಾಡಿಗಳು ಮೂಳೆಗೆ ತೊಂದರೆಯಾದರೂ ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡುತ್ತಾರೆ. ಮೂಳೆ ಮುರಿತದ ತೀವ್ರತೆಯನ್ನು ಆಧರಿಸಿ 3 ದಿನದ ಅಲ್ಪಾವಧಿ ಚಿಕಿತ್ಸೆಯಿಂದ - ಆರು ತಿಂಗಳ ದೀರ್ಘಕಾಲಿಕ ಚಿಕಿತ್ಸೆಯನ್ನೂ ನೀಡಿ ಸರಿಪಡಿಸುತ್ತಾರೆ.

ಚಿಕಿತ್ಸೆಗೆ ಆರು ರೀತಿಯ ಎಣ್ಣೆ ಬಳಕೆ: 'ಕಳೆದ ಮೂವತ್ತು ವರ್ಷಗಳ ಹಿಂದಿನಿಂದ ನಾವು ನಾಟಿ ವೈದ್ಯಕೀಯ ಚಿಕಿತ್ಸೆಯನ್ನು ನೀಡುತ್ತಾ ಬಂದಿದ್ದೇವೆ. ಕಾಲಿನ ಮೂಳೆ ಮುರಿತ, ಸಂಧೀ ವಾತ, ಬಿದ್ದಿರುವುದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುವುದು. ಕೈ ಕಾಲು ಮುರಿದ್ದಿದ್ದರೆ ಅಂತಹವರಿಗೆ ಚಿಕಿತ್ಸೆ ನೀಡುತ್ತೇವೆ. ಕತ್ತಿನ ಮೂಳೆ ಉಳುಕಿದ್ದರೆ ಅಂತದ್ದನ್ನು ಕೂಡಾ ಎಣ್ಣೆಯಿಂದ ತಿಕ್ಕಿ ಸರಿಪಡಿಸಲಾಗುವುದು.

ಈ ವೈದ್ಯಕೀಯ ಪದ್ದತಿಯನ್ನು ನಾವೇ ಕಲಿತ್ತಿದ್ದೇವೆ. ಹನುಮಂತ ಹಾಗೂ ಶ್ರೀರಾಮ ದೇವರ ಆರ್ಶಿವಾದದಿಂದ ಚಿಕಿತ್ಸೆಯನ್ನು ನೀಡುತ್ತಾ ಬರುತ್ತಿದ್ದೇವೆ. ಈ ಚಿಕಿತ್ಸೆಗೆ ಸಾಮಾನ್ಯವಾಗಿ ಎಣ್ಣೆಯನ್ನೇ ಬಳಸುತ್ತಾ ಬಂದಿದ್ದೇವೆ. ಆರು ರೀತಿಯ ಎಣ್ಣೆಯನ್ನು ಚಿಕಿತ್ಸೆಗೆ ಬಳಸುತ್ತೇವೆ. ನಮ್ಮ ಬಳಿ ಚಿಕಿತ್ಸೆಗೆ ಬರುವವರ ಮುರಿದ ಅಥವಾ ಊತಗೊಂಡ ಭಾಗವನ್ನು ಮುಟ್ಟಿ ನೋಡುತ್ತೇವೆ, ಆಗ ನಮಗೆ ಗಾಯದ ಸ್ಥಿತಿ ತಿಳಿಯುತ್ತದೆ. ಒಟ್ಟಾರೆ ನಮಗೆ ತಿಳಿದ ಮಟ್ಟಿಗೆ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡುತ್ತೇವೆ' ಅಂತಾರೆ ನಾಟಿ ರೈತವೈದ್ಯ ಮುರಗೇಪ್ಪಾ ಸಿದ್ದಾಉಗಾರೆ.

ಹಳೆಯ ನೋವುಗಳಿಗೂ ಚಿಕಿತ್ಸೆ: 'ಇವರ ಬಳಿ ಕಳೆದ 25 ವರ್ಷದಿಂದ ಚಿಕಿತ್ಸೆಗೆ ಬರುತ್ತಿದ್ದೇನೆ. ಯಾವುದೇ ನೋವಿರಲಿ ಅಥವಾ ಬಿದ್ದಿರುವ ಊತವಿರಲಿ ಇಲ್ಲಿಗೆ ಬಂದರೆ ತಟ್ಟನೆ ವಾಸಿಯಾಗುತ್ತದೆ. ಇವರು ಗಾಯಗೊಂಡಿರುವ ಜಾಗಕ್ಕೆ ಎಣ್ಣೆಯಿಂದ ತಿಕ್ಕಿ ನಂತರ ಚಿಕ್ಕ ಚಿಕ್ಕ ಬಿದಿರಿನ ತುಂಡುಗಳನ್ನು ಇಟ್ಟು ಕಟ್ಟುತ್ತಾರೆ. ಹಿಂದೆ ಎತ್ತಿನಗಾಡಿಯಿಂದ ಬಿದ್ದಿದ್ದಂತಹ ಹಳೆಯ ನೋವುಗಳು ಹಾಗೂ ಕಾಲಿನ ಕೀಲು ನೋವುಗಳಿಗೆ ಇವರ ಬಳಿ ಔಷಧಿ ಇದೆ. ಈಗ ನಾನು ಚೆನ್ನಾಗಿ ನಡೆಯುತ್ತಿದ್ದೇನೆ' ಎಂದು ಚಿಕಿತ್ಸೆ ಪಡೆದ ರೈತ ಅಪ್ಪಾಸಾಹೇಬ ದುಂಡಪ್ಪ ಸಾಳೊಂಕೆ ತಿಳಿಸಿದ್ದಾರೆ.

ಓದಿ: ಚರ್ಮಗಂಟು ರೋಗಕ್ಕೆ ಆಯುರ್ವೇದ ಔಷಧ.. ಉತ್ತಮ ಫಲಿತಾಂಶ ಕಂಡುಕೊಂಡ ರೈತರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.