ಬೆಳಗಾವಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾರ ಗುಲಾಮರು ಎಂಬುವುದು ಜಗತ್ತಿಗೆ ಗೊತ್ತಿದೆ. ಯಾರ ಕಾಲ ಹಿಡಿದು ಸಿಎಂ ಆಗಿದ್ದಾರೆ ಅನ್ನೋದು ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾನಾಡಿದ ಅವರು, ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಗುಲಾಮರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ರಾಮಣ್ಣ ಯಾರ ಕಾಲು ಹಿಡಿದು ಸಿಎಂ ಆಗಿದ್ದಾರೆ ಗೊತ್ತು. ಅವರಿಗೆ 65 ವರ್ಷ, ರಾಹುಲ್ ಗಾಂಧಿ ಕಿರಿಯರಾಗಿದ್ದಾರೆ. ಆದರೂ ಅವರ ಕಾಲು ಹಿಡಿದು ಸಿಎಂ ಆಗಿದ್ದಾರೆ ಎಂದು ಟಾಂಗ್ ಕೊಟ್ಟರು.
ರಮೇಶ್ ಜಾರಕಿಹೊಳಿ ಸಿಡಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಡಿ ಪ್ರಕರಣ ತನಿಖಾ ಹಂತದಲ್ಲಿದೆ. ಸಿದ್ದರಾಮಯ್ಯ ಅವರು ಸಿಎಂ ಇದ್ದಾಗ ಸಿಡಿಗಳು ಯಾವ ರೀತಿ ತನಿಖೆ ಆಗಿದೆ ಎಂಬುದು ಗೊತ್ತಿದೆ. ಸಿದ್ದರಾಮಯ್ಯ ಅವರಿಗೆ ಸಿಬಿಐ, ಐಟಿ, ಎಸ್ಐಟಿ, ಮೇಲೆ ನಂಬಿಕೆ ಇಲ್ಲ. ಅಷ್ಟಕ್ಕೂ ಸಿದ್ದರಾಮಯ್ಯ ಅವರಿಗೆ ಅವರ ಮೇಲೆಯೇ ನಂಬಿಕೆ ಇಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಸಿ.ಡಿ ಪ್ರಕರಣದಿಂದ ಆಗುತ್ತಿರುವ ಮುಜುಗರ ಸಹಿಸಿಕೊಳ್ಳುವ ಶಕ್ತಿ ನಮಗಿದೆ: ಸಚಿವ ಉಮೇಶ್ ಕತ್ತಿ
ಲೋಕಸಭಾ ಉಪಚುಣಾವಣೆಯ ದಿನಾಂಕ ಘೋಷಣೆ ಆಗಿದೆ. ಇಂದು ಮಂಗಳಾ ಅಂಗಡಿ ನಾಮಪತ್ರ ಸಲ್ಲಿಸಿಲಿದ್ದಾರೆ. ರಾಜ್ಯದಲ್ಲಿರುವ ಮೂರು ಉಪ ಚುಣಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ನಮ್ಮ ಪೂರ್ವ ತಯಾರಿ ನಡೆದಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಎಲ್ಲ ಶಾಸಕರಿಗೂ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಲು ಸೂಚನೆ ನೀಡಿದ್ದೇವೆ. ರಮೇಶ್ ಜಾರಕಿಹೊಳಿಯೂ ಬರುತ್ತಾರೆ ಎಂದರು.