ETV Bharat / state

ಜಾರಕಿಹೊಳಿ ಸಿಡಿ ಪ್ರಕರಣದಿಂದ‌ ನಿರಪರಾಧಿಯಾಗಿ ಹೊರಬರುತ್ತಾರೆ: ನಿರಾಣಿ ವಿಶ್ವಾಸ - belgavi latest news

ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ನಡೆಯುತ್ತಿದೆ. ಯಾರು ತಪ್ಪು‌ ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗುತ್ತದೆ. ಆದ್ರೆ, ಜಾರಕಿಹೊಳಿ‌ ತಪ್ಪು ಮಾಡಿಲ್ಲ ಅಂತ ನನಗನಿಸುತ್ತದೆ. ಅವರು ನಿರಪರಾಧಿಯಾಗಿ ಹೊರಬರುತ್ತಾರೆಂಬ ಆತ್ಮವಿಶ್ವಾಸವಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು‌.

murugesh nirani
ಸಚಿವ ಮುರುಗೇಶ್ ನಿರಾಣಿ
author img

By

Published : Mar 14, 2021, 7:14 PM IST

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ನಿರಪರಾಧಿಯಾಗಿ ಹೊರಬರುತ್ತಾರೆಂಬ ಆತ್ಮವಿಶ್ವಾಸ ನಮಗಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು‌.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಡಿ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿದ್ದು, ತನಿಖೆ ಕೂಡ ನಡೆಯುತ್ತಿದೆ. ಯಾರು ತಪ್ಪು‌ ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗುತ್ತದೆ. ಆದ್ರೆ, ರಮೇಶ್ ಜಾರಕಿಹೊಳಿ‌ ತಪ್ಪು ಮಾಡಿಲ್ಲ ಅಂತ ನನಗನಿಸುತ್ತದೆ ಎಂದರು.

ಸಚಿವ ಮುರುಗೇಶ್ ನಿರಾಣಿ

ತನಿಖೆ ಆದ ಮೇಲೆ ಎಲ್ಲಾ ಸಂಪೂರ್ಣವಾಗಿ ಗೊತ್ತಾಗಲಿದ್ದು, ಈ ಬಗ್ಗೆ ಗೃಹಸಚಿವ ಬಸವರಾಜ ಬೊಮ್ಮಾಯಿ ಪ್ರಕರಣದ ಉತ್ತರ ಕೊಡುತ್ತಿದ್ದಾರೆ. ನಾವೆಲ್ಲರೂ ಸಿಡಿ ಪ್ರಕರಣದಿಂದ ಬಹಳ ದೂರ ಇದ್ದೇವೆ. ತಪ್ಪಿತಸ್ಥರು ಎಷ್ಟೇ ದೊಡ್ಡವರಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು‌ ಸಚಿವರು ಹೇಳಿದರು‌.

ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಯತ್ನ ನಡೆಯುತ್ತಿದೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಮಾಹಿತಿ ಗೊತ್ತಿಲ್ಲ, ನಾನು ಗಮನವನ್ನೂ ಹರಿಸಿಲ್ಲ, ನಾಲ್ಕೈದು ದಿನಗಳಾಯ್ತು ನಾನು ಟಿವಿ ಸಹ ನೋಡಿಲ್ಲ ಎಂದರು.

ಮೀಸಲಾತಿ ವಿಚಾರ:

ಸಿಎಂಗೆ ಆಸಕ್ತಿ ಇದ್ದರೂ ಕೆಲ ಶಾಸಕರು ಬೆಂಬಲಿಸುತ್ತಿಲ್ಲ ಎಂಬ ಜಯಮೃತ್ಯುಂಜಯ ಹೇಳಿಕೆ ವಿಚಾರವಾಗಿ ಮಾತನಾಡಿ, ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ಬಗ್ಗೆ ನಾನು ಉತ್ತರ ಕೊಡಲ್ಲ. ಕಾರಣ, ಲಿಂಗಾಯತ ಪಂಚಮಸಾಲಿ ಸಮುದಾಯ ಯಾವುದೇ ಜಾತಿ ಕಾಲಂನಲ್ಲಿ ಇರಲಿಲ್ಲ. 2010ರಲ್ಲಿ ನಾನು ಕೈಗಾರಿಕಾ ಸಚಿವನಾಗಿದ್ದಾಗ ಸಿಎಂ ಬಿಎಸ್‌ವೈ ಗಮನಕ್ಕೆ ತಂದಿದ್ದೆ. ಅಂದು ಸಿಎಂ ಬಿಎಸ್‌ವೈ ಸಬ್ ಕಮಿಟಿ ರಚಿಸಿ 2ಎ ಮೀಸಲಾತಿಗೆ ರೆಫರ್ ಮಾಡಿದ್ರು. ಅಧಿವೇಶನದಲ್ಲಿ ಪ್ರಶ್ನೆ ಬಂದಾಗ ವಿಳಂಬ ಆಗುತ್ತದೆ ಅಂತಾ 3ಬಿಗೆ ಸೇರ್ಪಡೆ ಮಾಡಿದ ಕೀರ್ತಿ ಬಿಎಸ್‌ವೈ ಅವರಿಗೆ ಸಲ್ಲುತ್ತದೆ ಎಂದರು.

ಜಯಮೃತ್ಯುಂಜಯ ಶ್ರೀಗಳ ಬಗ್ಗೆ ಏನೂ ಕಮೆಂಟ್ ಮಾಡಲ್ಲ, ಅವರು ದೊಡ್ಡವರು. ಇಬ್ಬರು ಸ್ವಾಮೀಜಿಗಳು ಅವರ ಪಕ್ಕದಲ್ಲಿದ್ದವರು ಬಹಳ ದೊಡ್ಡವರಿದ್ದಾರೆ. ನಾನು ತುಂಬಾ ಸಣ್ಣವನಿದ್ದೇನೆ. ಹೀಗಾಗಿ ಶ್ರೀಗಳ ಹೇಳಿಕೆ ಬಗ್ಗೆ ಕಮೆಂಟ್ ಮಾಡಲ್ಲ. ಕೇವಲ ಪಂಚಮಸಾಲಿ ಅಷ್ಟೇ ಅಲ್ಲ ಸಂಪೂರ್ಣ ವೀರಶೈವ ಲಿಂಗಾಯತ ಸಮುದಾಯಕ್ಕೆ ಅವಕಾಶ ಸಿಗಬೇಕು. ಮೀಸಲಾತಿ ಕೇಳುವ ಬೇರೆ ಸಮುದಾಯದವರಿಗೂ ಅವಕಾಶ ಸಿಗಬೇಕೆಂದು ಹೇಳುತ್ತೇನೆ.

ಈಗಾಗಲೇ ವಿಧಾನಸಭೆಯಲ್ಲಿ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ವಿವರವಾಗಿ ಉತ್ತರ ಕೊಟ್ಟಿದ್ದಾರೆ. ಎಲ್ಲಾ ಸಮುದಾಯದವರು ಮೀಸಲಾತಿಯನ್ನು ಬೇಡುತ್ತಿದ್ದಾರೆ. ವೀರಶೈವ ಲಿಂಗಾಯತ ಸಮುದಾಯ ಉಳಿದ ಸಮುದಾಯಗಳು 3Bಯಿಂದ 2Aಗೆ ಕೊಡಿ ಎಂದಿದ್ದಾರೆ. ಕಾನೂನು ಹಿನ್ನೆಲೆ, ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು.

ಇದನ್ನೂ ಓದಿ: ಸಿಡಿ ತನಿಖೆ ಚುರುಕು: ಯುವತಿಯ ಮೂಲ ಪತ್ತೆಗೆ ಪೊಲೀಸರ ಶೋಧ

ಹಿಂದುಳಿದ ಆಯೋಗದ ಸಮಿತಿಗೆ ಜಯಪ್ರಕಾಶ ಹೆಗಡೆ ಅಧ್ಯಕ್ಷರಿದ್ದಾರೆ. ಯಾರ್ಯಾರು ಮೀಸಲಾತಿ ಪಡೆಯಲು ಅರ್ಹರಿದ್ದಾರೆ ಎಂಬ ಬಗ್ಗೆ ವರದಿ ಕೇಳಿದ್ದೇವೆ. ನಿವೃತ್ತ ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತ್ರಿ ಸದಸ್ಯತ್ವ ಪೀಠ ಸಮಿತಿ ಮಾಡಿದ್ದೇವೆ. ಅವರು ನೀಡಿದ ವರದಿ ಸಾಧಕ ಬಾಧಕ ನೋಡಿ ಕ್ಯಾಬಿನೆಟ್‌ಗೆ ವರದಿ ಸಬ್ಮಿಟ್ ಮಾಡಲು ತಿಳಿಸಲಾಗಿದ್ದು ನಂತರ ಕ್ಯಾಬಿನೆಟ್​ನಲ್ಲಿ ಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.