ETV Bharat / state

ಆಸ್ತಿ ದುರಾಸೆಯಿಂದ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್​

ಕೊಲೆ‌ ಮಾಡಿ ಪರಾರಿ ಆಗಿದ್ದ ಆರೋಪಿಯನ್ನು ಬೈಲಹೊಂಗಲ ಪೊಲೀಸರು ಬಂಧಿಸಿದ್ದಾರೆ.

Murder accused arrested, Murder accused arrest in Belagavi, Belagavi crime , Belagavi crime news, ಕೊಲೆ ಆರೋಪಿ ಬಂಧನ, ಬೆಳಗಾವಿಯಲ್ಲಿ ಕೊಲೆ ಆರೋಪಿ ಬಂಧನ, ಬೆಳಗಾವಿ ಅಪರಾಧ, ಬೆಳಗಾವಿ ಅಪರಾಧ ಸುದ್ದಿ,
ಆರೋಪಿ ಅಕ್ಷಯ್
author img

By

Published : Feb 27, 2021, 4:16 AM IST

ಬೆಳಗಾವಿ: ಬೈಲಹೊಂಗಲ ಬಸ್​ ನಿಲ್ದಾಣದ ಬಳಿ ನಡೆದ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಎರಡ್ಮೂರು ದಿನಗಳ ಹಿಂದೆ‌ ಬೈಲಹೊಂಗಲ ಬಸ್ ನಿಲ್ದಾಣದ ಬಳಿಯಿರುವ ಸಂಸ್ಕೃತಿ ಬಾರ್ ಅಂಡ್ ರೆಸ್ಟೋರೆಂಟ್ ಹತ್ತಿರ ಶಶಿಕಾಂತ್ ಮಿರಜಕರ್​ನ ಕೊರಳಿಗೆ ಆರೋಪಿ ಅಕ್ಷಯ್​ ಮಿರಜಕರ್​ (26) ಪ್ಲಾಸ್ಟಿಕ್ ವೈಯರ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿ ಆಗಿದ್ದ.

ಕೊಲೆ ಆರೋಪಿ ಮೃತ ಶಶಿಕಾಂತ್ ಮಿರಜಕರ್​ಗೆ ಸಂಬಂಧಿಕನಾಗಿದ್ದ. ಶಶಿಕಾಂತನನ್ನು ಕೊಲೆ ಮಾಡಿದ್ರೆ ಆತನಿಗೆ ಸಂಬಂಧಿಸಿದ ಎಲ್ಲ ಆಸ್ತಿಯೂ ನಮಗೆ ಸಿಗಲಿದೆ ಎಂಬ ದುರಾಸೆ ಹೊಂದಿದ್ದನು. ಹೀಗಾಗಿ ಶಶಿಕಾಂತ್​ನನ್ನು ಕೊಲೆ ಮಾಡಿ ಅಕ್ಷಯ್​ ಪರಾರಿ ಆಗಿದ್ದ.

ಎರಡೇ ದಿನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಬೈಲಹೊಂಗಲ ‌ಪೊಲೀಸರು ಯಶಸ್ವಿ ಆಗಿದ್ದು, ಆರೋಪಿಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.