ETV Bharat / state

ಬೆಳಗಾವಿಯಲ್ಲಿ ರೌಡಿಯ ಬರ್ಬರ ಹತ್ಯೆ; ಸುಪಾರಿ ಕೊಟ್ಟವ ಅರೆಸ್ಟ್! - Rowdy Barbara's murder in Belgaum

ರೌಡಿ ಶಹಬಾಜ್ ಪಠಾಣ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬೆಳಗಾವಿ ಜಿಲ್ಲೆಯ ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.

murder-accused-arrest-in-belgavi
ಬೆಳಗಾವಿಯಲ್ಲಿ ರೌಡಿಯ ಬರ್ಬರ ಹತ್ಯೆ
author img

By

Published : Dec 3, 2020, 5:19 PM IST

ಬೆಳಗಾವಿ: ಜಿಲ್ಲೆಯಲ್ಲಿ ಒಂದೂವರೆ ತಿಂಗಳ ಹಿಂದೆ ನಡೆದಿದ್ದ ರೌಡಿ ಹತ್ಯೆ ಪ್ರಕರಣ ಸಂಬಂಧ ಮಾಳಮಾರುತಿ ಠಾಣೆ ಪೊಲೀಸರು ಪ್ರಮುಖ ಆರೋಪಿ ಬಂಧಿಸಿದ್ದಾರೆ‌.

ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಲಕ್ಷ್ಮಣ ದಡ್ಡಿ (55) ಬಂಧಿತ ಆರೋಪಿ. ಅಕ್ಟೋಬರ್ 26 ಮಧ್ಯರಾತ್ರಿ ಸ್ನೇಹಿತನ ಪುತ್ರನ ಮಗನ ಬರ್ತ್​ಡೇ ಪಾರ್ಟಿ ಮುಗಿಸಿ ಮನೆಗೆ ಹೋಗುತ್ತಿದ್ದ ರೌಡಿ ಶಹಬಾಜ್ ಪಠಾಣ್ ನನ್ನು ಬೆನ್ನತ್ತಿ ಕೊಲೆ ಮಾಡಲಾಗಿತ್ತು. ಹಳೆ ದ್ವೇಷವೇ ಶಹಬಾಜ್ ಕೊಲೆಗೆ ಪ್ರಮುಖ ಕಾರಣ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ‌.

ಕೆಲ ವರ್ಷಗಳ ಹಿಂದೆ ಆರೋಪಿ ಲಕ್ಷ್ಮಣ ದಡ್ಡಿ ಪುತ್ರನ ಮೇಲೆ ಶಹವಾಜ್ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಇದರಿಂದ ಕುಪಿತಕೊಂಡಿದ್ದ ಲಕ್ಷ್ಮಣ ದಡ್ಡಿ ಶಹಬಾಜ್ ಹತ್ಯೆಗೆ ಸುಪಾರಿ ಕೊಟ್ಟಿದ್ದನು. ಅಲ್ಲದೇ ಹತ್ಯೆ ಪ್ರಕರಣದಲ್ಲಿ ತಾನೂ ಭಾಗಿಯಾಗಿದ್ದನು. ಹತ್ಯೆ ಘಟನೆ ಬಳಿಕ ಲಕ್ಷ್ಮಣ ದಡ್ಡಿ ಪರಾರಿಯಾಗಿದ್ದನು. ಇಂದು ರೌಡಿ ಹತ್ಯೆ ಹಂತಕನನ್ನು ಮಾಳಮಾರುತಿ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಇದಕ್ಕೂ ಮೊದಲು ಠಾಣೆ ಪೊಲೀಸರು ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಬಸವರಾಜ್ ದಡ್ಡಿ (24) ಹಾಗೂ ಬಸವಣ್ಣಿ ನಾಯಿಕ (27) ಎಂಬುವವರನ್ನು ಬಂಧಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.