ETV Bharat / state

ಮಹಾನಗರ ಪಾಲಿಕೆಗೆ ಚುರುಕು ಮುಟ್ಟಿಸುತ್ತೇವೆ : ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ

ಮಹಾನಗರ ಪಾಲಿಕೆ ಕಾರ್ಯಚಟುವಟಿಕೆಗಳಿಗೆ ಕೂಡಲೇ ಚುರುಕು ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಅರಣ್ಯ ಸಚಿವ ಸತೀಶ್ ಜಾರಕಿಹೊಳಿ
author img

By

Published : Apr 28, 2019, 11:48 PM IST

ಬೆಳಗಾವಿ: ನಗರದಲ್ಲಿ ಅತೀಯಾದ ಮಳೆಯಿಂದ ಅಪಾರ ಪ್ರಮಾಣದ ಆಸ್ತಿ ಹಾಳಾಗಿದ್ದು ಈಯವರೆಗೆ ನಗರಸಭೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲವಾದ್ದರಿಂದ ನಗರಸಭೆ ಕಾರ್ಯಚಟುವಟಿಕೆಗಳಿಗೆ ಕೂಡಲೇ ಚುರುಕು ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ, ಮಳೆಯಿಂದ ಬೆಳಗಾವಿಯಲ್ಲಿ ಅನೇಕ ಮರಗಳು ಧರೆಗುರುಳಿವೆ. ಮುಂಜಾಗ್ರತೆಯಾಗಿ ಅಪಾಯದಲ್ಲಿರುವ ಮರಗಳ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ನಮ್ಮ ಇಲಾಖೆಗೆ ನಗರಸಭೆ ಅಥವಾ ಸಾರ್ವಜನಿಕರು ಪ್ರಸ್ತಾವನೆ ನೀಡಿದರೆ ಆದಷ್ಟು ಬೇಗ ಈ ಕೆಲಸ ಮಾಡಲಾಗುವುದು ಎಂದರು.

ಅರಣ್ಯ ಸಚಿವ ಸತೀಶ್ ಜಾರಕಿಹೊಳಿ

ಮಹಾನಗರ ಪಾಲಿಕೆ ಚುನಾವಣೆ ಹತ್ತಿರ ಬಂದಿರುವುದರಿಂದ ಹಲವು ಕೆಲಸ ಕಾರ್ಯಗಳ ಅಡೆತಡೆ ಆಗುತ್ತಿದೆ. ಬರುವ ದಿನಗಳಲ್ಲಿ ನಗರಸಭೆ ಚುನಾವಣೆ ನಡೆಯಲಿದೆ. ಹಾಗೆಯೇ ನಗರದ ಅಭಿವೃದ್ಧಿಗೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುವುದು, ಈ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆಯ ಸಾಕಷ್ಟು ಸರ್ಕಾರಿ ಜಮೀನಿನ ಅತಿಕ್ರಮಣ ನಡೆದಿದ್ದು, ಈಗಾಗಲೇ ಕೆಲ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಜಮೀನು ಪಡೆಯಲಾಗುತ್ತದೆ ಎಂದು ಮಾಹಿತಿ ನೀಡಿದರು.

ನಗರಸಭೆ ಕಾರ್ಯಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತೇವೆ : ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ : ನಗರದಲ್ಲಿ ಅತೀಯಾದ ಮಳೆಯಿಂದ ಅಪಾರ ಪ್ರಮಾಣದ ಆಸ್ತಿ ಹಾಳಾಗಿದ್ದು ಇಲ್ಲಿಯವರೆಗೆ ನಗರಸಭೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲವಾದ್ದರಿಂದ. ನಗರಸಭೆ ಕಾರ್ಯಚಟುವಟಿಕೆಗಳಿಗೆ ಕೂಡಲೇ ಚುರುಕು ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ. ಮಳೆಯಿಂದ ಬೆಳಗಾವಿಯಲ್ಲಿ ಅನೇಕ ಮರಗಳು ಧರೆಗುರುಳಿವೆ ಮುಂಜಾಗ್ರತೆಯಾಗಿ ಅಪಾಯದಲ್ಲಿರುವ ಮರಗಳ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ ನಮ್ಮ ಇಲಾಖೆಗೆ ನಗರಸಭೆ ಅಥವಾ ಸಾರ್ವಜನಿಕರು ಪ್ರಸ್ತಾವನೆ ನೀಡಿದರೆ ಆದಷ್ಟು ಬೇಗ ಈ ಕೆಲಸ ಮಾಡಲಾಗುವುದು ಎಂದರು. ನಗರಸಭೆ ಚುನಾವಣೆ ಹತ್ತಿರ ಬಂದಿರುವುದರಿಂದ ಹಲವು ಕೆಲಸ ಕಾರ್ಯಗಳ ಅಡೆತಡೆ ಆಗುತ್ತಿದೆ ಬರುವ ದಿನಗಳಲ್ಲಿ ನಗರಸಭೆ ಚುನಾವಣೆ ನಡೆಯಲಿದೆ ಹಾಗೆಯೇ ನಗರದ ಅಭಿವೃದ್ಧಿಗೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಈ ಹಿಂದೆ ಬೆಳಗಾವಿ ನಗರಸಭೆಯ ಸಾಕಷ್ಟು ಸರ್ಕಾರ ಜಮೀನಿನ ಅತಿಕ್ರಮಣ ನಡೆದಿದ್ದು ಈಗಾಗಲೆ ಕೆಲವೊಂದು ಜಮೀನನ್ನು ವಶಪಡಿಸಿಕೊಳ್ಳಲಾಗಿದೆ ಮುಂದಿನ ದಿನಗಳಲ್ಲಿ ಉಳಿದ ಜಮೀನು ಪಡೆಯಲಾಗುತ್ತದೆ ಎಂದರು. ವಿನಾಯಕ ಮಠಪತಿ ಬೆಳಗಾವಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.