ETV Bharat / state

ಮಾನವೀಯತೆ ಮರೆತರಾ ಅಧಿಕಾರಿಗಳು...ವೃದ್ಧ ದಂಪತಿ ಹೊರ ಹಾಕಿ ಮನೆಗೆ ಬೀಗ - ಲಾಕ್​ಡೌನ್

ತರಕಾರಿ ‌ತರಲು ಮಾರುಕಟ್ಟೆಗೆ ಹೋಗಿದ್ದ ವೇಳೆ ವೃದ್ಧ ದಂಪತಿಯ ಮನೆಗೆ ಅಧಿಕಾರಿಗಳು ‌ಬೀಗ ಜಡಿದಿದ್ದಾರೆ. ವೃದ್ಧರನ್ನು ಮನೆಯಿಂದ ಹೊರ ಹಾಕಿದ ರಾಮದುರ್ಗ ಪುರಸಭೆ ಅಧಿಕಾರಿಗಳ ಕ್ರಮ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

old age couples in Belgaum
ವೃದ್ಧ ದಂಪತಿ
author img

By

Published : May 1, 2020, 2:31 PM IST

ಬೆಳಗಾವಿ: ಲಾಕ್​ಡೌನ್ ‌ಮಧ್ಯೆ ವೃದ್ದ ದಂಪತಿಯನ್ನ ಪುರಸಭೆ ಅಧಿಕಾರಿಗಳೇ ಮನೆಯಿಂದ ಹೊರಹಾಕಿದ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.

ವೃದ್ಧರೆಂದೂ ನೋಡದೆ ಮನೆಯಿಂದ ಹೊರಹಾಕಿದ ಪುರಸಭೆ

ತರಕಾರಿ ‌ತರಲು ಮಾರುಕಟ್ಟೆಗೆ ಹೋಗಿದ್ದ ಸಂದರ್ಭ ವೃದ್ಧ ದಂಪತಿಯ ಮನೆಗೆ ಅಧಿಕಾರಿಗಳು ‌ಬೀಗ ಜಡಿದಿದ್ದಾರೆ. ವೃದ್ಧರನ್ನು ಮನೆಯಿಂದ ಹೊರ ಹಾಕಿದ ರಾಮದುರ್ಗ ಪುರಸಭೆ ಅಧಿಕಾರಿಗಳ ಕ್ರಮ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಇಪ್ಪತ್ತು ವರ್ಷದಿಂದ ಪುರಸಭೆ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ವೃದ್ಧ ದಂಪತಿ ಜೀವನ ನಡೆಸುತ್ತಿದ್ದರು. ಲಾಕ್​ಡೌನ್ ಸಂದರ್ಭದಲ್ಲಿ ಕೃಪೆ ತೋರದ ಪುರಸಭೆ ಜಾಗದಿಂದ ವೃದ್ಧ ದಂಪತಿಯನ್ನು ಖಾಲಿ ಮಾಡಿಸಲು ಮುಂದಾಗಿದ್ದಾರೆ. ಅಧಿಕಾರಿಗಳ ಕ್ರೂರ ವರ್ತನೆ ವಿರುದ್ಧ ದಂಪತಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮನೆಯಲ್ಲಿರಲು ಅವಕಾಶ ಮಾಡಿಕೊಡುವಂತೆ ವೃದ್ಧ ದಂಪತಿ ಕಣ್ಣೀರಿಡುತ್ತಿದೆ. ಮನೆಯಲ್ಲಿ ಸಾಮಗ್ರಿಗಳಿದ್ದು ಉಟ್ಟ ಬಟ್ಟೆಯಲ್ಲೇ ದಂಪತಿ ಮನೆ ಹೊರಗೆ ಕುಳಿತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.