ETV Bharat / state

ಕೊರೊನಾ ವೈರಸ್​​ಗೆ ಡೋಂಟ್​ ಕೇರ್​.. ಸಂಸದರೇ ಹಿಂಗಾದ್ರೆ ಹೆಂಗೆ! - ಚಿಕ್ಕೋಡಿ ಸಂಸದ ಅಣ್ಣಸಾಬ ಜೊಲ್ಲೆ

ಕೋಕಟನೂರ ಗ್ರಾಮ ಪಂಚಾಯತ್​ ಕಚೇರಿಯಲ್ಲಿ ಅಥಣಿ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯತ್​ ಸದ್ಯಸರು, ಆಶಾ ಕಾರ್ಯಕರ್ತರ ಸಭೆಯಲ್ಲಿ ಸಂಸದ ಅಣ್ಣಸಾಬ ಜೊಲ್ಲೆ ಹಾಗೂ ಅಧಿಕಾರಿಗಳು ಸಾಮಾಜಿಕ ಅಂತರ ಮರೆತು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

mp-who-participated-in-meeting-in-between-covid-pandemic
ಅಂತರ ಮರೆತು ಸಭೆಯಲ್ಲಿ ಭಾಗಿಯಾದ ಸಂಸದರು
author img

By

Published : May 23, 2021, 8:24 PM IST

ಅಥಣಿ (ಬೆಳಗಾವಿ): ಬೆಳಗಾವಿ ಜಿಲ್ಲೆಯಲ್ಲಿ 2 ದಿನಗಳ ಕಾಲ ಸೆಕ್ಷನ್​ 144 ಜಾರಿಯಲ್ಲಿದ್ದರೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಕೋಕಟನೂರ ಗ್ರಾಮದಲ್ಲಿ ಸಭೆ ನಡೆಸಿ ಎಡವಟ್ಟು ಮಾಡಿದ್ದಾರೆ.

ಕೋಕಟನೂರ ಗ್ರಾಮ ಪಂಚಾಯತ್​ ಕಚೇರಿಯಲ್ಲಿ ಅಥಣಿ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯತ್​ ಸದ್ಯಸರು, ಆಶಾ ಕಾರ್ಯಕರ್ತರ ಸಭೆಯಲ್ಲಿ ಸಂಸದ ಅಣ್ಣಸಾಬ ಜೊಲ್ಲೆ ಹಾಗೂ ಅಧಿಕಾರಿಗಳು ಸಾಮಾಜಿಕ ಅಂತರ ಮರೆತು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿರುವ ಘಟನೆ ನಡೆದಿದೆ.

ಅಂತರ ಮರೆತು ಸಭೆಯಲ್ಲಿ ಭಾಗಿಯಾದ ಸಂಸದರು

ಸಂಸದರ ಸಭೆ ಬಳಿಕ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದು, ಜನಪ್ರತಿನಿಧಿಗಳೇ ನಿಮಯ ಮುರಿದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.

ಸಭೆಯಲ್ಲಿ ಗ್ರಾ.ಪಂ ಸದಸ್ಯರಿಗೆ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ, ಹಾಗೂ ನಿಮ್ಮ ನಿಮ್ಮ ವಾರ್ಡ್​​ಗಳಲ್ಲಿ ಮನೆ ಮನೆಗೆ ತೆರಳಿ ಗ್ರಾಮಸ್ಥರ ಆರೋಗ್ಯ ವಿಚಾರಿಸುವಂತೆ ಚಿಕ್ಕೋಡಿ ಸಂಸದರು ಸಲಹೆ ನೀಡಿದ್ದಾರೆ.

ಹೋಮಿಯೋಪತಿ ಇಮ್ಯೂನ್ ಬೂಸ್ಟರ್ ವಿತರಣೆ

1,000 ಹೋಮಿಯೋಪತಿ ಇಮ್ಯೂನ್ ಬೂಸ್ಟರ್‌ಗಳನ್ನು ರಾಯಬಾಗ ಶಾಸಕ ದುರ್ಯೊಧನ ಐಹೊಳೆ ಮುಖಾಂತರ ರಾಯಬಾಗ ಮತಕ್ಷೇತ್ರದ ಜನತೆಗೆ ಹಂಚಲು ಹಸ್ತಾಂತರಿಸಿದರು.

ಹಸ್ತಾಂತರ ಬಳಿಕ ಮಾತನಾಡಿದ ಅವರು, ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶ್ರೀ ಕ್ಷೇತ್ರ ಕಣೇರಿ ಕಾಡಸಿದ್ದೇಶ್ವರ ಆಯುರ್ವೇದ ಮತ್ತು ಹೋಮಿಯೋಪತಿ ಘಟಕದಲ್ಲಿ ತಯಾರಿಸಲ್ಪಟ್ಟ, ಈ ಇಮ್ಯೂನ್ ಬೂಸ್ಟರ್​ 1 ಲೀಟರ್ ಫಿಲ್ಟರ್ ನೀರಿನಲ್ಲಿ 20 ಹನಿ ಇಮ್ಯೂನಿಟಿ ಬೂಸ್ಟರನ್ನು ಬೆರೆಸಿ 4 ಸಲ (ಬೆಳಗ್ಗೆ, ಸಂಜೆ ಮರುದಿನ ಮುಂಜಾನೆ, ಸಂಜೆ) ಸೇವನೆ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ ಎಂದು ಸಲಹೆ ನೀಡಿದರು.

ಓದಿ: ಹಾಸನದಲ್ಲಿ ಬರ್ಬರ ಕೊಲೆ: ರೌಡಿಶೀಟರ್​ ತಲೆ ಎರಡು ಹೋಳು ಮಾಡಿ ದುಷ್ಕರ್ಮಿಗಳು ಪರಾರಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.