ಬೆಳಗಾವಿ: ನೇಣು ಬಿಗಿದುಕೊಂಡು ತಾಯಿ, ಮಗ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ನಡೆದಿದೆ.
ಭಾರತಿ ಗರಾಣಿ(36), ಮಗ ಪ್ರಜ್ವಲ್(15) ನೇಣಿಗೆ ಶರಣಾದವರು. ಭಾರತಿ ಗರಾಣಿ ಅವರು ಹಲಗಾ ಗ್ರಾಮದಲ್ಲಿ ಬೇಕರಿ ನಡೆಸುತ್ತಿದ್ದರು. ಪ್ರಜ್ವಲ್ ಕೂಡ ಬೇಕರಿ ಕೆಲಸಕ್ಕೆ ತಾಯಿಗೆ ನೆರವಾಗುತ್ತಿದ್ದನು. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರ ಶವಗಳನ್ನು ಹಿರೇಬಾಗೇವಾಡಿ ಶವಾಗಾರಕ್ಕೆ ಹಸ್ತಾಂತರ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಹಸ್ತಾಂತರ ಮಾಡಲಾಗುತ್ತದೆ.