ETV Bharat / state

ಬರಕ್ಕೆ ಬೇಸತ್ತು ಗುಳೆ ಹೋದ ರೈತನ ಮಗ ಮೊಸಳೆ ಬಾಯಿಗೆ ಸಿಕ್ಕಿ ಸಾವು - kannada news

ಬರಗಾಲದ ಬವಣೆಯಿಂದ ಜೀವನ ಸಾಗಿಸಲು ಊರು ಬಿಟ್ಟು ಹೋಗಿ ಕೆಲಸ ಮಾಡುತ್ತಿದ್ದ ರೈತನ ಮಗ ಮೊಸಳೆ ದಾಳಿಗೆ ಬಲಿಯಾಗಿದ್ದಾನೆ.

ಮೊಸಳೆ ದಾಳಿಗೆ ಬಾಲಕ ಬಲಿ
author img

By

Published : May 17, 2019, 8:19 PM IST

ಚಿಕ್ಕೋಡಿ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಭೀಕರ ಬರಗಾಲವಿದ್ದು, ಜನ ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಗೆ ಗುಳೆ ಹೋಗಿದ್ದಾರೆ. ಸಾಂಗಲಿ ಪಟ್ಟಣ ಸಮೀಪದ ಮೌಜೆ ಡಿಗ್ರಜ ಗ್ರಾಮದಲ್ಲಿ ಕೆಲಸ ಮಾಡಿ ಕೃಷ್ಣಾ ತೀರಕ್ಕೆ ಸ್ನಾನಕ್ಕೆ ಹೋದಾಗ ಮೊಸಳೆ ದಾಳಿಗೆ ಒಳಗಾಗಿ ಬಾಲಕನೋರ್ವ ಮೃತಪಟ್ಟ ಘಟನೆ ನಡೆದಿದೆ.

ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾಗಿದ್ದು, ಜನರು ಕೆಲಸವಿಲ್ಲದೆ ಸಾಂಗಲಿ, ಸಾತಾರಾ, ಕೊಲ್ಲಾಪುರ ಜಿಲ್ಲೆಗಳತ್ತ ಮುಖ ಮಾಡಿದ್ದಾರೆ. ಇಂಡಿ ತಾಲೂಕಿನ ನಿಂಬಾಳ ಆರ್.ಎಸ್.ಗ್ರಾಮದ ಮಾರುತಿ ಜಾಧವ್ ಎಂಬುವವರು ತಮ್ಮ ಕುಟುಂಬದೊಂದಿಗೆ ಗುಳೆ ಹೋಗಿದ್ದು, ಇಟ್ಟಗೆ ಕೂಲಿ ಕೆಲಸ ಮಾಡುತ್ತಿದ್ದರು. ಶಾಲೆಗೆ ರಜೆ ಇರುವುದರಿಂದ ಮಗನಾದ ಆಕಾಶ (12) ಕೂಡಾ ತೆರಳಿದ್ದು, ಎಂದಿನಂತೆ ಸ್ನಾನ ಮಾಡಲು ನದಿ ತೀರಕ್ಕೆ ಹೋಗಿದ್ದಾನೆ.

ಬಾಲಕ ನದಿಗೆ ಹೋದಾಗ ಮೊಸಳೆ ದಾಳಿ ಮಾಡಿ ಬಾಲಕನನ್ನು ನೀರಿನಲ್ಲಿ ಎಳೆದುಕೊಂಡು ಹೋಗಿದೆ. ಬಾಲಕನ ಚೀರಾಟದ ಶಬ್ದ ಕೇಳಿದ ನದಿ ತೀರದ ಜನರು ರಕ್ಷಣೆಗೆ ಮುಂದಾದರೂ ಕೂಡಾ ಮೊಸಳೆ ಬಾಲಕನನ್ನು ನದಿ ಆಳಕ್ಕೆ ಎಳೆದುಕೊಂಡು ಹೊಗಿದೆ. ಮಹಾರಾಷ್ಟ್ರದ ಹೆಲ್ಪ್​​ಲೈನ್ ಟೀಂ ಮತ್ತು ಅರಣ್ಯ ಇಲಾಖೆಯವರ ಸುದೀರ್ಘ ಕಾರ್ಯಾಚರಣೆಯ ನಂತರ ಬಾಲಕನ ಮೃತದೇಹವನ್ನು ಹೊರ ತೆಗೆಯಲಾಯಿತು. ಘಟನೆ ಕುರಿತು ಸಾಂಗಲಿ ಗ್ರಾಮೀಣ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಬರಗಾಲ ತತ್ತರದಿಂದ ಗೂಳೆ ಹೋದ ರೈತನ ಮಗ ಮೊಸಳೆ ಬಾಯಿಗೆ ಸಿಕ್ಕಿ ಸಾವು
Body:
ಚಿಕ್ಕೋಡಿ :

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಭೀಕರ ಬರಗಾಲವಿದ್ದು ಜನ ಹೊಟ್ಟೆ ಹಾಗೂ ಬಟ್ಟೆಗಾಗಿ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಗೆ ಗುಳೆ ಹೋಗಿದ್ದಾರೆ. ಸಾಂಗಲಿ ಪಟ್ಟಣದ ಹತ್ತಿರವಿರುವ ಮೌಜೆ ಡಿಗ್ರಜ ಗ್ರಾಮದಲ್ಲಿ ಕೆಲಸ ಮಾಡಿ ಕೃಷ್ಣಾ ತೀರಕ್ಕೆ ಸ್ನಾನಕ್ಕೆ ಹೋದಾಗ ಮೊಸಳೆ ದಾಳಿಗೆ ಒಳಗಾಗಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಆರ್.ಎಸ್ ಗ್ರಾಮದ ಆಕಾಶ ಮಾರುತಿ ಜಾಧವ (12) ಮೃತಪಟ್ಟಿದ್ದಾನೆ. 

ಘಟನೆಯ ವಿವರ :

ಇಂಡಿ ತಾಲೂಕಿನಲ್ಲಿ ಭೀಕರ ಬರಗಾಲವಿದ್ದು ಕುಡಿಯಲು ನೀರಿಲ್ಲ. ಜನರಿಗೆ ಕೆಲಸವಿಲ್ಲ, ಇಂತಹ ಪರಿಸ್ಥಿತಿ ಬಂದಾಗ ಈ ಭಾಗದ ಜನರು ಸಾಂಗಲಿ, ಸಾತಾರಾ, ಕೊಲ್ಹಾಪೂರ ಜಿಲ್ಲೆಯಲ್ಲಿ ಕೆಲಸಕ್ಕೆ ಹೋಗುತ್ತಾರೆ. ಅದರಂತೆ ಇಂಡಿ ತಾಲೂಕಿನ ನಿಂಬಾಳ ಆರ್.ಎಸ್ ಗ್ರಾಮದ ಮಾರುತಿ ಜಾಧವ ತಮ್ಮ ಕುಟುಂಬ ಸಮೇತ ಇಟ್ಟಿಗೆ ಮಾಡಲು ಸಾಂಗಲಿ ಜಿಲ್ಲೆಯ ಡಿಗ್ರಜ ಗ್ರಾಮಕ್ಕೆ ಹೋಗಿ ಬಾಳಾಸಾಬ ಲಾಂಡೆ ಎಂಬ ರೈತನ ತೋಟದಲ್ಲಿ ಇಟ್ಟಗೆ ಕೂಲಿ ಕೆಲಸ ಮಾಡುತ್ತಿದ್ದರು.

ಬೆಳಗ್ಗಿನಿಂದ ಸಾಯಂಕಾಲದವರೆಗೆ ಕೆಲಸ ಮಾಡಿ ಮದ್ಯಾಹ್ನ ಬಿಸಿಲಿನಲ್ಲಿ ಕೃಷ್ಣಾ ತೀರದಲ್ಲಿ ದಿನನಿತ್ಯ ಸ್ನಾನ ಮಾಡುತ್ತಿದ್ದರು. ಮಾರುತಿ ಜಾಧವ ಅವರ ಮಗನಾದ ಆಕಾಶ ಜಾಧವ ನಿಂಬಾಳ ಆರ್.ಎಸ್ ಗ್ರಾಮದ ಶಾಲೆಯ ಪರೀಕ್ಷೆ ಮುಗಿಸಿ ತಾಯಿ ತಂದೆಯ ಕಡೆಗೆ ಬಂದಿದ್ದ. ಮದ್ಯಾಹ್ನ ಸ್ನಾನ ಮಾಡಲು ಹೋದಾಗ ಮೊಸಳೆ ದಾಳಿ ಮಾಡಿದ ನಂತರ ನೀರಿನಲ್ಲಿ ಎಳೆದುಕೊಂಡು ಹೋಗಿದೆ.

ನದಿ ತೀರದಲ್ಲಿರುವ ಜನರು ಚಿರಾಡಿದ ನಂತರ ಅಲ್ಲಿನ ಜನರು ಸೇರಿ, ದೋಣಿಯ ಮುಖಾಂತರ ಮಗುವನ್ನು ಹುಡುಕಾಟ ಪ್ರಾರಂಭಿಸಿದರು. ಆದರೆ, ಆ ಮಗು ಸಿಗಲಿಲ್ಲ. ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಹಾರಾಷ್ಟ್ರದ ಕುಪವಾಡ ಗ್ರಾಮದ ಹೆಲ್ಪಲೈನ ಟೀಮನಿಂದ ಅವಿನಾಶ ಪವಾರ, ಜಮೀರ ಬೋರಗಾಂವೆ, ಮಯೂರ ಶಿತೋಳೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಯಾದ ಆರ್.ಎಸ್.ಪಾಟೀಲ, ಮನೋಜ ಕೋಳಿ ಇವರು 24 ಗಂಟೆ ನೀರಿನಲ್ಲಿ ಶೋಧಕಾರ್ಯಾಚರಣೆ ನಡೆಸಿದರು. ಆನಂತರ ಸುಮಾರು ಒಂದು ಗಂಟೆಗೆ ಈ ಮಗುವನ್ನು ಮೃತಾವಸ್ಥೆಯಲ್ಲಿ ಹೊರತೆಗೆಯಲಾಯಿತು. 

ಘಟನಾ ಸ್ಥಳಕ್ಕೆ ಸಾಂಗಲಿ ಗ್ರಾಮೀಣ ಪೋಲಿಸ್ ಠಾಣೆಯ ಚಂದ್ರಕಾಂತ ಬೇಂದ್ರೆ ಇವರು ತಮ್ಮ ತಂಡದ ಜೊತೆ ಘಟನಾ ಸ್ಥಳಕ್ಕೆ ಬೇಟಿ ನೀಡಿದರು

ಈ ಕುರಿತು ಸಾಂಗಲಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪೋಟೋ : ಆಕಾಶ ಜಾಧವ ಭಾವಚಿತ್ರ

ಸರ್ ಈ ಸುದ್ದಿ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಗೂ ಸಂಭಂದಿಸಿರುತ್ತದೆ.

 Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.