ETV Bharat / state

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಸವ ತತ್ವ ಪಸರಿಸಿದ್ದು ಮೋದಿ: ಪ್ರಭಾಕರ ಕೋರೆ - undefined

ಪ್ರಧಾನಿ ನರೇಂದ್ರ ಮೋದಿಯವರು ಇಂಗ್ಲೆಂಡ್​ನಲ್ಲಿ ಬಸವೇಶ್ವರ ಪುತ್ಥಳಿ ಉದ್ಘಾಟಿಸುವ ಮೂಲಕ ಜಗತ್ತಿಗೆ ಅವರ ತತ್ವ ಮತ್ತು ಆದರ್ಶಗಳನ್ನು ಪರಿಚಯಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು. ಬಸವಣ್ಣ ದೇಶದ ಮೊದಲ ಜಾತ್ಯಾತೀತ ವ್ಯಕ್ತಿ ಎಂದು ಕೋರೆ ಬಣ್ಣಿಸಿದರು.

ಪ್ರಭಾಕರ ಕೋರೆ
author img

By

Published : May 7, 2019, 2:52 PM IST

ಬೆಳಗಾವಿ: ಬಸವಣ್ಣವರನ್ನು ಕೇವಲ‌ ನಮ್ಮ ಮನೆಗೆ ಮಾತ್ರ ಸೀಮಿತ ಮಾಡಿಕೊಂಡಿದ್ದೇವೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಇಂಗ್ಲೆಂಡ್​ನಲ್ಲಿ ಬಸವೇಶ್ವರ ಪುತ್ಥಳಿ ಉದ್ಘಾಟಿಸುವ ಮೂಲಕ ಜಗತ್ತಿಗೆ ಅವರ ತತ್ವ ಮತ್ತು ಆದರ್ಶಗಳನ್ನು ಪರಿಚಯ ಮಾಡಿಕೊಟ್ಟಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು.

ಬಸವೇಶ್ವರ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣ ಓರ್ವ ಮಹಾನ್ ಮಾನವತಾವಾದಿ. ಸಮಾಜದಲ್ಲಿದ್ದ ಅನಿಷ್ಟಗಳನ್ನು ನಿರ್ನಾಮ ಮಾಡಲು ಶ್ರಮಿಸಿದವರು. ಇಂತಹ ಮಹಾನ್ ವ್ಯಕ್ತಿಯ ತತ್ವಗಳು ಎಲ್ಲರಿಗೂ ಮುಟ್ಟಬೇಕು ಎಂದು ಆಶಿಸಿದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅಭಿಪ್ರಾಯ

ಬಸವಣ್ಣನವರು ಕೇವಲ ಒಂದು ಜಾತಿಗೆ ಸೀಮಿತವಲ್ಲ. ಅಖಂಡ ಮಾನವ ಕುಲವನ್ನು ಉದ್ಧರಿಸಲು ಜನ್ಮತಾಳಿದ್ದ ವ್ಯಕ್ತಿ ಅವರು. ನಮ್ಮಲ್ಲಿ ಬಡತನ ಇನ್ನೂ ಬಹಳಷ್ಟಿದೆ. ಬಡತನದಿಂದ ಜನರು ಬೇರೆ ಧರ್ಮಕ್ಕೆ ಸೇರುವಂತಹ ಸ್ಥಿತಿ ನಮ್ಮ ಕಣ್ಮುಂದಿದೆ. ಇದು ಬದಲಾಗಬೇಕು. ಎಲ್ಲರೂ ಉತ್ತಮ ಜೀವನ ನಡೆಸುವಂತಾಗಬೇಕು ಎಂದು ಕೋರೆ ತಿಳಿಸಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಬಸವತತ್ವ ಪಸರಿಸಿದ್ದು ಪ್ರಧಾನಿ ಮೋದಿ : ಪ್ರಭಾಕರ್ ಕೋರೆ ಅಭಿಮತ ಬೆಳಗಾವಿ : ಬಸವಣ್ಣವರನ್ನು ಕೇವಲ‌ ನಮ್ಮ ಮನೆಗೆ ಮಾತ್ರ ಸೀಮಿತ ಮಾಡಿಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ಇಂಗ್ಲೆಂಡ್ ನಲ್ಲಿ ಬಸವೇಶ್ವರ ಪುತ್ತಳಿ ಉದ್ಘಾಟನೆ ಮಾಡುವ ಮೂಲಕ ಜಗತ್ತಿಗೆ ಅವರ ತತ್ವ ಮತ್ತು ಆದರ್ಶಗಳ ಪರಿಚಯ ಮಾಡಿಕೊಟ್ಟಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಅಭಿಪ್ರಾಯಪಟ್ಟರು. ಬಸವೇಶ್ವರ ಜಯಂತಿ ಅಂಗವಾಗಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಭಾಕರ್ ಕೋರೆ. ಬಸವಣ್ಣ ಒಬ್ಬ ಮಹಾನ್ ಮಾನವತಾವಾದಿ ಅವರು ಸಮಾಜದಲ್ಲಿದ್ದ ಅನಿಷ್ಟಗಳನ್ನು ನಿರ್ನಾಮ ಮಾಡಲು ಶ್ರಮಿಸಿದವರು. ಇಂತಹ ಮಹಾನ್ ವ್ಯಕ್ತಿಯನ್ನು ಕೇವಲ‌ ನಮ್ಮ‌ ಮನೆಗೆ ಸೀಮಿತ ಮಾಡಿಕೊಳ್ಳುತ್ತಿದ್ದೇವೆ. ಇದು ಬದಲಾಗಬೇಕು ಬಸವವಣ್ಣವರ ತತ್ವಗಳು ಎಲ್ಲರಿಗು ಮುಟ್ಟಬೇಕು ಎಂದರು. ಬಸವಣ್ಣನವರು ಕೇವಲ ಒಂದು ಜಾತಿಗೆ ಸೀಮಿತವಲ್ಲ ಅಖಂಡ ಮಾನವ ಕುಲವನ್ನು ಉದ್ದರಿಸಲು ಜನ್ಮತಾಳಿದ ವ್ಯಕ್ತಿ ಇವರು. ನಮ್ಮಲ್ಲಿ ಬಡತನ ಇನ್ನೂ ಬಹಳಷ್ಟಿದೆ. ಬಡತನದಿಂದ ಜನರು ಬೇರೆ ಧರ್ಮಕ್ಕೆ ಸೇರುವಂತಹ ಪರಿಸ್ಥಿತಿ ನಮ್ಮ ಕಣ್ಮುಂದಿದೆ. ಇದು ಬದಲಾಗಬೇಕು ಎಲ್ಲರು ಉತ್ತಮ ಜೀವನ ನಡೆಸುವಂತಾಗಬೇಕು ಎಂದು ಪ್ರಭಾಕರ್ ಕೋರೆ ಹೇಳಿದರು. ವಿನಾಯಕ ಮಠಪತಿ ಬೆಳಗಾವಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.