ಚಿಕ್ಕೋಡಿ : ಉಡ್ತಾ ಪಂಜಾಬ್ ತರ ಉಡ್ತಾ ಕರ್ನಾಟಕ ಆಗಬಾರದು. ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡಬೇಕೆಂದು ಸಿಎಂ ಯಡಿಯೂರಪ್ಪನವರು ಕರೆ ನೀಡಿದ್ದಾರೆ. ಸರ್ಕಾರ ಅಕ್ರಮ ಎಸಗುವವರನ್ನು ಮಟ್ಟ ಹಾಕಲು ಶ್ರಮಿಸುತ್ತಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಪಟ್ಟಣದಲ್ಲಿ ಮಾತನಾಡಿ, ಡಿ.ಜೆ ಹಳ್ಳಿ ಗಲಭೆ, ಡ್ರಗ್ಸ್ ದಂಧೆ ಇವುಗಳೆಲ್ಲ ಮರುಕಳಿಸಬಾರದು ಎಂಬುವುದು ಸರ್ಕಾರದ ಆಶಯವಾಗಿದೆ. ಉಡ್ತಾ ಪಂಜಾಬ್ ಆದಂತೆ ಉಡ್ತಾ ಕರ್ನಾಟಕ ಆಗಬಾರದು. ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ದುಷ್ಚಟಗಳಿಂದ ದೂರವಿರಬೇಕು. ಜನ್ಮ ಕೊಟ್ಟ ತಂದೆ, ತಾಯಿಗೆ ಮತ್ತು ನಾಡಿಗೆ ಜವಾಬ್ದಾರಿಯುತ ನಾಗರಿಕರಾಗಿ ಯುವ ಜನಾಂಗ ರೂಪಗೊಳ್ಳಬೇಕು ಎಂದರು.
ಸೆ. 21 ರಿಂದ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಕೋವಿಡ್ನಿಂದ ಹಿನ್ನೆಡೆಯಾದ ಅಭಿವೃದ್ದಿ ಕಾರ್ಯಗಳಿಗೆ ಸರ್ಕಾರ ಮತ್ತೆ ಚಾಲನೆ ನೀಡಲಿದೆ ಎಂದು ತಿಳಿಸಿದರು.