ಬೆಳಗಾವಿ: ಜಾರಕಿಹೊಳಿ ಕುಟುಂಬದ ವಿರುದ್ಧ ಷಡ್ಯಂತ್ರ ಮೊದಲಿನಿಂದ ಮಾಡಿದ್ದಾರೆ. ಚುನಾವಣೆ 6 ತಿಂಗಳು ಇರುವಾಗ ಮತ್ತೆ ಜೋರಾಗಿ ನಡೆಯುತ್ತದೆ. ಸಿಡಿ ಷಡ್ಯಂತ್ರ ಜಗತ್ತು ಜಾಹೀರಾಗಿದೆ ಎಂದು ಎಂಎಲ್ಸಿ ಲಖನ್ ಜಾರಕಿಹೊಳಿ ಅವರು ಹೇಳಿದರು. ಅವರು ಗೋಕಾಕ್ ನಗರದಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಪ್ರಕರಣ ಕುರಿತು ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿ ಟು ಕನಕಪುರವರೆಗೆ ಸಿಡಿ ಕಾರ್ಖಾನೆ ಇದೆ. 2000 ಇಸವಿಯಿಂದ ಸಿಡಿ ಫ್ಯಾಕ್ಟರಿ ಕೆಲಸ ಮಾಡುತ್ತಿದೆ. ಸಿಬಿಐ ತನಿಖೆ ಆದರೆ ಎಲ್ಲವೂ ಬಹಿರಂಗ ಆಗಲಿದೆ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಹೆಬ್ಬಾಳ್ಕರ್ಗೆ ರಮೇಶ್ ಜಾರಕಿಹೊಳಿ ಬಳಸಿದ ಹೆಸರು ಕುರಿತು ರಿಯಾಕ್ಷನ್: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬೇರೆ ಹೆಸರನ್ನು ಬಳಸಿದ್ದ ಸಹೋದರ ರಮೇಶ್ ಜಾರಕಿಹೊಳಿ ಹೇಳಿಕೆ ಕುರಿತು ಮಾತನಾಡಿ, ಅದೊಂದೇ ಅಲ್ಲ, ಇನ್ನೂ ಮೂರು ಹೆಸರುಗಳಿವೆ ಅಂತಾ ಜನರು ಮಾತನಾಡುತ್ತಾರೆ. ಹಾಗೆ ಯಾಕೆ ಜನ ಮಾತನಾಡುತ್ತಾರೆ ಯಾರಿಗೆ ಏನ್ ಗೊತ್ತು ಎಂದು ಲೇವಡಿ ಮಾಡಿದರು.
ಅವರು ಶಾಸಕರಾದ ಮೇಲೆ ಸಿದ್ದರಾಮಯ್ಯ ಮಾಜಿ ಸಿಎಂ ಆದರು. ಕುಮಾರಸ್ವಾಮಿ ಸರ್ಕಾರ ಅರ್ಧದಲ್ಲೇ ಹೋಯಿತು ಎಂದು ಶಾಸಕಿ ಹೆಬ್ಬಾಳ್ಕರ್ ಅವರ ಹೆಸರನ್ನು ಹೇಳದೇ ಲಖನ್ ಜಾರಕಿಹೊಳಿ ಕಿಚಾಯಿಸಿದರು.
ಇದನ್ನೂ ಓದಿ : 'ಜೀವಂತ ಇದ್ದಾಗಲೇ ಬಿಜೆಪಿಗೆ ಸೇರಿಸೋಲ್ಲ': ಸತ್ರೂ ಬಿಜೆಪಿ ಸೇರಲ್ಲ ಎಂದ ಸಿದ್ದರಾಮಯ್ಯಗೆ ಈಶ್ವರಪ್ಪ ತಿರುಗೇಟು
ಡಿಕೆಶಿ, ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಾನು ಕಾಂಗ್ರೆಸ್ನಿಂದ ದೂರವಾದೆ: ನಾನು ಡಿ ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಆದಮೇಲೆ ಕಾಂಗ್ರೆಸ್ನಿಂದ ದೂರವಾದೆ. ಡಿ ಕೆ ಅಂದರೆ ಕರ್ನಾಟಕ ಪ್ರದೇಶ ಸಿಡಿ ಕಂಪನಿ ಅಧ್ಯಕ್ಷ ಎಂದು ವ್ಯಂಗ್ಯವಾಡಿದ ಜೊತೆಗೆ ಆಲ್ಟೋ 800 ನಿಂದ ಬಿಎಂಡ್ಲ್ಯೂವರೆಗೆ ಸಂಪರ್ಕ ಇದೆ. ಬೆಳಗಾವಿಯಲ್ಲಿನ ಸಿಡಿ ಫ್ಯಾಕ್ಟರಿ ಕನಕಪುರದವರೆಗೆ ಇದೆ. ಓಪನ್ ಆಗಿ ಏನೂ ಹೇಳಲ್ಲ ಎಂದರು.
ರಮೇಶ್ ಜಾರಕಿಹೊಳಿಗೆ ಶಕ್ತಿ: ರಮೇಶ್ ಜಾರಕಿಹೊಳಿ ಅವರಿಗೆ ಶಕ್ತಿ ಇದೆ. ಬಹಿರಂಗವಾಗಿ ಮಾತನಾಡಿದ್ದಾರೆ. ಧೈರ್ಯ ಇಲ್ಲದೇ ಇರೋರು ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಒಂದು ವರ್ಷದಿಂದ ನಮ್ಮ ಬೇಡಿಕೆ ಇದೆ. ಸಿಬಿಐ ವಹಿಸಬೇಕು ಅಂತ. ಈ ಸಿಡಿ ಜಾಲದಿಂದ ಅನೇಕರು ನೊಂದು, ಬೆಂದು ಹೋಗಿದ್ದಾರೆ. ಬೆಂಗಳೂರು, ಮುಂಬೈ, ಕೇರಳದವರೆಗೆ ಲಿಂಕ್ ಹೊಂದಿದ್ದಾರೆ ಎಂದು ಲಖನ್ ಜಾರಕಿಹೊಳಿ ಆರೋಪಿಸಿದರು.
ಇದನ್ನೂ ಓದಿ : ಡಿಕೆಶಿ ಕೊತ್ವಾಲ್ ಶಿಷ್ಯ, ಜೈಲಿಗೆ ಹೋಗಿ ಬಂದವರು: ಶಾಸಕ ರೇಣುಕಾಚಾರ್ಯ
ಸಿಬಿಐಗೆ ಈ ಪ್ರಕರಣದ ನೀಡುವಂತೆ ಹೇಳಿದ್ದೇನೆ: ಈಗಾಗಲೇ ನನ್ನ ಸಹೋದರನಿಗೆ ದಾಖಲೆ ಬಿಡುಗಡೆ ಮಾಡಬೇಡಿ ಸಿಬಿಐಗೆ ಕೊಡಿ ಎಂದು ಹೇಳಿದ್ದೇನೆ. ಬೇರೆಯವರಿಗೆ ಈ ರೀತಿ ಆಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಕುಟುಂಬಸ್ಥರು, ಕ್ಷೇತ್ರದ ಜನ ಬೆನ್ನಿಗೆ ನಿಂತಿದ್ದಾರೆ ಎಂದು ಹೇಳಿದರು.
ಸಿಬಿಐ ತನಿಖೆ ಆದರೆ ಲಂಚ, ಮಂಚ ಎಲ್ಲ ಹೊರಗೆ ಬರಲಿದೆ. ಯಾರು ಎಲ್ಲಿ ಪ್ಯಾಂಟ್ ಬಿಚ್ಚುತ್ತಾರೆ, ಲುಂಗಿ ಬಿಚ್ಚುತ್ತಾರೆ ಅನ್ನೋದು ಗೊತ್ತಾಗಲಿದೆ ಎಂದು ಸಿಬಿಐ ತನಿಖೆಗೆ ಸರ್ಕಾರಕ್ಕೆ ಒತ್ತಾಯಿಸಿದರು.
ಇದನ್ನೂ ಓದಿ : ಸಿಡಿ ಬಾಂಬ್ ಸಿಡಿಸಿದ್ದ ಜಾರಕಿಹೊಳಿ.. ಸಿಎಂ ಜೊತೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರತ್ಯಕ್ಷ