ETV Bharat / state

ಸಚಿವ ಸ್ಥಾನ ಕೊಡ್ರಿ ಅಂತಾ ನಾನು ಭಿಕ್ಷೆ ಬೇಡುವುದಿಲ್ಲ: ಶಾಸಕ ಶ್ರೀಮಂತ ಪಾಟೀಲ್..

ಸಚಿವ ಸಂಪುಟ ವಿಸ್ತರಣೆ, ಪುನರ್​​ರಚನೆ ಎಂಬುದು ನನಗೆ ಗೊತ್ತಿಲ್ಲ. ಹೈಕಮಾಂಡ್​ ಸ್ಥಾನಮಾನ ಕೊಟ್ಟರೆ ಮಾಡುತ್ತೇನೆ. ಇಲ್ಲವಾದರೆ ನಾನು ಯಾರ ಹತ್ತಿರನೂ ಮಂತ್ರಿ ಸ್ಥಾನದ ಬಗ್ಗೆ ಕೇಳುವುದಿಲ್ಲ..

mla-shrimantha-patil
ಶಾಸಕ ಶ್ರೀಮಂತ ಪಾಟೀಲ್
author img

By

Published : Feb 8, 2022, 8:19 PM IST

ಅಥಣಿ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದೆಹಲಿ ಪ್ರವಾಸ ಕೈಗೊಂಡ ಹಿನ್ನೆಲೆ ಸಚಿವ ಸ್ಥಾನದ ಆಕಾಂಕ್ಷಿಗಳ ಆಲೋಚನೆ ಗರಿಗೆದರಿವೆ. ಆದರೆ, ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಅವರು ಸಚಿವ ಸ್ಥಾನಕ್ಕಾಗಿ ನಾನು ಭಿಕ್ಷೆ ಬೇಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಸಚಿವ ಸ್ಥಾನ ಆಕಾಂಕ್ಷೆ ಕುರಿತಂತೆ ಶಾಸಕ ಶ್ರೀಮಂತ ಪಾಟೀಲ್ ಮಾತನಾಡಿರುವುದು..

ಅವರು ಕಾಗವಾಡ ಪಟ್ಟಣದಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ, ಸಚಿವ ಸಂಪುಟ ವಿಸ್ತರಣೆ, ಪುನರ್​​ರಚನೆ ಎಂಬುದು ನನಗೆ ಗೊತ್ತಿಲ್ಲ. ಹೈಕಮಾಂಡ್​ ಸ್ಥಾನಮಾನ ಕೊಟ್ಟರೆ ಮಾಡುತ್ತೇನೆ. ಇಲ್ಲವಾದರೆ ನಾನು ಯಾರ ಹತ್ತಿರನೂ ಮಂತ್ರಿ ಸ್ಥಾನದ ಬಗ್ಗೆ ಕೇಳುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ಈಗಾಗಲೇ, ಆರು ತಿಂಗಳ ಹಿಂದೆ ಹೈಕಮಾಂಡ್ ಜೊತೆ ಮಾತನಾಡಲಾಗಿದೆ. ಜವಾಬ್ದಾರಿ ಕೊಟ್ಟರೆ ರಾಜ್ಯದಲ್ಲಿ ಒಳ್ಳೆಯ ಕಾರ್ಯವನ್ನು ಮಾಡುತ್ತೇನೆ. ಇಲ್ಲವಾದರೆ ಏನೂ ಬೇಡ ಎಂದು ಬೇಸರ ವ್ಯಕ್ತಪಡಿಸಿದರು.

ಹಿಜಾಬ್-ಕೇಸರಿ ಶಾಲು ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಸದ್ಯ ವಿಚಾರ ನ್ಯಾಯಾಲಯದಲ್ಲಿದೆ. ನಾವು ಏನೇ ಮಾತನಾಡಿದರೂ ಅದು ತಪ್ಪಾಗುತ್ತದೆ. ನ್ಯಾಯಾಲಯ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.

ಓದಿ: ಹಿಜಾಬನ್ನೇ ಶಾಲಾ ಕಾಲೇಜುಗಳಲ್ಲಿ ಯೂನಿಫಾರಂ ಮಾಡಿ : ಸಿ ಟಿ ರವಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.