ETV Bharat / state

ಆಸ್ಪತ್ರೆಯಲ್ಲಿ ನರ್ಸ್​ಗಳು ಅಜ್ಜ ಅಂದಿದ್ದಕ್ಕೆ ಮಾನಸಿಕವಾಗಿದ್ದೆ : ಶಾಸಕ ರಾಜು ಕಾಗೆ - MLA Raju Kage statement

ನಾನು ಯುವಕರಂತೆ ಹುಮ್ಮಸ್ಸಿನಿಂದ ಇದ್ದೇನೆ. ಈಗಿನ ಯುವಕರು ನನ್ನನ್ನು ನೋಡಿ ಕಲಿಯಬೇಕು. ಆಸ್ಪತ್ರೆಯಲ್ಲಿ ನರ್ಸ್​ಗಳು ನನ್ನನ್ನು ಅಜ್ಜ ಅಂದಿದ್ದಕ್ಕೆ ಮಾನಸಿಕವಾಗಿದ್ದೆ ಎಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.

mla-raju-kage-spoke-at-belagavi
ಆಸ್ಪತ್ರೆಯಲ್ಲಿ ನರ್ಸ್​ಗಳು ಅಜ್ಜ ಅಂದಿದ್ದಕ್ಕೆ ಮಾನಸಿಕವಾಗಿದ್ದೆ : ಶಾಸಕ ರಾಜು ಕಾಗೆ
author img

By ETV Bharat Karnataka Team

Published : Oct 22, 2023, 1:35 PM IST

ಆಸ್ಪತ್ರೆಯಲ್ಲಿ ನರ್ಸ್​ಗಳು ಅಜ್ಜ ಅಂದಿದ್ದಕ್ಕೆ ಮಾನಸಿಕವಾಗಿದ್ದೆ : ಶಾಸಕ ರಾಜು ಕಾಗೆ

ಚಿಕ್ಕೋಡಿ (ಬೆಳಗಾವಿ) : ನನ್ನನ್ನು ಅಜ್ಜ ಎಂದು ಕರೆಯುದಕ್ಕೆ ಬೇಸರ ಇದೆ. ನನ್ನ ತಲೆ ಕೂದಲು ಮಾತ್ರ ಬೆಳ್ಳಗಾಗಿವೆ. ಆದರೆ ನಾನು ಇನ್ನೂ ಯುವಕರಂತೆ ಹುಮ್ಮಸ್ಸಿನಿಂದ ಇದ್ದೇನೆ. ಈ ವಯಸ್ಸಿನಲ್ಲಿ ನಾನು ಇಷ್ಟು ಹುಮ್ಮಸ್ಸಿನಿಂದಿರುವುದನ್ನು ಈಗಿನ ಯುವಕರು ನನ್ನನ್ನು ನೋಡಿ ಕಲಿಯಬೇಕು ಎಂದು ಶಾಸಕ ರಾಜು ಕಾಗೆ ಹೇಳಿದರು.

ಶನಿವಾರ ದಸರಾ ಹಬ್ಬದ ಪ್ರಯುಕ್ತ ಅಥಣಿ ತಾಲೂಕಿನ ಪಿಕೆ ನಾಗನೂರು ಗ್ರಾಮದಲ್ಲಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಶಾಸಕ ರಾಜೇಶ್​ ಕಾಗೆ ಅವರು ಭಾಗವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ನನಗೆ ಅಪೆಂಡಿಕ್ಸ್ ಆಪರೇಷನ್ ಆಗಿತ್ತು. ವೈದ್ಯರು ಆಗಾಗ ಬಂದು ನನ್ನ ಆರೋಗ್ಯವನ್ನು ವಿಚಾರಿಸುತ್ತಿದ್ದರು. ಅದೇ ಆಸ್ಪತ್ರೆಯಲ್ಲಿ ಚೆಂದ ಚೆಂದದ ನರ್ಸ್​ಗಳು ಅಜ್ಜ ನಿಮ್ಮ ಆರೋಗ್ಯ ಹೇಗಿದೆ ಎಂದು ಆರೋಗ್ಯ ವಿಚಾರಿಸುತ್ತಿದ್ದರು. ಚೆಂದದ ಹುಡುಗಿಯರು ನನ್ನನ್ನು ಅಜ್ಜ ಅನ್ನುತ್ತಿದ್ದರು. ನಾನು ಆರಾಮಾಗಿದ್ದರೂ ನರ್ಸ್​​ಗಳು ನನ್ನನ್ನು ಅಜ್ಜ ಅನ್ನುವುದಕ್ಕೆ ಮಾನಸಿಕವಾಗಿದ್ದೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶಾಸಕ ರಾಜು ಕಾಗೆ ಹಿರಿಯರು ಎಂದು ಭಾಷಣದಲ್ಲಿ ಉಲ್ಲೇಖಿಸಿದ್ದಕ್ಕೆ ಕಾಗವಾಡ ಶಾಸಕ ರಾಜು ಕಾಗೆ ಈ ಆಸ್ಪತ್ರೆಯ ಉದಾಹರಣೆ ನೀಡಿ ನೆರೆದವರನ್ನು ನಗೆಗಡಲಲ್ಲಿ ತೇಲಿಸಿದರು.

ಇದನ್ನೂ ಓದಿ : ನಾವು ವೆಸ್ಟ್​ಎಂಡ್ ಹೋಟೆಲ್​ನಲ್ಲಿ ಕೂತು ಸರ್ಕಾರ ನಡೆಸುತ್ತಿಲ್ಲ: ಹೆಚ್​ಡಿಕೆಗೆ ಸಿಎಂ ಗುದ್ದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.