ETV Bharat / state

ಕಾಂಗ್ರೆಸ್​ ಟೂಲ್ ಕಿಟ್ ಟೆರರಿಸಂಗೆ ಸಾಹಿತಿಗಳು ಒಳಗಾಗಬೇಡಿ: ಶಾಸಕ ಪಿ. ರಾಜೀವ್ - ಕಾಂಗ್ರೆಸ್ ವಿರುದ್ಧ ಪಿ ರಾಜೀವ್ ಆಕ್ರೋಶ

ಶಾಲಾ ಪಠ್ಯ ಬದಲಾವಣೆಗೆ ಕಾಂಗ್ರೆಸ್​ ವಿರೋಧಕ್ಕೆ ಸಂಬಂಧಿಸಿದಂತೆ ಶಾಸಕ ಪಿ. ರಾಜೀವ್​ ಕಾಂಗ್ರೆಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

MLA P Rajeev
ಶಾಸಕ ಪಿ ರಾಜೀವ್
author img

By

Published : Jun 1, 2022, 5:58 PM IST

ಬೆಳಗಾವಿ: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಇದೀಗ ಜನರನ್ನು ಉದ್ರೇಕಗೊಳಿಸುತ್ತಿದೆ‌. ಇದೊಂದು ಕಾಂಗ್ರೆಸ್‌ ಟೂಲ್ ಕಿಟ್​ ಟೆರರಿಸಂನ ಒಂದು ಭಾಗ ಎಂದು ಬಿಜೆಪಿ ರಾಜ್ಯ ವಕ್ತಾರ, ಕುಡಚಿ ಶಾಸಕ ಪಿ. ರಾಜೀವ್ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್​ ವಿರುದ್ಧ ಶಾಸಕ ಪಿ ರಾಜೀವ್ ಆರೋಪ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪಿ.ರಾಜೀವ್, ಕಾಂಗ್ರೆಸ್ ಜನರ ಭಾವನೆ ಉದ್ರೇಕಗೊಳಿಸಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಸಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ. ಜನರನ್ನು ಉದ್ರೇಕಗೊಳಿಸುತ್ತಿರುವ ಹಿನ್ನೆಲೆಯನ್ನು ನೋಡಿದರೆ ಕಾಂಗ್ರೆಸ್‌ ಟೂಲ್ ಕಿಟ್ ಟೆರರಿಸಂ ಮಾಡುತ್ತಿದೆ ಎನಿಸುತ್ತಿದೆ. ಟೂಲ್ ಕಿಟ್ ಅಂದ್ರೆ ಹಿಟ್ & ರನ್ ಸಂಸ್ಕೃತಿ ಕಾಂಗ್ರೆಸ್​ನಲ್ಲಿದೆ. ಮುಗ್ಧ ಜನರಲ್ಲಿ, ಸಾಹಿತಿಗಳಲ್ಲಿ ಉದ್ರೇಕಗೊಳಿಸುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕುತ್ತಿದೆ. ಇದೊಂದು ಕಾಂಗ್ರೆಸ್​ನ ಟೂಲ್ ಕಿಟ್ ಟೆರರಿಸಂ, ಇದಕ್ಕೆ ಸಾಹಿತಿಗಳು ಒಳಗಾಗಬಾರದು ಎಂದರು.

ಇದನ್ನೂ ಓದಿ: ಪಠ್ಯ ವಿಚಾರದಲ್ಲಿ ಸರ್ಕಾರ ಕಣ್ಮುಚ್ಚಿ ಕುಳಿತಿದೆಯೇ.. ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಕಿಡಿ

ದೇಶಕ್ಕೆ, ರಾಜ್ಯಕ್ಕೆ ಸಾಹಿತಿಗಳ ಕೊಡುಗೆ ಅಪಾರ‌. ಸಾಹಿತಿಗಳನ್ನು, ಚಿಂತಕರನ್ನು ಈ ನಾಡಿನ ಪ್ರತಿಯೊಬ್ಬರೂ ಗೌರವಿಸುತ್ತಾರೆ. ಸಾಹಿತಿಗಳು ಯಾವ ಸಣ್ಣ ತಪ್ಪನ್ನೂ ಒಪ್ಪಿಕೊಳ್ಳುವುದಿಲ್ಲ. ಆದರೆ ಕಾಂಗ್ರೆಸ್ ಟೂಲ್‌ಕಿಟ್ ಟೆರರಿಸಂನಲ್ಲಿ ಸಾಹಿತಿಗಳ ಸಂವೇದನಾಶೀಲತೆಯನ್ನು ಅಪಮೌಲ್ಯಗೊಳಿಸುವ ಕೆಲಸವನ್ನು ಮಾಡಲಾಗುತ್ತಿದೆ. ನೂರು ಸುಳ್ಳು ಹೇಳಿ ಅದನ್ನೇ ನಿಜವೆಂದು ತೋರಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಹೀಗಾಗಿ ರಾಜ್ಯದ, ದೇಶದ ಎಲ್ಲಾ ಸಾಹಿತಿಗಳು ಕಾಂಗ್ರೆಸ್​ನ ಟೂಲ್ ಕಿಟ್ ಟೆರರಿಸಂಗೆ ಒಳಗಾಗಬೇಡಿ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.