ಚಿಕ್ಕೋಡಿ : ಕೃಷ್ಣಾ ನದಿ ತೀರದಲ್ಲಿ ಈ ಬಾರಿ ಮತ್ತೆ ಪ್ರವಾಹ ಪರಿಸ್ಥಿತಿ ಉಂಟಾಗಬಹುದು ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ನದಿ ತೀರದಲ್ಲಿ ಈಗಾಗಲೇ ಎನ್‌ಡಿಆರ್‌ಎಫ್ ತಂಡ ಆಯೋಜನೆ ಮಾಡಲಾಗಿದ್ದು ಸಮೀಕ್ಷೆ ಮುಂದುವರೆದಿದೆ.
ಈ ಹಿನ್ನೆಲೆ ಶಾಸಕ ಗಣೇಶ್ ಹುಕ್ಕೇರಿ ನದಿ ತೀರದ ಗ್ರಾಮಗಳಲ್ಲಿ ಬರುವಂತ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು. ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಇದರಿಂದ ತಾಲೂಕಿನ ಕೃಷ್ಣಾ ನದಿಯ ವ್ಯಾಪ್ತಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಕಾರಣಕ್ಕಾಗಿ ಶಾಸಕರು ದಿಢೀರ್ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್‌ಡಿಆರ್‌ಎಫ್) ಸಿಬ್ಬಂದಿ ಜೊತೆ ಮಾತುಕತೆ ನಡೆಸಿ ಪ್ರವಾಹ ಪೂರ್ವ ನಿಯೋಜಿತ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು. ಇದೇ ವೇಳೆ ಕೃಷ್ಣಾ ನದಿಯ ತೀರದಲ್ಲಿದ್ದ ಬೋಟ್ಗಳ ಗುಣಮಟ್ಟವನ್ನು ಪ್ರಯಾಣಿಸುವ ಮೂಲಕ ಪರೀಕ್ಷಿಸಿದರು. ನದಿ ತೀರದ ಜನರಲ್ಲಿ ಧ್ಯರ್ಯದಿಂದ ಇರುವಂತೆಯೂ ಅಭಯ ನೀಡಿದರು.