ETV Bharat / state

ಆ್ಯಂಬುಲೆನ್ಸ್ ಓಡಿಸಿ ಗಮನ ಸೆಳೆದ ಶಾಸಕಿ ಅಂಜಲಿ ನಿಂಬಾಳ್ಕರ್ - ಬೆಳಗಾವಿ

ಶಾಸಕಿ ಅಂಜಲಿ ನಿಂಬಾಳ್ಕರ್ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ನಾಲ್ಕು ಆ್ಯಂಬುಲೆನ್ಸ್ ಖರೀದಿಸಿ ಖಾನಾಪುರ ತಾಲೂಕು ಆಸ್ಪತ್ರೆಗೆ ಹಸ್ತಾಂತರಿಸಿದರು.

MLA Anjali Nimbalkar Drive to Ambulance
ಆ್ಯಂಬುಲೆನ್ಸ್ ಓಡಿಸಿ ಗಮನ ಸೆಳೆದ ಶಾಸಕಿ ಅಂಜಲಿ ನಿಂಬಾಳ್ಕರ್
author img

By

Published : Jun 11, 2021, 5:15 PM IST

ಬೆಳಗಾವಿ: ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಆ್ಯಂಬುಲೆನ್ಸ್ ಓಡಿಸುವ ಮೂಲಕ ಗಮನ ಸೆಳೆದರು. ತಾಲೂಕು ಆಸ್ಪತ್ರೆಯ ಆವರಣದಲ್ಲಿ ನಾಲ್ಕು ಆ್ಯಂಬುಲೆನ್ಸ್​​​​ಗಳಿಗೆ ಚಾಲನೆ ನೀಡಿದ ಅವರು ನಂತರ ಪಟ್ಟಣದಲ್ಲಿ ಆ್ಯಂಬುಲೆನ್ಸ್ ಓಡಿಸಿದರು.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ನಾಲ್ಕು ಆ್ಯಂಬುಲೆನ್ಸ್ ಖರೀದಿಸಿ ತಾಲೂಕು ಆಸ್ಪತ್ರೆಗೆ ಹಸ್ತಾಂತರಿಸಿದರು.

ಆ್ಯಂಬುಲೆನ್ಸ್ ಓಡಿಸಿ ಗಮನ ಸೆಳೆದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್

ಕಳೆದ ವರ್ಷ ಶಾಸಕಿ ಅಂಜಲಿ ಸರ್ಕಾರದಿಂದ ಖಾನಾಪುರ ತಾಲೂಕಾಸ್ಪತ್ರೆಗೆ ನಾಲ್ಕು ಆ್ಯಂಬುಲೆನ್ಸ್ ಮಂಜೂರು ಮಾಡಿಸಿದ್ದರು. ಕೊರೊನಾ ಒಂದನೇ ಅಲೆ ಹೊಡೆತಕ್ಕೆ ತತ್ತರಿಸಿದ್ದ ಖಾನಾಪುರ ಕ್ಷೇತ್ರದಲ್ಲೀಗ ಎರಡನೇ ಅಲೆಯ ಅಬ್ಬರವೂ ಜೋರಾಗಿದೆ. ನೆರೆಯ ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಖಾನಾಪುರ ತಾಲೂಕಿನ ಬಹುತೇಕರು ವಲಸೆ ಹೋಗುತ್ತಾರೆ. ಉಭಯ ರಾಜ್ಯಗಳಲ್ಲಿ ಲಾಕ್​​​ಡೌನ್ ಇರುವ ಕಾರಣ ಅವರೆಲ್ಲ ತಮ್ಮೂರಿಗೆ ಮರಳಿದ್ದಾರೆ. ಹೀಗಾಗಿ ವಲಸಿಗರಿಂದ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ‌ಮುಖ್ಯ ಕಾರಣವಾಗಿದೆ.

MLA Anjali Nimbalkar
ಆ್ಯಂಬುಲೆನ್ಸ್​​​​ಗಳಿಗೆ ಚಾಲನೆ ನೀಡಿದ ಶಾಸಕಿ ಅಂಜಲಿ ನಿಂಬಾಳ್ಕರ್

ಕೊರೊನಾದಿಂದ ಬಳಲುತ್ತಿರುವ ಕ್ಷೇತ್ರದ ಜನರಿಗೆ ಅನುಕೂಲ ಕಲ್ಪಿಸಲು ಶಾಸಕಿ ಆ್ಯಂಬುಲೆನ್ಸ್ ಖರೀದಿಸಿ ತಾಲೂಕು ಆಸ್ಪತ್ರೆಗೆ ನೀಡಿದ್ದಾರೆ. ಕಳೆದ ವಾರ ಶಾಸಕಿ ಅಂಜಲಿ ತಮ್ಮ ಸ್ವಂತ ಖರ್ಚಿನಲ್ಲಿ 8 ಆಕ್ಸಿಜನ್ ಕಾನ್ಸಟ್ರೇಟರ್ ಖರೀದಿಸಿ ತಾಲೂಕು ಆಸ್ಪತ್ರೆಗೆ ನೀಡಿದ್ದರು.

ಓದಿ: '100 ನಾಟ್​ ಔಟ್': ಬೈಕ್​ಗೆ ಪೆಟ್ರೋಲ್ ಹಾಕಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.