ETV Bharat / state

ನೀರಿನ ಸಾರ್ವಜನಿಕ ಸಾರಿಗೆ ಯೋಜನೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಅಭಯ್

ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ ಸಭೆ ನಡೆಸಿದರು.

Belgium news
Belgium news
author img

By

Published : Jun 1, 2020, 10:52 PM IST

ಬೆಳಗಾವಿ : ನೂತನ ಶೈಲಿಯ ನೀರಿನ ಸಾರ್ವಜನಿಕ ಸಾರಿಗೆ ಯೋಜನೆಗೆ ಸಂಬಂಧಿಸಿದಂತೆ ಇಂದು ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ ಸಭೆ ನಡೆಸಿದರು.

ನಗರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು, ನೀರಿನ ಸಾರ್ವಜನಿಕ ಸಾರಿಗೆ (Water public transport) ಎಂಬ ಹೊಸ ಕಲ್ಪನೆಯ ಯೋಜನೆಯನ್ನು ಮಂಡಿಸಿದರು. ಇದು ಬೆಳಗಾವಿ ನಗರಕ್ಕೆ ಹೊಸ ಮೆರಗು ನೀಡಲಿದ್ದು, ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ.

ತಾಲೂಕಿನಲ್ಲಿ 3 ಕಿ.ಮೀ ವ್ಯಾಪ್ತಿಯಲ್ಲಿರುವ ನಗ್ಜರಿ ನಾಲಾ ಸೇರಿದಂತೆ ನಗರದಲ್ಲಿ ಹಾಳಾಗಿರುವ ನಾಲೆಗಳನ್ನು ವಿಸ್ತರಿಸಿ ಅವುಗಳಲ್ಲಿ ಚರಂಡಿ ನೀರು ಸೇರದಂತೆ ಪೈಪ್ ಲೈನ್ ಮಾಡಿ ನಾಲೆಗಳಲ್ಲಿ ಬೋಟಿಂಗ್ ಮಾಡುವ ವಿನೂತನ ಯೋಜನೆ ಇದಾಗಿದೆ.

ಈ ಯೋಜನೆಗೆ ಈಗಾಗಲೇ ಅಂತಿಮ ಹಂತದ ರೂಪರೇಷೆಗಳನ್ನು ಸಿದ್ಧಪಡಿಸಲಾಗಿದ್ದು, ರಸ್ತೆ ಸಾರಿಗೆ ಜನದಟ್ಟಣೆಯ ನಿಯಂತ್ರಿಸಲು ಹಾಗೂ ಬೆಳಗಾವಿ ನಗರ ಸೌಂದರ್ಯಕ್ಕೆ ಆದ್ಯತೆ ಜೊತೆಗೆ ಇಂದಿನ ಆಧುನಿಕ ಸ್ಪರ್ಶಕ್ಕೆ ಹೊಸ ನಾಂದಿಯಾಗಲಿದೆ ಎನ್ನಲಾಗುತ್ತಿದೆ.

ಈ ಯೋಜನೆ ಒಂದು ವೇಳೆ ಅನುಷ್ಠಾನಗೊಂಡರೆ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಪ್ರಯತ್ನವಾಗಲಿದೆ ಎಂದು ಶಾಸಕ ಹೇಳಿದರು.

ಈ ಯೋಜನೆ ಜೋಡಣೆಯಿಂದ ಜನವಸತಿ ಪ್ರದೇಶಗಳಾದ ನಿತ್ಯಾನಂದ ನಗರ, ಘೋಡ್ಸೆವಾಡಿ, ಜೌಗಲೆವಾಡಿ, ಅಯೋದ್ಯಾ ನಗರ, ಎಸ್.ವಿ. ಕಾಲೋನಿ, ಶಾಂತಿ ಕಾಲೋನಿ, ಮರಾಠಾ ಕಾಲೋನಿ, ಜಕ್ಕೆರಿ ಹೊಂಡ, ಶಾಸ್ತ್ರೀ ನಗರ, ಕಪಲೇಶ್ವರ ಕಾಲೋನಿ‌ಯ ಮಹಾದ್ವಾರ ರಸ್ತೆಗೆ ಜೋಡಿಸಲಾಗುವುದು. ಇದರಿಂದಾಗಿ ಜನ ಸಂಚಾರ, ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಬಿಳ್ಳಲಿದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.