ಬೆಳಗಾವಿ: ಸಂಡೇ ಲಾಕ್‌ಡೌನ್‌ಗೆ ಕುಂದಾನಗರಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಾಕ್‌ಡೌನ್ ಉಲ್ಲಂಘಿಸಿ ಕೆಲ ಬೈಕ್ ಸವಾರರು ಹಾಗೂ ಕಾರುಗಳ ಸಂಚಾರ ಮಾಡುತ್ತಿವೆ.
ನಗರದ ಚೆನ್ನಮ್ಮ ವೃತ್ತ, ಅಶೋಕ ವೃತ್ತ ಹಾಗೂ ಸದಾಶಿವ ನಗರದ ಪ್ರಮುಖ ರಸ್ತೆ ಮಾರ್ಗದಲ್ಲಿ ಅನಗತ್ಯ ವಾಹನಗಳ ತಡೆಗೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದರೂ ಕೆಲ ಬೈಕ್ ಸವಾರರು ಅನಗತ್ಯವಾಗಿ ಸಂಚರಿಸುತ್ತಿದ್ದಾರೆ. ಅಗತ್ಯ ಸೇವೆಗೆ ತೆರಳುವವರ ಐಡಿ ಕಾರ್ಡ್ ಗಳನ್ನು ಪರಿಶೀಲನೆ ನಡೆಸಿ ರಸ್ತೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಅನಗತ್ಯವಾಗಿ ರಸ್ತೆಗಿಳಿದವರಿಗೆ ಪೊಲೀಸರು ವಾಹನ ಜಪ್ತಿ ಮಾಡುವುದಾಗಿ ಎಚ್ಚರಿಕೆ ನೀಡಿ ವಾಪಸ್ ಕಳುಹಿಸುತ್ತಿದ್ದಾರೆ.
ಸಂಡೇ ಲಾಕ್‌ಡೌನ್ ಹಿನ್ನೆಲೆ ನಗರದಲ್ಲಿ ಬಸ್, ಆಟೋಗಳ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ನಗರದ ಮುಖ್ಯ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಖಾಲಿ ಆಗಿದೆ. ನಾಳೆ ಬೆಳಗ್ಗೆ 5 ಗಂಟೆಯವರೆಗೂ ಅಂಗಡಿ ಮುಂಗಟ್ಟು ಬಂದ್ ಆಗಿರಲಿವೆ. ಈಗಾಗಲೇ ಬೆಳಗಾವಿಯ ಗೋಕಾಕ್, ಮೂಡಲಗಿ, ಕಾಗವಾಡ, ನಿಪ್ಪಾಣಿ, ಅಥಣಿಯಲ್ಲಿ ಲಾಕ್‌ಡೌನ್ ಮಾಡಲಾಗಿದ್ದು, ಬೈಲಹೊಂಗಲ, ಖಾನಾಪುರ, ಹುಕ್ಕೇರಿ ತಾಲೂಕಿನಲ್ಲೂ ಹಾಫ್ ಡೇ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ತಾಲೂಕು ಪ್ರದೇಶಗಳಿಂದ ಬೆಳಗಾವಿ ನಗರಕ್ಕೆ ಬಸ್‌ಗಳ ಸಂಚಾರ ಬಂದ್ ಮಾಡಲಾಗಿದೆ.