ಬೆಳಗಾವಿ: ವೀರ ಸಾವರ್ಕರ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 75 ವಷದ ಬಳಿಕ ಬೆಳಗಾವಿಯಲ್ಲಿ ಜ್ಞಾನೋದಯವಾಗಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ಅವರು ಬೆಳಗಾವಿ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ವೀರ ಸಾವರ್ಕರ್ ವಿಚಾರದಲ್ಲಿ ಕಾಂಗ್ರೆಸ್ನವರು ಮೃದು ಧೋರಣೆ ತಾಳಿದ್ದಾರೆ, ಅವರಿಗೆ ಬೆಳಗಾವಿಯಲ್ಲಿ ಜ್ಞಾನೋದಯವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಎಸ್ಸಿ, ಎಸ್ಟಿ ವಿಧೇಯ ಮಂಡನೆ ವಿಚಾರ: ವಿಧಾನಸಭೆ ನಡೆಯುತ್ತಿರುವುದು ಚರ್ಚೆ, ವಿಮರ್ಶೆ ಮಾಡಲಿಕ್ಕೆ. ಯಾವುದೇ ವಿಚಾರ ತಂದರು ಕೂಡ ಚರ್ಚೆ ಮಾಡುವುದಕ್ಕೆ ನಾವು ಮುಕ್ತ ಮನಸ್ಸು ಹೊಂದಿದ್ದೇವೆ. ಜನಪರ ನಿಲುವಿನ ಚರ್ಚೆಯನ್ನು ನಾವು ತೆಗೆದುಕೊಳ್ಳುತ್ತೇವೆ. ನಮ್ಮ ನಿಲುವನ್ನು ಗಟ್ಟಿಯಾಗಿ ವಿಧಾನಸಭೆಯಲ್ಲಿ ಮಂಡನೆ ಮಾಡುತ್ತೇವೆ ಎಂದು ಹೇಳಿದರು.
ವಿದ್ಯುತ್ ದರ ಹೆಚ್ಚಳ ವಿಚಾರ: ಕುರಿತು ಮಾತನಾಡಿದ ಸಚಿವರು, ಈಗಾಗಲೇ ವಿದ್ಯುತ್ ದರದಲ್ಲಿ ಏರಿಕೆ ವಿಚಾರವಾಗಿ, ಕಂಪೆನಿಗಳು ಕೆಎಸ್ಆರ್ಸಿ ಮುಂದೆ ಹೋಗಿದೆ. ಕೆಎಸ್ಆರ್ಟಿಸಿ ಸಾರ್ವಜನಿಕ ಅಹವಾಲಿಗೆ ಇಡುತ್ತದೆ. ಈ ವರ್ಷ ಜನಹಿತವಾದ ದರವನ್ನು ನಿಗದಿ ಪಡಿಸುವುದು ನಮ್ಮ ನಿಲುವಾಗಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಗಡಿ ವಿಚಾರ: ಈಗಾಗಲೇ ಗಡಿ ವಿಷಯಕ್ಕೆ ಸಂಬಂಧಪಟ್ಟಂತೆ ಕನ್ನಡಿಗರ ಭಾವನೆಗಳಿಗೆ ನಮ್ಮ ಸರ್ಕಾರ ಅತ್ಯಂತ ಗರಿಷ್ಟವಾದಂತಹ ಆದ್ಯತೆ ನೀಡುತ್ತೇವೆ. ಕನ್ನಡಿಗರ ಯಾವುದೇ ಭಾವನೆಗಳನ್ನು ಧಿಕ್ಕರಿಸುವಂತಹ ಪ್ರಯತ್ನ ನಮ್ಮ ಸರ್ಕಾರ ಯಾವತ್ತು ಮಾಡಿಲ್ಲ ಮುಂದೇನು ಮಾಡುವುದು ಇಲ್ಲ. ಇನ್ನೂ ವಿವಾದಕ್ಕೆ ಸಂಬಂಧ ಪಟ್ಟಂತೆ ಇಬ್ಬರು ಮುಖ್ಯಮಂತ್ರಿಗಳು, ಕೇಂದ್ರ ಗೃಹ ಸಚಿವರ ಜೊತೆ ಮಾತುಕತೆ ಮಾಡಿದ್ದಾರೆ. ಯಾವುದೇ ಮಾತುಕತೆ ಇರಲಿ ಚರ್ಚೆ ಇರಲಿ. ಅದರಲ್ಲಿ ಕರ್ನಾಟಕದ ಹಿತ ಬಹಳ ಪ್ರಮುಖವಾಗಿರುವಂತಹ ಸಂಗತಿ ಎಂದರು.
ಮುಂದುವರೆದು, ಕರ್ನಾಟಕದ ಹಿತವನ್ನು ಬಿಟ್ಟು ನಾವು ಬೇರೆ ಯೋಚನೆ ಮಾಡುವಂತಹ ಪ್ರಶ್ನೆಯೇ ಇಲ್ಲ. ಇವತ್ತು ವಿಧಾನಸಭೆಯಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧ ಪಟ್ಟಂತೆ ಒಂದು ಮಸೂದೆಯನ್ನು ಕೂಡ ಮಂಡನೆ ಮಾಡುತ್ತಿದ್ದೇವೆ. ಯಾವುದು ಹೊಸ ತಾಲೂಕುಗಳು ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾಗಿತ್ತೋ ಆ ತಾಲೂಕುಗಳನ್ನು ಗಡಿ ಅಭಿವೃದ್ದಿ ಪ್ರಾಧಿಕಾರಕ್ಕೆ ಸೇರಿಸಬೇಕು ಎನ್ನುವ ವಿಚಾರವನ್ನು ಇವತ್ತು ಮಂಡನೆ ಮಾಡುತ್ತಿದ್ದೇವೆ. ನಮ್ಮ ಸರ್ಕಾರಕ್ಕೆ ಗಡಿ ಭಾಗಗಳಲ್ಲಿ ಇರುವಂಥ ಕನ್ನಡಿಗರ ಭಾವನೆಗಳಿಗೂ ಗೌರವ ಕೊಡುತ್ತೇವೆ. ಆ ಭಾಗದ ಶಾಲಾ ಕಾಲೇಜು, ಇನ್ನಿತರ ಅಭಿವೃದ್ಧಿ ಚಟುವಟಿಕೆಗಳಿಗೂ ನಮ್ಮ ಸರ್ಕಾರ ಆದ್ಯತೆ ಕೊಡುತ್ತದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಮಾತನಾಡಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ, ಈಶ್ವರಪ್ಪ ಮಾತುಕತೆ... ಬೆಂಗಳೂರಿನತ್ತ ಸಚಿವ ಆಕಾಂಕ್ಷಿಗಳು