ಚಿಕ್ಕೋಡಿ: ಯಾವ ಸಂತ್ರಸ್ತರೂ ಹೆದರುವ ಅವಶ್ಯಕತೆ ಇಲ್ಲ. ನಿಮ್ಮ ಜೊತೆ ಎಲ್ಲ ವಿಭಾಗದ ಅಧಿಕಾರಿಗಳು ಇದ್ದಾರೆ ಎಂದು ನಿರಾಶ್ರಿತರಿಗೆ ನೂತನ ಸಚಿವೆ ಶಶಿಕಲಾ ಜೊಲ್ಲೆ ಆತ್ಮವಿಶ್ವಾಸ ನೀಡಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿ ಮಾತನಾಡಿದ ಅವರು ಪ್ರವಾಹ ಸಂತ್ರಸ್ತರಲ್ಲಿ ಧೈರ್ಯ ತುಂಬಿದರು. ಹಾನಿಯಾದ ಪ್ರದೇಶದ ಬಗ್ಗೆ ಕೂಡಲೆ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ನಿಮ್ಮ ಮನೆಯ ಸಾಮಗ್ರಿಗಳು ಎಲ್ಲವೂ ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ 3,800 ರೂ.ಗಳನ್ನು ನೀಡಲು ಸರಕಾರ ನಿಗಧಿ ಮಾಡಿತ್ತು. ಆದರೆ, ಈಗ ಪಿಡಿಓ, ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ಹಾನಿಗೊಳಗಾದ ಕುಟುಂಬಕ್ಕೆ 10,000 ರೂ ನಿಗಧಿ ಮಾಡಲಾಗಿದೆ ಎಂದು ಹೇಳಿದರು. ಇನ್ನು ಪ್ರವಾಹ ಪರಿಸ್ಥಿತಿ ಬಗ್ಗೆ ಸರ್ಕಾರ ಕಟಿಬದ್ದವಾಗಿದ್ದು. ಸೂಕ್ತ ಪರಿಹಾರ ನೀಡಲಿದೆ ಎಂದು ಭರವಸೆ ನೀಡಿದರು.