ಬೆಳಗಾವಿ: ಕಾಂಗ್ರೆಸ್ ಪಕ್ಷ ರಮೇಶ್ ಜಾರಕಿಹೊಳಿ ಅವರನ್ನು ಕರೆದು ಸಚಿವ ಸ್ಥಾನ ನೀಡಿತ್ತು. ಸಚಿವ ಸ್ಥಾನಕ್ಕಿಂತ ಪಕ್ಷ ಮತ್ತೇನು ಕೊಡಲು ಸಾಧ್ಯ. ರಮೇಶ್ಗೆ ಕಿರೀಟ ಕೊಡಲು ಪಕ್ಷಕ್ಕೆ ಆಗಲ್ಲವೆಂದು ಸಹೋದರ, ಸಚಿವ ಸತೀಶ್ ಜಾರಕಿಹೊಳಿ, ಟಾಂಗ್ ಕೊಟ್ಟಿದ್ದಾರೆ.
ಗೋಕಾಕ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ್ ತಾಲೂಕಿನ ಇತಿಹಾಸ ನೋಡಿದ್ರೆ ಯಾರು ಯಾರನ್ನು ಹಾಳನ್ನು ಮಾಡಿದ್ರು ಅನ್ನೋದು ಗೊತ್ತಿದೆ. ಸಚಿವರಾಗಿದ್ದಾಗಲೇ ರಮೇಶ್ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರು ಎಂದು ಆರೋಪಿಸಿದರು.
ಅಲ್ಲದೆ ಕಾಂಗ್ರೆಸ್ ಶಾಸಕ ಅಂತ ಹೇಳಿಕೊಂಡು ರಮೇಶ್ ಬಿಜೆಪಿ ಪರ ಕೆಲಸ ಮಾಡುತ್ತಾರೆ. ಅದಕ್ಕೇ ಕತ್ತಲಲ್ಲಿ ಕುಳಿತು ಕಲ್ಲು ಎಸೆಯೋದು ಅಂದಿದ್ದು. ಬಹಿರಂಗವಾಗಿ ಬಿಜೆಪಿ ಸೇರಿದ್ರೆ ಗೋಕಾಕ್ನಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ನನ್ನ ವಿರುದ್ಧ ಯಾರೇ ಸ್ಪರ್ಧಿಸಿದ್ರು ಸ್ವಾಗತ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.