ETV Bharat / state

ಕೊರೊನಾ ತಡೆಯಲು ಇರಿ ಮನೆಯಲ್ಲೆ... ಜನರಲ್ಲಿ ಮನವಿ ಮಾಡಿದ್ರು ಶಶಿಕಲಾ ಜೊಲ್ಲೆ - ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಪೊಲೀಸ್​ ಅಧಿಕಾರಿಗಳ ವಿಶೇಷ ಪ್ರಯತ್ನ

ಕೋವಿಡ್ - 19 ಭಾರತಕ್ಕೆ ಪ್ರವೇಶಿಸಿದ್ದು ದಿನನಿತ್ಯ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿಮ್ಮೆಲ್ಲರ ಆರೋಗ್ಯ ಸಂರಕ್ಷಣೆ ನಮ್ಮ ಜವಾಬ್ದಾರಿ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

Minister Sasikala Jolle
ಸಚಿವೆ ಶಶಿಕಲಾ ಜೊಲ್ಲೆ
author img

By

Published : Mar 30, 2020, 2:28 PM IST

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಪೊಲೀಸ್​ ಅಧಿಕಾರಿಗಳ ವಿಶೇಷ ಪ್ರಯತ್ನದಿಂದ ಜನರಲ್ಲಿ ಕೊರೊನಾ ವೈರಸ್ ಹೇಗೆ ತಡೆಗಟ್ಟಬಹುದು ಹಾಗೂ ಸಾರ್ವಜನಿಕರಿಗೆ ಅವರ ಕುಟುಂಬ ಕಾಪಾಡಿಕೊಳ್ಳಲು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದಿಢೀರನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಆಗಮಿಸಿ ಜನ ಜಾಗೃತಿಯಲ್ಲಿ ಪಾಲ್ಗೊಂಡರು.

ಸಚಿವೆ ಶಶಿಕಲಾ ಜೊಲ್ಲೆ ಜನರಲ್ಲಿ ಮನವಿ

ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ - 19 ಭಾರತಕ್ಕೆ ಪ್ರವೇಶಿಸಿದ್ದು, ದಿನನಿತ್ಯ ವೈರಸ್ ಗೆ ತಗಲುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದೆ. ನಿಮ್ಮೆಲ್ಲರ ಆರೋಗ್ಯ ಸಂರಕ್ಷಣೆ ನಮ್ಮ ಜವಾಬ್ದಾರಿ ಎಂದಿದ್ದಾರೆ.

ಆದಷ್ಟು ಬೇಗನೆ ದೇಶದಲ್ಲಿ, ರಾಜ್ಯದಲ್ಲಿ ವೈರಸ್ ಹರಡದಂತೆ ತಡೆಯಲು ಸುಮಾರು 21 ದಿನ ಮನೆಯಲ್ಲಿಯೇ ಇರಬೇಕೆಂದು ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಅದಕ್ಕೆ ಮನೆಯಿಂದ ಆಚೆ ಬರದೆ ಸ್ವಚ್ಚತೆ ಕಾಪಾಡಿ, ಸಾಮಾಜಿಕ ಅಂತರ ಕಾಯ್ದಕೊಂಡು, ಕೈ-ಕೈ ಜೋಡಿಸದೆ ನಮಸ್ಕಾರ ಮಾಡಬೇಕು ಎಂದರು.

ನಂತರ ಮಾತನಾಡಿದ ಅವರು, ಚೀನಾ, ಸ್ಪೇನ್, ಇಟಲಿ, ಇರಾನ್​​​ ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ವೈರಸ್ ಗೆ ಸುಮಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿ ನಮ್ಮ ರಾಜ್ಯ, ದೇಶದಲ್ಲಿ ಹಗಲು-ರಾತ್ರಿ ಪೊಲೀಸ್​, ವೈದ್ಯಕೀಯ, ಪೌರಾಡಳಿತ, ಕಂದಾಯ, ಇಲಾಖೆಯವರು ಅವರ ಪ್ರಾಣ ಪಣಕ್ಕಿಟ್ಟು ನಮ್ಮ ಜೀವ ಕಾಪಾಡಲು ಶ್ರಮಿಸುತ್ತಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.