ETV Bharat / state

ಸುಧಾಕರ್ ಟೀಂ ಸಭೆ ಬಗ್ಗೆ ತಲೆ ಕೆಡಿಸಿಕೊಳ್ಳದ ಜಾರಕಿಹೊಳಿ: ವಲಸಿಗರನ್ನು ಕಡೆಗಣಿಸುತ್ತಿದ್ದಾರಾ ಸಾಹುಕಾರ - ಸುಧಾಕರ್ ಟೀಂ ಸಭೆ ಬಗ್ಗೆ ತಲೆ ಕೆಡಿಸಿಕೊಳ್ಳದ ಜಾರಕಿಹೊಳಿ

ಸಚಿವ ಸುಧಾಕರ್ ನಿವಾಸಲ್ಲಿ ಸಿಎಂ ತಮಗೆ ನೀಡಿರುವ ಖಾತೆಗಳಿಂದ ಅಸಮಾಧಾನಗೊಂಡ ಸಚಿವರು ಸಭೆ ನಡೆಸುತ್ತಿದ್ದಾರೆ. ಸುಧಾಕರ್​ ನಿವಾಸದಿಂದ ಕೂಗಳತೆ ದೂರದಲ್ಲಿರುವ ರಮೇಶ್ ಜಾರಕಿಹೊಳಿ ಮಾತ್ರ ಸಭೆಯತ್ತ ತಿರುಗಿ ನೋಡಿಲ್ಲ.

ಸುಧಾಕರ್ ಟೀಂ ಸಭೆ ಬಗ್ಗೆ ತಲೆ ಕೆಡಿಸಿಕೊಳ್ಳದ ಜಾರಕಿಹೊಳಿ
Minister Ramesh Jarkiholi not interfere to Meeting
author img

By

Published : Jan 21, 2021, 1:23 PM IST

ಬೆಂಗಳೂರು: ಖಾತೆ ಹಂಚಿಕೆ, ಮರು ಹಂಚಿಕೆ ನಂತರ ವಲಸಿಗ ಸಚಿವರಲ್ಲಿ ಅಸಮಾಧಾನ ಸ್ಫೋಟಗೊಂಡು ಸುಧಾಕರ್ ನಿವಾಸದಲ್ಲಿ ಸಭೆ ನಡೆಸುತ್ತಿದ್ದರೂ ಕೂಗಳತೆ ದೂರದಲ್ಲಿರುವ ರಮೇಶ್ ಜಾರಕಿಹೊಳಿ ಮಾತ್ರ ಸಭೆಯತ್ತ ತಿರುಗಿ ನೋಡಿಲ್ಲ.

ಸುಧಾಕರ್ ಟೀಂ ಸಭೆ ಬಗ್ಗೆ ತಲೆ ಕೆಡಿಸಿಕೊಳ್ಳದ ಜಾರಕಿಹೊಳಿ

ಸದಾಶಿವನಗರದ ಸುಧಾಕರ್ ನಿವಾಸದಲ್ಲಿ ಎಂಟಿಬಿ ನಾಗರಾಜ್, ಗೋಪಾಲಯ್ಯ, ನಾರಾಯಣಗೌಡ ಸೇರಿ ಸಭೆ ನಡೆಸುತ್ತಿದ್ದಾರೆ. ಸುಧಾಕರ್ ನಿವಾಸದ ಸಮೀಪದಲ್ಲೇ ಸಚಿವ ರಮೇಶ್ ಜಾರಕಿಹೊಳಿ ನಿವಾಸವಿದ್ದು, ಅಲ್ಲಿನ ನಡೆಯುತ್ತಿರುವ ಸಭೆ ಬಗ್ಗೆ ಜಾರಕಿಹೊಳಿ ಯಾವುದೇ ಉತ್ಸುಕತೆ ತೋರಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರುವಲ್ಲಿ ರಮೇಶ್ ಜಾರಕಿಹೊಳಿ ಮಹತ್ವದ ಪಾತ್ರ ವಹಿಸಿದ್ದರು. ಬಾಂಬೆ ಟೀಂನಲ್ಲಿ ಲೀಡರ್ ರೀತಿ ಇದ್ದರು. ಆದರೆ, ಈಗ ವಲಸಿಗ ಸಚಿವರು ಅಸಮಾಧಾನಗೊಂಡು ಸಭೆ ನಡೆಸುತ್ತಿದ್ದರೂ ಇತ್ತ ಜಾರಕಿಹೊಳಿ ಮಾತ್ರ ತಲೆ ಹಾಕಿಲ್ಲ.

ಓದಿ: ವಿನಯ್ ಕುಲಕರ್ಣಿಗೆ ತಪ್ಪದ ಸಂಕಷ್ಟ: ಜಾಮೀನು ಅರ್ಜಿ ವಜಾ

ಸದಾಶಿವನಗರ ನಿವಾಸಕ್ಕ ಆಗಮಿಸಿದ ರಮೇಶ್ ಜಾರಕಿಹೊಳಿ, ಸುಧಾಕರ ಮನೆಯಲ್ಲಿ ಸಭೆ ನಡೆಯುತ್ತಿರುವ ತಿರುಗಿ ನೋಡದೆ ಮಧ್ಯಮಗಳಿಗೂ ಯಾವುದೇ ಪ್ರತಿಕ್ರಿಯೆ ನೀಡದೆ ದೊಡ್ಡವರು ಅದನ್ನೆಲ್ಲ ನೋಡಿಕೊಳ್ಳುತ್ತಾರೆ ಎನ್ನುತ್ತಾ ನಿವಾಸದೊಳಗೆ ತೆರಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.