ಬೆಳಗಾವಿ: ಅದೃಷ್ಟ ಇದ್ರೆ ಡಿಸಿಎಂ ಲಕ್ಷ್ಮಣ ಸವದಿ ಮುಖ್ಯಮಂತ್ರಿ ಆಗಲಿ ಬಿಡಿ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷ್ಮಣ ಸವದಿ ಅವರೇ ಮುಂದಿನ ಸಿಎಂ ಎಂದು ಅಭಿಯಾನ ನಡೆಯುತ್ತಿದೆ. ಈ ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅದೃಷ್ಟ ಇದ್ರೆ ಲಕ್ಷ್ಮಣ ಸವದಿಯೂ ಸಿಎಂ ಆಗಲಿ ಬಿಡಿ ಎಂದರು.
ನಿಗಮ ಮಂಡಳಿ ಅಧ್ಯಕ್ಷರ ನೇಮಕದ ಬಗ್ಗೆ ಹೈಕಮಾಂಡ್ ಹಾಗೂ ಸಿಎಂ ತೀರ್ಮಾನ ತೆಗೆದುಕೊಂಡಿದ್ದಾರೆ. ರಾಷ್ಟ್ರೀಯ ಪಕ್ಷದಲ್ಲಿ ಸಣ್ಣಪುಟ್ಟ ಅಸಮಾಧಾನ ಸಹಜ. ನಮ್ಮ ನಾಯಕರು ಇದನ್ನು ಬಗೆಹರಿಸುತ್ತಾರೆ ಎಂದರು. ಪ್ರವಾಹ ಸಂಬಂಧ ಮಹಾರಾಷ್ಟ್ರ ನಾಯಕರ ಜೊತೆಗೆ ಚರ್ಚಿಸಿದ್ದೇನೆ. ನೀರು ಬಿಡುವಾಗ ಗಮನಕ್ಕೆ ತರುವಂತೆ ಕೋರಿದ್ದೇನೆ ಎಂದು ತಿಳಿಸಿದರು.