ETV Bharat / state

ಕೂಡಲಸಂಗಮ ಸ್ವಾಮೀಜಿ ಜೊತೆ ಚರ್ಚೆಗೆ ಸಿಎಂ ಸಿದ್ಧರಿದ್ದಾರೆ: ಸಚಿವ ಮುರುಗೇಶ್ ನಿರಾಣಿ - ಸಚಿವ ಮುರಗೇಶ ನಿರಾಣಿ

2ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕೂಡಲಸಂಗಮ ಸ್ವಾಮೀಜಿಯೊಂದಿಗೆ ಚರ್ಚೆಗೆ ಸಿಎಂ ಸಿದ್ಧರಿದ್ದಾರೆ. ಅವರ ಇತಿಮಿತಿಯೊಳಗೆ ಬೇಡಿಕೆ ಈಡೇರಿಸಲಿದ್ದಾರೆ ಎಂದು ಸಚಿವ ಮುರುಗೇಶ್​ ನಿರಾಣಿ ಹೇಳಿದ್ದಾರೆ.

Minister Murugesh Nirani Reaction
ನೂತನ ಸಚಿವ ಮುರಗೇಶ ನಿರಾಣಿ ಹೇಳಿಕೆ
author img

By

Published : Jan 16, 2021, 11:33 AM IST

Updated : Jan 16, 2021, 11:43 AM IST

ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಂಬಂಧ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಜೊತೆ ಚರ್ಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿದ್ಧರಿದ್ದಾರೆ ಎಂದು ನೂತನ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ನೂತನ ಸಚಿವ ಮುರುಗೇಶ ನಿರಾಣಿ ಹೇಳಿಕೆ

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2 ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮ ಸ್ವಾಮೀಜಿ ಪಾದಯಾತ್ರೆ ನಡೆಸುತ್ತಿದ್ದಾರೆ. 2 ಎ ಮೀಸಲಾತಿಗೆ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ವೀರೇಶ್ವರ ಲಿಂಗಾಯತ ಹಾಗೂ ಇತರ ಸಮಾಜಕ್ಕೆ ಅವಕಾಶ ಸಿಗಬೇಕೆಂಬ ಆಸೆ ನಮ್ಮದು. ಸ್ವಾಮೀಜಿ ಹಾಗೂ ಅವರ ಸುತ್ತಲಿರುವ ಎಲ್ಲರೂ ಬುದ್ಧಿವಂತರಿದ್ದಾರೆ. ಹೋರಾಟದ ಜತೆಗೆ ಸ್ವಾಮೀಜಿ ಸಿಎಂ ಜೊತೆಗೆ ಮಾತುಕತೆಗೆ ಬರಬೇಕು. ಕೂಡಲಸಂಗಮ ಸ್ವಾಮೀಜಿ ಜೊತೆಗೆ ಮಾತನಾಡಲು ಸಿಎಂ ಸಿದ್ಧರಿದ್ದಾರೆ. ಸ್ವಾಮೀಜಿಯವರ ಬೇಡಿಕೆ, ಅದಕ್ಕೆ ಬೇಕಾದ ಪರಿಹಾರದ ಬಗ್ಗೆ ಸಿಎಂ ಹಾಗೂ ಸ್ವಾಮೀಜಿ ಕುಳಿತು ಚರ್ಚೆ ನಡೆಸಬಹುದು. ಸಿಎಂ ಅವರು ತಮ್ಮ ಇತಿಮಿತಿಯೊಳಗೆ ಬೇಡಿಕೆ ಈಡೇರಿಸಲು ಸಿದ್ಧರಿದ್ದಾರೆ ಎಂದರು.

ಯತ್ನಾಳ ಸಿಡಿ ಬಾಂಬ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಚಿವ ನಿರಾಣಿ, ಆಲಂ ಪಾಷಾ ಮಾಡಿರುವ ಆರೋಪಕ್ಕೆ ನಿನ್ನೆಯೇ ಪ್ರತಿಕ್ರಿಯೆ ನೀಡಿದ್ದೇನೆ. ಆತ ಒಬ್ಬ ದೊಡ್ಡ ಚೀಟರ್ ಎಂದು ಗೇಲಿ ಮಾಡಿದರು.

ಸೋಮವಾರ ನೂತನ ಸಚಿವರಿಗೆ ಖಾತೆ ಹಂಚಿಕೆ ಆಗಲಿದೆ. ನನಗೆ ಯಾವುದೇ ಖಾತೆ ಕೊಟ್ಟರೂ ಸರ್ಕಾರ ಹಾಗೂ ಪಕ್ಷಕ್ಕೆ ಒಳ್ಳೆಯ ಹೆಸರು ತರುತ್ತೇನೆ. ಉಮೇಶ್ ಕತ್ತಿ ಅವರು ಎಂಟು ಬಾರಿ ಶಾಸಕರಾಗಿದ್ದಾರೆ, ಅವರು ಹಿರಿಯರಿದ್ದಾರೆ. ಹಿರಿತನಕ್ಕೆ ಆಧರಿಸಿ ಸಿಎಂ ಅವರಿಗೆ ಸೂಕ್ತ ಸ್ಥಾನಮಾನ ನೀಡಲಿದ್ದಾರೆ. ನಾನು ಹಿಂದೆಯೂ ಯಾವುದೇ ಖಾತೆ ಕೇಳಿಲ್ಲ, ಈಗಲೂ ಕೇಳಲ್ಲ ಎಂದರು.

ಓದಿ : ರಾಜ್ಯಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ : ಬೆಂಗಳೂರಿನಲ್ಲಿ ಬಿಗಿ ಪೊಲೀಸ್​ ಭದ್ರತೆ

ಗೃಹ ಸಚಿವ ಅಮಿತ್ ಶಾ ನಾಳೆ ದೇಶದ ಅತಿದೊಡ್ಡ ಇಥೆನಾಲ್​ ಘಟಕ ಉದ್ಘಾಟಿಸಲಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿರುವ ಕೆರಕಲಮಟ್ಟಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಖಾನೆ ವಿಸ್ತರಣೆಗೂ ಅಮಿತ್ ಶಾ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಮುಖ್ಯಮಂತ್ರಿ ಆದಿಯಾಗಿ ಕೇಂದ್ರ ಹಾಗೂ ರಾಜ್ಯದ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

Last Updated : Jan 16, 2021, 11:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.