ETV Bharat / state

ಅವನು ಉಂಡ ಮನೆಗೇ ದ್ರೋಹ ಬಗೆಯುವವನು,ಯತ್ನಾಳ್ ಅತ್ಯಂತ ನಾಲಾಯಕ್ ರಾಜಕಾರಣಿ.. ಸಚಿವ ನಿರಾಣಿ ವಾಗ್ದಾಳಿ

ನಮ್ಮ ಪಕ್ಷದವರನ್ನು ಟೀಕೆ ಮಾಡೋದಿದ್ರೆ ರಾಜೀನಾಮೆ ಕೊಟ್ಟು ಹೊರಗೆ ಹೋಗಿ ಏನ್ ಬೇಕಾದ್ರೂ ಮಾತನಾಡಲಿ. ಬಿಜೆಪಿ ಚಿಹ್ನೆ ಮೇಲೆ ಗೆದ್ದು ನಮ್ಮ ನಾಯಕರ ಫೋಟೋ ಹಾಕಿಕೊಂಡು ಆರಿಸಿ ಬಂದು ಪಕ್ಷಕ್ಕೆ ಅನ್ಯಾಯ ಮಾಡ್ತಿದ್ದಾರೆ. ಯತ್ನಾಳ್​ ಪಕ್ಷಕ್ಕೆ ಅನ್ಯಾಯ ಮಾಡುತ್ತಿರುವುದು ಉಂಡ ಮನೆಗೆ ದ್ರೋಹ ಬಗೆದಂಗೆ..

Minister Murugesh Nirani
ಯತ್ನಾಳ್ ವಿರುದ್ಧ ಸಚಿವ ಮುರುಗೇಶ್ ನಿರಾಣಿ ವಾಗ್ದಾಳಿ
author img

By

Published : Apr 3, 2021, 5:52 PM IST

ಬೆಳಗಾವಿ : ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಅತ್ಯಂತ ನಾಲಾಯಕ್ ರಾಜಕಾರಣಿ ಎಂದು ಸಚಿವ ಮುರಗೇಶ್​ ನಿರಾಣಿ ಆಕ್ರೋಶ ವ್ಯಕ್ತಪಡಿಸಿದರು.

ಯತ್ನಾಳ್ ವಿರುದ್ಧ ಸಚಿವ ಮುರುಗೇಶ್ ನಿರಾಣಿ ವಾಗ್ದಾಳಿ

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಂತ ನಾಲಾಯಕ್ ರಾಜಕಾರಣಿ ಯಾರಾದರೂ ಇದ್ರೆ ಅದು ಬಸನಗೌಡ ಪಾಟೀಲ್​ ಯತ್ನಾಳ್​ ಎಂದು ಏಕವಚನದಲ್ಲೇ ಕಿಡಿಕಾರಿದರು. ಬಸನಗೌಡ ಪಾಟೀಲ್ ಯತ್ನಾಳ್ ಬಹಳ ಹಿರಿಯರು. ಎಲ್ಲಾ ಮೂಲಗಳಿಂದ ಅವರಿಗೆ ಏನೇನೋ ಸಿಗುತ್ತಿದೆ. ನಮ್ಮ ಪಕ್ಷದಲ್ಲೇ ಇದ್ದು ನಮ್ಮ ಪಾರ್ಟಿಯವರನ್ನೇ ಟೀಕೆ ಮಾಡೋದು‌ ಎಷ್ಟರ ಮಟ್ಟಿಗೆ ಸರಿ?.

ನಮ್ಮ ಪಕ್ಷದವರನ್ನು ಟೀಕೆ ಮಾಡೋದಿದ್ರೆ ರಾಜೀನಾಮೆ ಕೊಟ್ಟು ಹೊರಗೆ ಹೋಗಿ ಏನ್ ಬೇಕಾದ್ರೂ ಮಾತನಾಡಲಿ. ಬಿಜೆಪಿ ಚಿಹ್ನೆ ಮೇಲೆ ಗೆದ್ದು ನಮ್ಮ ನಾಯಕರ ಫೋಟೋ ಹಾಕಿಕೊಂಡು ಆರಿಸಿ ಬಂದು ಪಕ್ಷಕ್ಕೆ ಅನ್ಯಾಯ ಮಾಡ್ತಿದ್ದಾರೆ. ಯತ್ನಾಳ್​ ಪಕ್ಷಕ್ಕೆ ಅನ್ಯಾಯ ಮಾಡುತ್ತಿರುವುದು ಉಂಡ ಮನೆಗೆ ದ್ರೋಹ ಬಗೆದಂಗೆ.

ಅದಕ್ಕಾಗಿ ಇನ್ಮುಂದೆ ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು. ಆತನಿಗೆ ಮಾನವೀಯತೆ ಇದ್ರೆ ರಾಜೀನಾಮೆ ಕೊಡಬೇಕು. ಏನ್ ಅಂತಾ ತಿಳಿದುಕೊಂಡಿದ್ದಾನೆ ಅವನು? ಚಿಹ್ನೆ ನಮ್ದು, ನಮ್ಮ ಎಲ್ಲಾ ನಾಯಕರ ಫೋಟೋ ಹಾಕಿಕೊಂಡು ಮನೆಯಲ್ಲಿದ್ದು ವಿರೋಧ ಮಾಡೋದು ಇದ್ಯಾವ ನ್ಯಾಯ? ಎಂದು ಏಕವಚನದಲ್ಲೇ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಚಿವ ಮುರುಗೇಶ್ ನಿರಾಣಿ ವಾಗ್ದಾಳಿ ನಡೆಸಿದರು.

ಓದಿ:ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸಿಂಗಲ್ ವಿಂಡೋ ಸಿಸ್ಟಮ್ ತರುವ ಪ್ಲಾನ್: ಸಚಿವ ನಿರಾಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.