ETV Bharat / state

ಪ್ರವಾಹ ಪೀಡಿತ ಸ್ಥಳಕ್ಕೆ ಸಚಿವ ಮಾಧುಸ್ವಾಮಿ ಭೇಟಿ: ಸ್ಥಳೀಯ ಶಾಸಕರ ಗೈರು

ಪ್ರವಾಹ ಪೀಡಿತ ಸ್ಥಳಗಳಿಗೆ ಸಚಿವ ಮಾಧುಸ್ವಾಮಿ ಭೇಟಿ ನೀಡಿದ್ದ ವೇಳೆ ಸ್ಥಳೀಯ ಸಮಸ್ಯೆಗಳನ್ನು ಬಿಂಬಿಸಲು ಯಾವೊಬ್ಬ ಶಾಸಕರು ಅವರಿಗೆ ಸಾಥ್​ ನೀಡಿಲ್ಲ.

ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಮಾಧುಸ್ವಾಮಿ
author img

By

Published : Sep 5, 2019, 2:12 AM IST

ಬೆಳಗಾವಿ: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಬೆಳಗಾವಿ ಜಿಲ್ಲೆಯ ಅನೇಕ ತಾಲೂಕುಗಳಿಗೆ ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಭೇಟಿ ನೀಡಿದ್ದು, ಸ್ಥಳೀಯ ಶಾಸಕರು ಮಾತ್ರ ಸಚಿವರ ಜೊತೆ ಪ್ರವಾಸ ಮಾಡಲು ನಿರಾಸಕ್ತಿ ತೋರಿದರು.

ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಮಾಧುಸ್ವಾಮಿ

ಇಂದು ಗೋಕಾಕ್​ ತಾಲೂಕಿನ ಹೊರವಲಯದಲ್ಲಿರುವ ದಡ್ಡಿ ಬಸವಣ್ಣ ಏತ ನೀರಾವರಿ ಸ್ಥಳಕ್ಕೆ ಸಚಿವ ಮಾಧುಸ್ವಾಮಿ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಶಾಸಕರು ಕಾಣಿಸಿಕೊಳ್ಳದ ಕಾರಣ ಕೇವಲ ಸಚಿವರು ಮಾತ್ರ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬೇಕಾದ ಶಾಸಕರೇ ಹಾಜರಾಗದಿರುವುದು ವಿಪರ್ಯಾಸವಾಗಿದೆ.

ಪರಿಹಾರ ನೀಡುವಂತೆ ಪ್ರವಾಹ ಸಂತ್ರಸ್ತರ ಮನವಿ:

ಪ್ರವಾಹಕ್ಕೊಳಗಾಗಿ ಮನೆ, ಆಸ್ತಿ ಕಳೆದುಕೊಂಡ ನಿರಾಶ್ರಿತರು, ಸರ್ಕಾರದಿಂದ ಪರಿಹಾರ ನೀಡುವಂತೆ ಸಚಿವರಿಗೆ ಮನವಿ ಮಾಡಿದರು. ಸಂತ್ರಸ್ತರಿಗೆ ಸಮಾಧಾನ ಹೇಳಿದ ಮಾಧುಸ್ವಾಮಿ, ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಆದಷ್ಟು ಬೇಗ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

Intro:ಪ್ರವಾಹ ಪೀಡಿತ ಸ್ಥಳಕ್ಕೆ ಸಚಿವ ಮಾಧುಸ್ವಾಮಿ ಭೇಟಿ : ಸ್ಥಳಿಯ ಶಾಸಕರ ಅನುಪಸ್ಥಿತಿ

ಬೆಳಗಾವಿ : ಭೀಕರ ಪ್ರವಾಹಕ್ಕೆ ತುತ್ತಾಗಿರುವ ಬೆಳಗಾವಿ ಜಿಲ್ಲೆಯ ಅನೇಕ ತಾಲೂಕುಗಳಿಗೆ ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಭೇಟಿ ನೀಡಿದ್ದು. ಸ್ಥಳಿಯ ಶಾಸಕರು ಮಾತ್ರ ಸಚಿವರ ಜೊತೆ ಪ್ರವಾಸ ಮಾಡಲು ನಿರಾಸಕ್ತಿ ತೋರಿದ್ದಾರೆ.

Body:ಇಂದು ಗೋಕಾಕ ತಾಲೂಕಿನ ಹೊರವಲಯದಲ್ಲಿರುವ ದಡ್ಡಿ ಬಸವಣ್ಣ ಏತ ನೀರಾವರಿ ಸ್ಥಳಕ್ಕೆ ಸಚಿವ ಮಾಧುಸ್ವಾಮಿ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಬಿಜೆಪಿ ಶಾಸಕರು ಕಾಣಿಸಿಕೊಳ್ಳಲಿಲ್ಲ. ಕೇವಲ ಸಚಿವರು ಮಾತ್ರ ಅಧಿಕಾರಿಗಳಿಂದ ಮಾಹಿತಿ ಪಡೆವಂತಾಯಿತು. ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬೇಕಾದ ಶಾಸಕರು ಮಾತ್ರ ಹಾಜರಾಗದೆ ಇರುವುದು ವಿಪರ್ಯಾಸ.

Conclusion:ಪರಿಹಾರ ನೀಡುವಂತೆ ಪ್ರವಾಹ ಸಂತ್ರಸ್ತರ ಮನವಿ : ಪ್ರವಾಹಕ್ಕೆ ಒಳಗಾಗಿ ಮನೆ ಮಠ ಕಳೆದುಕೊಂಡ ನಿರಾಶ್ರಿತರು ಸರ್ಕಾರದಿಂದ ಪರಿಹಾರ ನೀಡುವಂತೆ ಸಚಿವರಿಗೆ ಮನವಿ ಮಾಡಿದ್ದರು. ಸಂತ್ರಸ್ತರಿಗೆ ಸಮಾಧಾನ ಹೇಳಿದ ಮಾಧುಸ್ವಾಮಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಆದಷ್ಟು ಬೇಗ ಪರಿಹಾರ ಕೊಡಿಸುದಾಗಿ ಭರವಸೆ ನೀಡಿದರು.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.