ETV Bharat / state

'ಮೊದ್ಲು ಭಾರತ ಸಾಲಗಾರರ ದೇಶವಾಗಿತ್ತು, ಮೋದಿ ಬಂದ್ಮೇಲೆ 15 ದೇಶಕ್ಕೆ ಸಾಲ ನೀಡ್ತಿದೆ..'

ಇಡೀ ದೇಶ, ಇಡೀ ಪ್ರಪಂಚದಲ್ಲಿಯೇ ಅತ್ಯಂತ ಶಕ್ತಿಶಾಲಿ, ಪ್ರೀತಿಗೆ ಪಾತ್ರವಾಗಿರುವ, ಅಗ್ರಗಣ್ಯ ಪ್ರಧಾನಮಂತ್ರಿ ಯಾರಾದ್ರೂ ಇದ್ದರೇ ಅದು ನರೇಂದ್ರ ಮೋದಿ..

Minister KS Eshwarappa
ಸವದತ್ತಿ ಪಟ್ಟಣದಲ್ಲಿ ಪ್ರಚಾರ ಸಭೆ
author img

By

Published : Apr 11, 2021, 7:16 PM IST

ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿಯವರು ಏನು ಮಾಡುತ್ತಾರೋ ಅದಕ್ಕೆಲ್ಲ ಟೀಕೆ ಮಾಡುವುದೇ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರ ಕೆಲಸವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಆರೋಪಿಸಿದರು.

ಸವದತ್ತಿ ಪಟ್ಟಣದಲ್ಲಿ ದಿ.ಸುರೇಶ ಅಂಗಡಿ ಪತ್ನಿ, ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಯವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಆಡಳಿತಕ್ಕೆ ಬರುವ ಮುಂಚೆ ನಮ್ಮ ದೇಶ ಜಗತ್ತಿನ 108 ದೇಶಗಳಲ್ಲಿ ಸಾಲ ಮಾಡಿತ್ತು. ನಮ್ಮ ಭಾರತ ಆಗ ಸಾಲಗಾರರ ದೇಶವಾಗಿತ್ತು.

ಸವದತ್ತಿ ಪಟ್ಟಣದಲ್ಲಿ ಪ್ರಚಾರ ಸಭೆ..

ಮೋದಿ ಪ್ರಧಾನಿಯಾದ ನಂತರ ಆ ಎಲ್ಲ ದೇಶಗಳ ಸಾಲ ತೀರಿಸಿ 15 ದೇಶಗಳಿಗೆ ಸಾಲ ಕೊಡುವಂತೆ ದೇಶ ಅಭಿವೃದ್ಧಿ ಪಡಿಸಿದ್ದಾರೆ. ಇಡೀ ದೇಶ, ಇಡೀ ಪ್ರಪಂಚದಲ್ಲಿಯೇ ಅತ್ಯಂತ ಶಕ್ತಿಶಾಲಿ, ಪ್ರೀತಿಗೆ ಪಾತ್ರವಾಗಿರುವ, ಅಗ್ರಗಣ್ಯ ಪ್ರಧಾನಮಂತ್ರಿ ಯಾರಾದ್ರೂ ಇದ್ದರೇ ಅದು ನರೇಂದ್ರ ಮೋದಿ ಎಂದರು.

ಬೆಳಗಾವಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಸುರೇಶ್ ಅಂಗಡಿಯವರಿಗಿಂತಲೂ ಹೆಚ್ಚಿನ ಮತಗಳ ಅಂತರದಲ್ಲಿ ಮಂಗಳಾ ಅಂಗಡಿಯವರನ್ನು ಗೆಲ್ಲಿಸಬೇಕು. ಸುರೇಶ್ ಅಂಗಡಿ ಆತ್ಮಕ್ಕೆ ಶಾಂತಿ ಸಿಗಬೇಕೆಂದ್ರೆ ಅವರ ಪತ್ನಿಗೆ ಮತ ನೀಡುವಂತೆ ಈಶ್ವರಪ್ಪ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.