ಬೆಳಗಾವಿ: ಎಂಇಎಸ್ ಬ್ಯಾನ್ ಮಾಡಬೇಕೆಂದು ನಾವೆಲ್ಲರೂ ತೀರ್ಮಾನ ಮಾಡಿದ್ದೇವೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಠರಾವು ಕಳಿಸಲು ನಿರ್ಧರಿಸಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃಷಿ ಮಸೂದೆ ವಾಪಸ್‌ಗೆ ಸಂಬಂಧಿಸಿದಂತೆ ರೈತ ಮುಖಂಡರ ಜೊತೆ ಈಗಾಗಲೇ ಮಾತುಕತೆ ಮಾಡಿದ್ದೇವೆ. ಈಗ 10 ಜನರು ಸಿಎಂ ಜೊತೆ ಚರ್ಚೆ ಮಾಡಲು ಸಮಯ ನಿಗದಿ ಪಡಿಸುತ್ತಿರುವೆ. ಸಿಎಂ ಬಸವರಾಜ ಬೊಮ್ಮಾಯಿ ಇದರ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ.
ಮುಖ್ಯಮಂತ್ರಿ ಜೊತೆ ಭೇಟಿಗೆ ಅವಕಾಶ ಮಾಡಿಕೊಡುವೆ ಎಂದು ರೈತರಿಗೆ ತಿಳಿಸಿದ್ದೇನೆ. ಒಂದು ವಾರದ ಹಿಂದೆ ಪ್ರತಿಭಟನೆ ವೇಳೆ ನಾನೇ ಬಂದು ರೈತರ ಜೊತೆ ಮಾತನಾಡಿದ್ದೆ ಇಂದು ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ, ಶಿವಾಜಿ ಮೂರ್ತಿಗೆ ಅವಮಾನ, ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದರು.
ರಾಜೀನಾಮೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಸ್ವಚ್ಛವಾದಂತಹ ಆಡಳಿತ ಮಾಡಿಕೊಂಡು ಬಂದಿದ್ದೇನೆ. ನಾನು ಮಂತ್ರಿ ಆದ ಮೇಲೆ ಇದು ಆದಂತದ್ದಲ್ಲ. 18 ವರ್ಷಗಳ ಹಿಂದೆ ನಾನು ರಾಜಕಾರಣದಲ್ಲಿ ಇರಲಿಲ್ಲ. ಆ ಸಂದರ್ಭದಲ್ಲಿ ನಾನು ಒಬ್ಬ ವ್ಯಾಪಾರಸ್ಥನಾಗಿ ಆ ಜಮೀನು ಖರೀದಿ ಮಾಡಿದ್ದೆ. ನಿನ್ನೆ ಅದರ ಪರವಾಗಿ ಆ ಕುಟುಂಬದ 160ಕ್ಕೂ ಹೆಚ್ಚು ಹೇಳಿಕೆ ಕೊಟ್ಟು ವೈರಲ್ ಆಗಿದೆ.
ಬೈರತಿ ಬಸವರಾಜ ಯಾವುದೇ ಮೋಸ ಮಾಡಿಲ್ಲ. ನಮಗೆ ಹಣ ಕೊಟ್ಟು ಜಮೀನು ಖರೀದಿ ಮಾಡಿದ್ದರು ಅಂತಾ ಹೇಳಿದ್ದಾರೆ. ಆ ಕುಟುಂಬದಲ್ಲಿ ಒಬ್ಬ ಮಾದಪ್ಪ ಅನ್ನೋರು ಆರೋಪ ಮಾಡಿದ್ದು, ನನಗೆ ಗೊತ್ತಿಲ್ಲದೇ ಜನಪ್ರತಿನಿಧಿ ಕೋರ್ಟಿಗೆ ಹಾಕಿದ್ದಾರೆ. ಅದಕ್ಕೆ ನಮ್ಮ ವಕೀಲರು ಉತ್ತರ ಕೊಡ್ತಾರೆ. ನ್ಯಾಯಾಲಯಕ್ಕೆ ಗೌರವ ಕೊಡ್ತೀನಿ. ಎಲ್ಲೋ ಒಂದಕಡೆ ರಾಜಕೀಯ ಚಾರಿತ್ರ್ಯ ವಧೆ ಉದ್ದೇಶದಿಂದ ಯಾರೋ ಕಿಡಿಗೇಡಿಗಳು ಇದನ್ನ ಮುನ್ನಲೆಗೆ ತಂದಿದ್ದಾರೆ. ಅದಕ್ಕೆ ತಕ್ಕ ಉತ್ತರ ನ್ಯಾಯಾಲಯದಲ್ಲಿ ಕೊಡ್ತೀನಿ ಎಂದರು.
ಇದನ್ನೂ ಓದಿ: ಬೆಳಗಾವಿ ಅಧಿವೇಶನ: ವಿಧಾನಸಭೆಯಲ್ಲಿ 4 ಪ್ರಮುಖ ವಿಧೇಯಕಗಳಿಗೆ ಅಂಗೀಕಾರ