ETV Bharat / state

ಗೃಹ ಸಚಿವನಾಗಿ ಹರ್ಷ ಕೊಲೆ ಆರೋಪಿಗಳಿಗೆ ಫೈರಿಂಗ್ ಮಾಡೋಕಾಗುತ್ತಾ? ಆರಗ ಜ್ಞಾನೇಂದ್ರ - harsha murder case investigation

ಹರ್ಷ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಲು ಸರ್ಕಾರ ಎಲ್ಲ ಪ್ರಯತ್ನ ಮಾಡಿದೆ- ಜೈಲಿನಲ್ಲಿ ರಾಜಾಥಿತ್ಯ ನೀಡಿಲ್ಲ-ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ

minister Araga Jnanendra
ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Jul 7, 2022, 7:30 PM IST

Updated : Jul 7, 2022, 7:38 PM IST

ಬೆಳಗಾವಿ: ಶಿವಮೊಗ್ಗ ಜಿಲ್ಲೆಯ ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ನನ್ನ ಮಾತು ಕೇಳುವ ವ್ಯವದಾನ ಇಲ್ಲ. ಅವರು ಹೇಳಿದ ರೀತಿಯಲ್ಲಿ ನಾನು ಮಾಡಲಿಕ್ಕೆ ಆಗೋದಿಲ್ಲ. ಕಾನೂನು ಪ್ರಕಾರ ನಡೆದುಕೊಳ್ಳಬೇಕಾಗುತ್ತೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಕುಡಚಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಬ್ಬ ಗೃಹ ಸಚಿವನಾಗಿ ಆರೋಪಿಗಳನ್ನು ಎಳೆದು ತಂದು ಅವರ ಮುಂದೆ ಫೈರಿಂಗ್ ಮಾಡಲು ಆಗುತ್ತಾ? ಎಂದು ಪ್ರಶ್ನಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ

ಕೊಲೆ ಆರೋಪಿಗಳು ಜೈಲಿನಲ್ಲಿ ಫೋನ್ ಬಳಕೆ ಮಾಡಿರುವುದು ಕಂಡುಬಂದ ತಕ್ಷಣವೇ ಕ್ರಮ ಆಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕಳುಹಿಸಿ ಜೈಲನ್ನೇ ಜಾಲಾಡಿಸಿದ್ದೇವೆ. ಮೊದಲು ಸೀಜ್ ಮಾಡುವ ಪ್ರಕ್ರಿಯೆ ಮಾತ್ರ ಇತ್ತು. ಈಗ ಕೈದಿಗಳ ಮೇಲೆ ಹಾಗೂ ಒಳಗೆ ಬಿಟ್ಟ ಸಿಬ್ಬಂದಿಯ ಮೇಲೂ ಎಫ್​ಐಆರ್ ಆಗಿದೆ ಎಂದು ತಿಳಿಸಿದರು.

ಪಿಎಸ್ಐ ಅಭ್ಯರ್ಥಿಗಳ ಕಣ್ಣೀರು: ರಾಯಬಾಗ ತಾಲೂಕಿನ ಕುಡಚಿ ಪೊಲೀಸ್ ಠಾಣೆ ಉದ್ಘಾಟನಾ ಸಮಾರಂಭದಲ್ಲಿ ಪಿಎಸ್ಐ ಅಭ್ಯರ್ಥಿಗಳು ಕಣ್ಣೀರು ಹಾಕಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ತನಿಖೆ ಮುಗಿದ ಬಳಿಕ ನಮಗೆ ನ್ಯಾಯ ಕೂಡಿಸುವಂತೆ ಪಿಎಸ್ಐ ಅಭ್ಯರ್ಥಿಗಳು ಗೃಹ ಸಚಿವರಿಗೆ ಕೈಮುಗಿದು ಬೇಡಿಕೊಂಡರು. ಈ ವೇಳೆ ಗೃಹ ಸಚಿವರು ನ್ಯಾಯಯುತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಬಳಿಕ ನಿಮಗೆ ನ್ಯಾಯ ಕೊಡಿಸುತ್ತೇವೆಂದು ಭರವಸೆ ನೀಡಿದರು.

ಜಿಲ್ಲೆಯ ಕೆರೂರ ಪಟ್ಟಣದಲ್ಲಿ ನಡೆದ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯಿಸಿ, 3-4 ಜನರಿಗೆ ಚೂರಿ ಇರಿತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಪಿಎಸ್ಐ ಅಭ್ಯರ್ಥಿಗಳ ಕಣ್ಣೀರು

ರಾಜಕೀಯ ನಾಯಕರ ಆಸ್ತಿ ಘೋಷಣೆ ಬಾಕಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಈ ಹಿಂದೆ ಯಾವಾಗಲೂ ಸಮಯಕ್ಕೆ ಸರಿಯಾಗಿಯೇ ನಾನು ಆಸ್ತಿ ಘೋಷಣೆ ಮಾಡುತ್ತಿದ್ದೆ. ಈ ಬಾರಿ ಬಿಡುವು ಸಿಗದೇ ಇರುವುದರಿಂದ ಆಸ್ತಿ ಘೋಷಣೆ ಮಾಡಲು ಸಾಧ್ಯವಾಗಿಲ್ಲ. ಇನ್ನೂ‌ ಒಂದು ತಿಂಗಳು ಅವಕಾಶ ಕೊಡ್ತಾರೆ. ಹೀಗಾಗಿ ನಾನು ಒಂದು ವಾರದ ಅವಧಿಯಲ್ಲಿ ಆಸ್ತಿ ಘೋಷಣೆ ಮಾಡುತ್ತೇನೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

ಗುರೂಜಿ ಕೊಲೆ ಪ್ರಕರಣ: ಹುಬ್ಬಳ್ಳಿಯಲ್ಲಿ ಸರಳವಾಸ್ತು ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ ರಾಮದುರ್ಗ ಪೊಲೀಸರಿಗೆ ಕುಡಚಿ ಪಟ್ಟಣದಲ್ಲಿ ಗೃಹ ಸಚಿವರು ಸತ್ಕಾರ ಮಾಡಿದರು. ಈ ವೇಳೆ ಡಿವೈಎಸ್ಪಿ ಹಾಗೂ 25ಕ್ಕೂ ಹೆಚ್ಚು ಪೊಲೀಸರ ತಂಡಕ್ಕೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು. ಕೊಲೆ ನಡೆದು 4 ಗಂಟೆಯಲ್ಲಿಯೇ ಇಬ್ಬರು ಆರೋಪಿಗಳನ್ನು ರಾಮದುರ್ಗ ಪೊಲೀಸರ ತಂಡ ರಾಮದುರ್ಗದ ಮುಳ್ಳೂರು ಗುಡ್ಡದ ಬಳಿ ಬಂಧಿಸಿದ್ದಾರೆ. ಜೆಸಿಬಿಯಿಂದ ರಸ್ತೆ ತಡೆದು ಕೈಯಲ್ಲಿ ಗನ್ ಹಿಡಿದು ಸಿನಿಮೀಯ ರೀತಿಯಲ್ಲಿ ಆರೋಪಿಗಳನನ್ನು ವಶಕ್ಕೆ ಪಡೆದಿದ್ದರು. ಹೀಗಾಗಿ ಜೆಸಿಬಿ ಚಾಲಕ ಸಂಜು ಮೊಹಿತೆ ಅವರಿಗೂ ಗೃಹ ಸಚಿವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.

ಇದನ್ನೂ ಓದಿ: ಗೃಹ ಸಚಿವರ ವಿರುದ್ಧ ಹರ್ಷ ಕುಟುಂಬ ಅಸಮಾಧಾನ.. ಕಾರಣ?

ನಿಪ್ಪಾಣಿ ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಉದ್ಘಾಟನೆಗೆ ಗೃಹ ಸಚಿವರ ಜೊತೆ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ಆಗಮಿಸಿದ್ದರು.

Last Updated : Jul 7, 2022, 7:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.