ETV Bharat / state

ಇದು ಯಾರ ತಪ್ಪು..? ವಲಸೆ ಕಾರ್ಮಿಕರಿಗೆ ಯಾಕೆ ಈ ಶಿಕ್ಷೆ...?

ಅಂತಾರಾಜ್ಯಗಳಿಗೆ ಹೋಗಬೇಕಿದ್ದ ವಲಸೆ ಕಾರ್ಮಿಕರನ್ನು ಬೆಂಗಳೂರಿನಿಂದ ಬೆಳಗಾವಿಗೆ ತಂದು ಬಿಡಲಾಗಿದೆ. ಸದ್ಯ ಅವರನ್ನು ಕ್ವಾರಂಟೈನ್​ ಮಾಡಲಾಗಿದ್ದು, ಸರ್ಕಾರ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಕಾರ್ಮಿಕರು ಮನವಿ ಮಾಡಿದ್ದಾರೆ.

author img

By

Published : May 7, 2020, 7:19 PM IST

migrant workers have huge problems
ದಿನಸಿ ವಿತರಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಅಧಿಕಾರಿಗಳ ಬೇಜವಾಬ್ದಾರಿಯೋ ಅಥವಾ ಸರ್ಕಾರದ ನಿರ್ಲಕ್ಷ್ಯವೋ ಇದಕ್ಕೆ ಬಲಿಯಾಗುತ್ತಿರುವುದು ಮಾತ್ರ ವಲಸೆ ಕಾರ್ಮಿಕರು. ಸರ್ಕಾರದ ಉಚಿತ ಬಸ್​ ವ್ಯವಸ್ಥೆಯಲ್ಲಿ ಬೆಂಗಳೂರಿನಲ್ಲಿದ್ದ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಹೀಗೆ ಬೇರೆ ರಾಜ್ಯಗಳ ಸುಮಾರು 50 ವಲಸೆ ಕಾರ್ಮಿಕರನ್ನು ಕರೆದುಕೊಂಡು ಬೆಳಗಾವಿಯಲ್ಲಿ ಬಿಡಲಾಗಿದೆ.

ಕೇಂದ್ರ ಗೃಹ ಇಲಾಖೆ ಆದೇಶದಂತೆ ರಾಜ್ಯ ಸರ್ಕಾರ ಕಲ್ಪಿಸಿದ ಉಚಿತ ಬಸ್​ ವ್ಯವಸ್ಥೆಯಿಂದ ಕಾರ್ಮಿಕರು ಮತ್ತಷ್ಟು ಅತಂತ್ರರಾಗಿದ್ದಾರೆ. ಇವರನ್ನು ಬಸ್ ಹತ್ತುವಾಗ ಯಾರೂ ಕೇಳಿಲ್ಲ, ಇವರು ಕೂಡಾ ಹೇಳಿಲ್ಲ. ಹೀಗಾಗಿ ಅವರೆಲ್ಲ ರಾತ್ರಿ ಬೆಂಗಳೂರಿಂದ ಪ್ರಯಾಣಿಸಿ ಬೆಳಗ್ಗೆ ಬೆಳಗಾವಿಗೆ ಬಂದಿಳಿದಿದ್ದಾರೆ. ಇವರನ್ನು ಕ್ವಾರಂಟೈನ್​ ಮಾಡಲು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ಕೂಡಲೇ ಸರ್ಕಾರ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ. ಸದ್ಯ ಹಾಲಭಾವಿ ಮೋರಾರ್ಜಿ ದೇಸಾಯಿ ಶಾಲಾ ಆವರಣದಲ್ಲಿ ಅವರನ್ನೆಲ್ಲ ಕ್ವಾರಂಟೈನ್ ಮಾಡಲಾಗಿದೆ.

ದಿನಸಿ ವಿತರಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​​​​: ಬೆಳಗಾವಿಗೆ ಬಂದ ಅಂತಾರಾಜ್ಯಗಳ ಕಾರ್ಮಿಕರನ್ನು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​​​​ ಭೇಟಿಯಾಗಿ ಧೈರ್ಯ ತುಂಬಿದರು. ಇದಲ್ಲದೇ ಅವರಿಗೆಲ್ಲ ಆಹಾರದ ಪೊಟ್ಟಣ ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸಿದರು.

ಅವರಿಗೆ ಬೇಕಾಗುವ ರೊಟ್ಟಿ- ಸಬ್ಜಿ ಮುಂತಾದ ಆಹಾರ ಪದಾರ್ಥಗಳನ್ನು ಒದಗಿಸಲಾಗಿದೆ. ಜಿಲ್ಲಾಡಳಿತದಿಂದ ಅವರ ಊರುಗಳಿಗೆ ತಲುಪಿಸಲು ಮುಂದಿರುವ ಮಾರ್ಗಗಳ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ. ಮಹಾನಗರ ಪಾಲಿಕೆ ಉಪ ಆಯುಕ್ತ ಎಸ್. ಬಿ. ದೊಡ್ಡಗೌಡರ ಮತ್ತು ಸಿಬ್ಬಂದಿ ಈ ವೇಳೆ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.