ಬೆಳಗಾವಿ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ನಿರ್ಧಾರವನ್ನು ಸ್ವಾಗತಿಸದೆ ಪ್ರಾಧಿಕಾರಕ್ಕೆ ನಾಡದ್ರೋಹಿ ಎಂಇಎಸ್ ವಿರೋಧ ವ್ಯಕ್ತಪಡಿಸಿ ಮತ್ತೆ ಉದ್ಧಟತನ ಮೆರೆಯುತ್ತಿದೆ.
ರಾಜ್ಯದಲ್ಲಿರುವ ಮರಾಠ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ರಚಿಸಿರುವ ಪ್ರಾಧಿಕಾರಕ್ಕೆ ನಾಡದ್ರೋಹಿ ಎಂಇಎಸ್ ವಿರೋಧ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಎಂಇಎಸ್ ತೀವ್ರ ಹತಾಶೆಗೊಳಗಾಗಿದ್ದು, ಬೆಳಗಾವಿಯಲ್ಲಿ ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎಂಇಎಸ್ ನಾಯಕರನ್ನು ಕಾಡುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಚಿತ್ರಗಳನ್ನು ಪೋಸ್ಟ್ ಮಾಡಿ ಎಂಇಎಸ್ ಉದ್ಧಟತನ ಪ್ರದರ್ಶಿಸುತ್ತಿದೆ. ನಮಗೆ ಪ್ರಾಧಿಕಾರ ಬೇಡ, 50 ಕೋಟಿ ರೂ. ಬೇಡ, ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ಕಣ್ಣೀರು ಹಾಕಲಾಗುತ್ತಿದೆ. ಮರಾಠಿಯಲ್ಲಿ ಸರ್ಕಾರಿ ದಾಖಲೆ ನೀಡಿ, ಮರಾಠಿ ಬೋರ್ಡ್ ಹಾಕಿಸಿ ಎಂದು ಪುಂಡಾಟಿಕೆ ಪ್ರದರ್ಶಿಸಲಾಗುತ್ತಿದೆ. ಎಂಇಎಸ್ನ ಈ ಉದ್ಧಟತನಕ್ಕೆ ಮರಾಠಾ ಸಮುದಾಯದವರಿಂದಲೇ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ.