ಅಥಣಿ/ಬೆಳಗಾವಿ: ಕೊರೊನಾ ವೈರಸ್ ಹರಡದಂತೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಗಳನ್ನು ಸರ್ಕಾರದ ನಿರ್ದೇಶನದಂತೆ ನಿಲ್ಲಿಸಿ ಎಂದು ಮುಸ್ಲಿಂ ಸಮುದಾಯಕ್ಕೆ ಮುಖಂಡ ಅಸ್ಲಾಂ ನಾಲಬಂದ ಹೇಳಿದರು .
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸ್ವಗೃಹದಲ್ಲಿ ಮಾತನಾಡಿದ ಅವರು ಕೆಲವೆಡೆ ಪ್ರಾರ್ಥನೆ ಮಾಡಲು ಹೋಗಿ ಲಾಠಿಯಿಂದ ಬಡಿಸಿಕೊಂಡಿರುವ ಘಟನೆ ನಡೆದಿದೆ. ಸದ್ಯದ ಸ್ಥಿತಿಯಲ್ಲಿ ಸಾಮೂಹಿಕ ಪ್ರಾಥನೆಯನ್ನ ಸರಕಾರವು ನಿಷೇಧಿಸಿದೆ. ಆದರೆ, ನಿಮ್ಮ ಮನೆಯಲ್ಲಿ ಪ್ರಾರ್ಥನೆ ಮಾಡಲು ಯಾವುದೇ ನಿಷೇಧ ವಿಧಿಸಿಲ್ಲ. ನಿಮ್ಮ ಮನೆಯಲ್ಲಿ ಪ್ರಾರ್ಥನೆ ಮಾಡಿ ಎಂದರು.
ಅಷ್ಟೇ ಅಲ್ಲದೆ ಮದುವೆ ಸಮಾರಂಭಗಳು ಮತ್ತು ಜಾತ್ರೆಗಳು ಇನ್ನಿತರ ಸಾರ್ವಜನಿಕ ಎಲ್ಲಾ ಕಾರ್ಯಕ್ರಮಗಳನ್ನು ಸರ್ಕಾರ ರದ್ದುಮಾಡಿದೆ. ಎಲ್ಲ ಸಮಾಜದವರು ಕೊರೊನಾ ವಿರುದ್ಧ ಹೋರಾಡಲು ಸಿದ್ಧರಾಗಿ. ಅನಾವಶ್ಯಕವಾಗಿ ಮನೆಯಿಂದ ಯಾರೂ ಹೊರಗೆ ಬರಬೇಡಿ ಎಲ್ಲರೂ ತಮ್ಮ ತಮ್ಮ ಮನೆಯಲ್ಲೇ ಇರಿ , ನಿಮ್ಮ ಆರೋಗ್ಯ ನಿಮ್ಮ ಸುರಕ್ಷತೆಗಾಗಿ ದಯಮಾಡಿ ನಾನು ವಿನಂತಿ ಮಾಡಿಕೊಳ್ಳುತ್ತೇನೆ, ಯಾರೂ ಸಾಮೂಹಿಕ ಪ್ರಾರ್ಥನೆಗೆ ಪ್ರಯತ್ನಿಸದಿರಿ ಇದು ನಿಮ್ಮ ಜೀವನದ ಪ್ರಶ್ನೆಯಾಗಿದೆ ಎಂದ್ರು..