ಬೆಳಗಾವಿ: ಮಹಾರಾಷ್ಟ್ರ ರಾಜ್ಯದ ಮೀರಜ್ನಿಂದ ಬೆಳಗಾವಿ ನಗರಕ್ಕೆ ಅಕ್ರಮವಾಗಿ ಗಾಂಜಾ ಸರಬರಾಜು ಮಾಡುತ್ತಿದ್ದ ಅಂತಾರಾಜ್ಯ ಆರೋಪಿಯೋರ್ವನನ್ನು ಮಹಾನಗರ ಪೊಲೀಸರು ಬಂಧಿಸಿದ್ದಾರೆ. ಆತನ ಬಳಿಯಿದ್ದ ಒಂದೂವರೆ ಲಕ್ಷ ಮೌಲ್ಯದ 5 ಕೆಜಿ ಗಾಂಜಾ ವಶಪಡಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಮೀರಜ್ ನಗರದ ಶಬೀರ್ ಪಠಾಣ (33) ಬಂಧಿತ ಆರೋಪಿ. ಈತ ಮಹಾರಾಷ್ಟ್ರದಿಂದ ಬೆಳಗಾವಿ ನಗರಕ್ಕೆ ಗಾಂಜಾ ಮಾರಾಟ ಮಾಡಲು ಬಂದಿದ್ದಾನೆ. ಈ ವೇಳೆ ಪೊಲೀಸರು ಆತನ ಮೇಲೆ ದಾಳಿ ನಡೆಸಿ, ಬಂಧಿಸಿದ್ದಾರೆ.
ಓದಿ: 11 ತಿಂಗಳ ಬಳಿಕ ಒಳ್ಳೇ ಸುದ್ದಿ.. ಬೆಳಗಾವಿಯಲ್ಲಿಂದು ಯಾರಲ್ಲೂ ಪತ್ತೆಯಾಗಿಲ್ಲ ಕೊರೊನಾ ಸೋಂಕು..
ಆತನ ಬಳಿ ಇದ್ದ ಒಟ್ಟು ಒಂದು ಲಕ್ಷ ಐವತ್ತು ಸಾವಿರ ರೂ. ಮೌಲ್ಯದ ಒಟ್ಟು 5 ಕೆ.ಜಿ 400 ಗ್ರಾಮ ಗಾಂಜಾ (ಮಾದಕ ವಸ್ತು) ಹಾಗೂ ಒಂದು ಟಿವಿಎಸ್ ಕಂಪನಿಯ ಸ್ಪೋರ್ಟ್ಸ್ ಮೋಟಾರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆ ಮಾಡಿರುವ ತಂಡಕ್ಕೆ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಡಾ. ವಿಕ್ರಮ ಆಮಟೆ ಶ್ಲಾಘಿಸಿದ್ದಾರೆ.