ETV Bharat / state

ಬೆಳಗಾವಿ; ವಿವಾಹಿತ ಬಾಲಕಿ ಹತ್ಯೆಗೈದು ಸುಟ್ಟು ಹಾಕಿದವರ ಕ್ರಮಕ್ಕೆ ಒತ್ತಾಯ

ಮದುವೆ ಹೆಸರಿನಲ್ಲಿ ಮಕ್ಕಳ ಸಾಗಾಣಿಕೆ ಅಧಿಕವಾಗುತ್ತಿದ್ದು, ಅಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ವಿರೋಧಿ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು.

protest against state government
ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ವಿರೋಧಿ ಸಂಘಟನೆಯಿಂದ ಪ್ರತಿಭಟನೆ
author img

By

Published : Jan 6, 2021, 4:27 PM IST

ಬೆಳಗಾವಿ: ವಿವಾಹಿತ ಬಾಲಕಿಯನ್ನು ಕೊಲೆಗೈದು ಸುಟ್ಟು ಹಾಕಿರುವ ಕಿರಾತಕರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ವಿರೋಧಿ ಸಂಘಟನೆ ಸದಸ್ಯರು ನಗರದ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಡಿಸಿಪಿ ಡಾ. ವಿಕ್ರಮ್​​​ ಆಮ್ಟೆ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ...ಬೆಳಗಾವಿಯ ಎರಡು ದೇವಸ್ಥಾನಗಳಲ್ಲಿ ಆಭರಣ ಕದ್ದು ಖದೀಮರು ಪರಾರಿ

ಹಗೇದಾಳ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಬಡ ಕುಟುಂಬದವರು ತಮ್ಮ 16 ವರ್ಷದ ಮಗಳನ್ನು ಹುದಲಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಮದುವೆ ಮಾಡಿಕೊಟ್ಟಿದ್ದರು. ನಂತರ ಮಗಳನ್ನು ಗಂಡನ ಮನೆಗೆ ಕಳುಹಿಸಿ ಆ ಕುಟುಂಬ ಮತ್ತೆ ಕೂಲಿ ಕೆಲಸಕ್ಕೆ ಬೆಂಗಳೂರಿಗೆ ತೆರಳಿತ್ತು.

ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ವಿರೋಧಿ ಸಂಘಟನೆಯಿಂದ ಪ್ರತಿಭಟನೆ

ಗಂಡನ ಮನೆಗೆ ಕಳುಹಿಸಿದ ಮರುದಿನವೇ ಮಗಳು ಮೃತಪಟ್ಟ ಸುದ್ದಿ ಗೊತ್ತಾಯಿತು. ಕುಟುಂಬಸ್ಥರು ಮಗಳನ್ನು ನೋಡಲು ಊರಿಗೆ ಬರುವಷ್ಟರಲ್ಲಿ ಮೃತದೇಹವನ್ನು ಸುಟ್ಟು ಹಾಕಲಾಗಿದೆ. ಆದರೆ, ಪೊಲೀಸರು ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಕೊರೊನಾ ಸಂದರ್ಭದಲ್ಲಿ ಮಕ್ಕಳ ಸಾಗಾಣಿಕೆ, ಬಾಲ್ಯವಿವಾಹ ಹೆಚ್ಚಳ ಕಂಡಿವೆ. ಚಿಕ್ಕೋಡಿ, ರಾಯಬಾಗ, ಬೈಲಹೊಂಗಲ, ಸವದತ್ತಿ ಸೇರಿದಂತೆ ಹಲವೆಡೆ ಏಜೆಂಟರು ಮದುವೆ ಹೆಸರಲ್ಲಿ ಮಕ್ಕಳ ಸಾಗಾಟ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಅಂತಹವರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.