ಬೆಳಗಾವಿ: ಆಲಮಟ್ಟಿ ಜಲಾಶಯದಿಂದ ಕೊಲ್ಲಾಪುರ ಹಾಗೂ ಸಾತಾರಾ ಜಿಲ್ಲೆಯಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ಹೀಗಾಗಿ ಆಲಮಟ್ಟಿ ಜಲಾಶಯ ಎತ್ತರಿಸದಂತೆ ಕೊಲ್ಲಾಪುರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ಮಹಾ ಶಾಸಕ ರಾಜು ಶೆಟ್ಟಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಮಹಾರಾಷ್ಟ್ರ ಕೊಲ್ಲಾಪುರ ವಿಮಾನ ನಿಲ್ದಾಣದಲ್ಲಿ, ಮಹಾರಾಷ್ಟ್ರದ ಸ್ವಾಭಿಮಾನಿ ಶೆತ್ಕರಿ ಸಂಘಟನೆ ಶಾಸಕ ರಾಜು ಶೆಟ್ಟಿ ನೇತೃತ್ವದಲ್ಲಿ ಸಿಎಂ ಬೊಮ್ಮಾಯಿಗೆ ಮನವಿ ಸಲ್ಲಿಸಲಾಯಿತು. ಇಂದು ಕೊಲ್ಲಾಪುರದ ಕನ್ಹೇರಿ ಮಠದ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದ್ದರು.
ಆಲಮಟ್ಟಿ ಜಲಾಶಯದಿಂದ ಕೊಲ್ಲಾಪುರ ಹಾಗೂ ಸಾತಾರಾ ಜಿಲ್ಲೆಯಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ರೈತರ ಹೊಲ ಗದ್ದೆಗಳಲ್ಲಿ ನೀರು ನಿಂತು ಬೆಳೆ ನಾಶ ಆಗುತ್ತಿದೆ. ಈಗ ಮತ್ತೆ ಜಲಾಶಯ ಎತ್ತರಿಸಿದರೆ ಮತ್ತಷ್ಟು ಹಾನಿಯಾಗಲಿದೆ. ಹೀಗಾಗಿ ಕರ್ನಾಟಕ ಸರ್ಕಾರ ಆಲಮಟ್ಟಿ ಜಲಾಶಯ ಎತ್ತರಿಸಬಾರದು ಎಂದು ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಮುಲಾಯಂ ಸಿಂಗ್ ಯಾದವ್ ನಿಧನ: ಸಿಎಂ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆಯಿಂದ ಸಂತಾಪ