ಚಿಕ್ಕೋಡಿ: ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಚಿಕ್ಕೋಡಿ ವ್ಯಾಪ್ತಿಯ ನಾಲ್ಕು ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿವೆ. ಇದರಿಂದ ನದಿ ತೀರದ ಜನರಲ್ಲಿ ಆತಂಕ ಮನೆಮಾಡಿದೆ.
ಕೃಷ್ಣಾ ನದಿಗೆ 1,25,000 ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿದ್ದು, ಚಿಕ್ಕೋಡಿ ವ್ಯಾಪ್ತಿಯ 81 ಗ್ರಾಮಗಳಲ್ಲಿ ಸದ್ಯ ಪ್ರವಾಹದ ಭೀತಿ ಎದುರಾಗಿದೆ. ನದಿ ತೀರದಲ್ಲಿ ಜನ ಜಾನುವಾರುಗಳು ತೆರಳದಂತೆ ಮತ್ತು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಸೂಚಿಸಿದ್ದಾರೆ.
ಈಗಾಗಲೇ ನದಿ ತೀರದಲ್ಲಿರುವ ಯಡೂರ - ಕಲ್ಲೋಳ, ಕಾರದಗ- ಬೋಜ, ಬೋಜವಾಡಿ - ಕುನ್ನೂರ, ಮಲಿಕವಾಡ - ದತ್ತವಾಡ ಗ್ರಾಮಗಳ ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ.