ಚಿಕ್ಕೋಡಿ: ಕೊರೊನಾ ಭೀತಿಯಿಂದಾಗಿ 5 ವರ್ಷಕ್ಕೊಮ್ಮೆ ನಡೆಯುತ್ತಿದ್ದ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ ರದ್ದಾಗಿದೆ. ಮೇ 14ರಂದು ನಡೆಯಬೇಕಿದ್ದ ರಾಯಬಾಗ ಗ್ರಾಮ ದೇವತೆ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರೆಯನ್ನು ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ.
ಪ್ರತಿ ಐದು ವರ್ಷಕ್ಕೊಮ್ಮೆ ಈ ಜಾತ್ರೆ ನಡೆಯುತ್ತದೆ. ಕೊರೊನಾ ಮಹಾಮಾರಿಯನ್ನು ಹೋಗಲಾಡಿಸುವ ಸಲುವಾಗಿ ದೇವರಲ್ಲಿ ಪ್ರಾರ್ಥಿಸಲು ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರು ಏ. 28 ಹಾಗೂ ಮೇ. 1, 5, 8 ಮತ್ತು 12ರಂದು ಐದು ವಾರ ಪೂಜೆ ಮಾಡಿ ವ್ರತ ಪಾಲಿಸಬೇಕಿದೆ. ಮೇ 15ರಂದು ಶ್ರೀ ಮಹಾಲಕ್ಷ್ಮೀ ದೇವಿಗೆ ಅಂಬಲಿ, ಕಿಚಡಿ ಮಾಡಿ ಮನೆಯಲ್ಲಿಯೇ ನೈವೇದ್ಯ ಸಮರ್ಪಿಸಬೇಕು ಎಂದು ಜಾತ್ರಾ ಸಮಿತಿಯವರು ಕೋರಿದ್ದಾರೆ.