ಅಥಣಿ(ಬೆಳಗಾವಿ): ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ಮಾಜಿ ಸಚಿವ ಎಂ ಬಿ ಪಾಟೀಲ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಕೃಷ್ಣಾ ನದಿ ಪ್ರವಾಹಕ್ಕೆ ಒಳಗಾದ ತೀರ್ಥ ಗ್ರಾಮದಲ್ಲಿ ಪ್ರಚಾರ ನಡೆಸಿದರು.
ಪ್ರಚಾರದ ವೇಳೆ ಮಹೇಶ್ ಕುಮಟಳ್ಳಿ ವಿರುದ್ಧ ಮಾತನಾಡಿದ ಎಂ ಬಿ ಪಾಟೀಲ್, ಇಲ್ಲಿ ನಿವು ಕಷ್ಟ ಪಡುತ್ತಿದ್ದರೆ, ಅನರ್ಹರು ಬಾಂಬೆಯಲ್ಲಿ ಆರಾಮವಾಗಿ ಇದ್ರು, ನಿಮಗೆ ಮೋಸ ಮಾಡಿದ ಮನುಷ್ಯನನ್ನು ಊರಿನ ಒಳಗಡೆ ಪ್ರವೇಶ ಕೋಡಬೇಡಿ ಎಂದು ಹರಿಹಾಯ್ದರು.
ದಿನದಿಂದ ದಿನಕ್ಕೆ ಅಥಣಿಯಲ್ಲಿ ಪ್ರಚಾರ ರಂಗೇರುತ್ತಿದ್ದು, ಮೂರು ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಮತಬೇಟೆ ನಡೆಸುತ್ತಿದ್ದಾರೆ.