ETV Bharat / state

ಕಲ್ಲಂಗಡಿ ಬೆಳೆದು ಸಿಹಿ ಕನಸು ಕಂಡ ರೈತನ ಬದುಕು 'ಕೊರೊನಾ'ಜನಕ

author img

By

Published : May 30, 2021, 10:22 AM IST

ಅಥಣಿ ತಾಲೂಕಿನಲ್ಲಿ ಬೇಸಿಗೆ ಸಂದರ್ಭದಲ್ಲಿ ಮೂವತ್ತಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಯಾದ ಕಲ್ಲಂಗಡಿಯನ್ನು ಬೆಳೆಯುತ್ತಾರೆ. ಆದರೆ ಕೊರೊನಾ ಲಾಕ್​ಡೌನ್​ ಕಾರಣದಿಂದ ಬೆಳೆದ ಬೆಳೆ ಮಾರಾಟವಾಗದೆ ತೋಟದಲ್ಲೇ ಕೊಳೆಯುತ್ತಿದೆ.

watermelon
ಕಲ್ಲಂಗಡಿ

ಅಥಣಿ(ಬೆಳಗಾವಿ): ರಾಜ್ಯದಲ್ಲಿ ಕೊರೊನಾ ಉಲ್ಬಣದಿಂದ ರಾಜ್ಯ ಸರ್ಕಾರ ಕಳೆದ ಇಪ್ಪತ್ತು ದಿನಗಳಿಂದ ಲಾಕ್​ಡೌನ್ ಜಾರಿ ಮಾಡಿದೆ. ಪರಿಣಾಮ ತಾಲೂಕಿನ ಕಲ್ಲಂಗಡಿ ಬೆಳೆಗಾರರ ಮೇಲೆ ಅದು ನೇರ ಪರಿಣಾಮ ಬಿಸಿ ರೈತರು ಕಂಗಾಲಾಗಿದ್ದಾರೆ.

ಕಲ್ಲಂಗಡಿ ಬೆಳೆದು ಸಂಕಷ್ಟಕ್ಕೆ ಸಿಲುಕಿದ ರೈತ

ತಾಲೂಕಿನಲ್ಲಿ ಬೇಸಿಗೆ ಸಂದರ್ಭದಲ್ಲಿ ಮೂವತ್ತಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಯಾದ ಕಲ್ಲಂಗಡಿ ಬೆಳೆಯುತ್ತಾರೆ. ಆದರೆ ಬೇಸಿಗೆ ವೇಳೆಯಲ್ಲಿ ದಿಢೀರನೆ ಕೊರೊನಾ ಸೋಂಕು ಉಲ್ಬಣದಿಂದ ರೈತರಿಗೆ ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ರಾಜ್ಯದ ವಿವಿಧ ಭಾಗಗಳಿಗೆ ಮತ್ತು ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗೋವಾ, ಆಂಧ್ರಪ್ರದೇಶ ರಾಜ್ಯಗಳಿಗೆ ಪ್ರತಿನಿತ್ಯ ಲೋಡುಗಟ್ಟಲೆ ತಾಲೂಕಿನಿಂದ ಕಲ್ಲಂಗಡಿ ಸರಬರಾಜು ಆಗುತ್ತಿತ್ತು, ಸದ್ಯ ರಾಜ್ಯದಲ್ಲಿ ಲಾಕ್​ಡೌನ್ ಹಾಗೂ ಹಣ್ಣಿಗೆ ಬೇಡಿಕೆ ಇಲ್ಲದೆ ರೈತರ ಜಮೀನಲ್ಲಿ ರಾಶಿ ರಾಶಿ ಕಲ್ಲಂಗಡಿ ಹಣ್ಣು ಕೊಳೆಯುತ್ತಿದೆ.

ಈಟಿವಿ ಭಾರತ ಜೊತೆ ರೈತ ಜಾವೀದ್ ನದಾಫ್ ಮಾತನಾಡಿ, ಒಂದು ಎಕರೆ ಕಲ್ಲಂಗಡಿ ಬೆಳೆಯಲು 70 ಸಾವಿರ ರೂಪಾಯಿ ಖರ್ಚಾಗುತ್ತದೆ. ನಾನು ಎರಡು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದೆ. ಕಳೆದ ಬಾರಿ ಕೊರೊನಾ ಸಂದರ್ಭದಲ್ಲಿ ನನಗೆ ಇದೆ ರೀತೀಯಿಂದ ನಷ್ಟ ಸಂಭವಿಸಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿತ್ತು. ಈ ಬಾರಿ ಒಳ್ಳೆದಾಗುತ್ತದೆಂದು ಮತ್ತೆ ಬೆಳೆದೆ. ಆದರೆ ಈ ಬಾರಿಯೂ ನನಗೆ ಇದೇ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಕಳೆದ ಬಾರಿ ಪರಿಹಾರ ಘೋಷಣೆ ಮಾಡಿತ್ತು. ಆದರೆ ಒಂದೇ ಒಂದು ರೂಪಾಯಿ ಬಂದಿಲ್ಲವೆಂದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆರೋಪಿಸಿ ಅಳಲು ತೋಡಿಕೊಂಡರು.

ಒಂದು ಹೆಕ್ಟೇರ್​ಗೆ ತೋಟಗಾರಿಕೆ ಬೆಳೆಗಳಿಗೆ ಈ ಬಾರಿ ಹತ್ತು ಸಾವಿರ ರೂಪಾಯಿ ನೀಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಯಾವುದಕ್ಕೆ ಸಾಲುತ್ತದೆ ಈ ಹಣ? ಸೂಕ್ತವಾದ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಅದೆಷ್ಟೋ ರೈತರ ಬೆಳೆ ಸಮೀಕ್ಷೆಯಲ್ಲಿ ನೋಂದಣಿ ಆಗಿರುವುದಿಲ್ಲ. ಇದರಿಂದಾಗಿ ಆ ರೈತರು ಅಲ್ಪ ಪರಿಹಾರದಿಂದ ವಂಚಿತರಾಗಿದ್ದಾರೆ. ಸರ್ಕಾರ ಅವರನ್ನು ಗುರುತಿಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಕೃಷಿ ಸಚಿವ ಬಿ.ಸಿ ಪಾಟೀಲ್, ಅವರಿಗೆ ಕೃಷಿಯಲ್ಲಿ ಎಷ್ಟು ಲಾಭ ನಷ್ಟ ಇದೆಯೆಂದು ಸರಿಯಾದ ಮಾಹಿತಿ ಇದ್ದರೂ ಯಾಕೆ ರೈತರಿಗೆ ಅಲ್ಪ ಪರಿಹಾರ ವಿತರಣೆ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಕೃಷಿ ಸಚಿವರು ಇದರ ಬಗ್ಗೆ ಗಮನ ಹರಿಸುವಂತೆ ಮನವಿ ಸಲ್ಲಿಸಿದರು. ಇದು ರೈತರ ಹಿತ ಕಾಪಾಡುವ ಸರ್ಕಾರ ಅಲ್ಲವೆಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಇದನ್ನೂ ಓದಿ: ಪ್ರೇಯಸಿ ಜೊತೆಗಿನ ಲಿವಿಂಗ್‌ ಟುಗೆದರ್‌ನಲ್ಲಿ ಜಾನ್‌'ಸನ್‌': ಅಧಿಕಾರದಲ್ಲಿದ್ದೇ 3ನೇ ಮದುವೆಯಾದ ಬ್ರಿಟಿಷ್‌ ಪ್ರಧಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.