ETV Bharat / state

ಮಾ.27ಕ್ಕೆ ಕ್ರಿಮಿನಲ್​, ಸಿವಿಲ್ ಪ್ರಕರಣಗಳ ಬೃಹತ್ ‘ಲೋಕ್ ಅದಾಲತ್’: ನ್ಯಾಯಾಧೀಶ ಸಿ.ಎಂ. ಜೋಶಿ

ನಿವೃತ್ತ ನ್ಯಾಯಾವಾದಿಗಳ ಸೇವೆಯನ್ನು ಬಳಸಿಕೊಂಡು ರಾಜಿಸಂಧಾನದ ಮಾತುಕತೆ ಮೂಲಕ ಲೋಕ ಅದಾಲತ್ ಮಾಡುತ್ತೇವೆ. ಕ್ರಿಮಿನಲ್ ಪ್ರಕರಣಗಳಲ್ಲಿ ಕೆಲ ಪ್ರಕರಣಗಳು ಹಾಗೂ ವಿಚ್ಛೇದನ ಕೇಸ್​​​ಗಳನ್ನು ಬಿಟ್ಟು ಉಳಿದೆಲ್ಲ ಪ್ರಕರಣಗಳನ್ನು ರಾಜಿಸಂಧಾನ ಮಾಡಲಾಗುವುದು ಎಂದಿದ್ದಾರೆ.

Judge C. M. Joshi
ನ್ಯಾಯಾಧೀಶ ಸಿ.ಎಂ.ಜೋಶಿ
author img

By

Published : Mar 3, 2021, 3:29 PM IST

ಬೆಳಗಾವಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಆಶ್ರಯದಲ್ಲಿ ಮಾ.27 ರಂದು ಇಡೀ ಜಿಲ್ಲೆಯಲ್ಲಿ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳ ಬೃಹತ್ ಲೋಕ್ ಅದಾಲತ್ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು‌ ಸೆಷನ್ಸ ನ್ಯಾಯಾಧೀಶ ಸಿ.ಎಂ ಜೋಶಿ ಹೇಳಿದ್ದಾರೆ.

ನಗರದ ಹೊಸ ನ್ಯಾಯಾಲಯದ ಸಂಕೀರ್ಣದಲ್ಲಿ ಮಾತನಾಡಿದ ಅವರು, ನಿವೃತ್ತ ನ್ಯಾಯಾವಾದಿಗಳ ಸೇವೆಯನ್ನು ಬಳಸಿಕೊಂಡು ರಾಜಿಸಂಧಾನದ ಮಾತುಕತೆ ಮೂಲಕ ಲೋಕ ಅದಾಲತ್ ಮಾಡುತ್ತೇವೆ. ಕ್ರಿಮಿನಲ್ ಪ್ರಕರಣಗಳಲ್ಲಿ ಕೆಲ ಪ್ರಕರಣಗಳು ಹಾಗೂ ವಿಚ್ಛೇದನ ಕೇಸ್​​​ಗಳನ್ನು ಬಿಟ್ಟು ಉಳಿದೆಲ್ಲ ಪ್ರಕರಣಗಳನ್ನು ರಾಜಿಸಂಧಾನ ಮಾಡಲಾಗುವುದು. ಈ ಸಂಬಂಧ ಈಗಾಗಲೇ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡಲಾಗಿದೆ.

ಮಾ.27ಕ್ಕೆ ಕ್ರಿಮಿನಲ್​, ಸಿವಿಲ್ ಪ್ರಕರಣಗಳ ಬೃಹತ್ ‘ಲೋಕ್ ಅದಾಲತ್’

ಚೆಕ್ ಬೌನ್ಸ್, ಎಂಎಂಡಿಆರ್ ಅಫೆನ್ಸ್, ಕೌಟುಂಬಿಕ ಕಲಹ, ಸರ್ಕಾರಿ ಇಲಾಖೆಗಳ ಭೂಸ್ವಾಧೀನ ಪ್ರಕರಣಗಳನ್ನು ಇತ್ಯರ್ಥಪಡಿಸಲು ವಿಶೇಷ ಪ್ರಯತ್ನ ಮಾಡುತ್ತೇವೆ ಎಂದರು.

ಲೋಕ್ ಅದಾಲತ್​​ನಲ್ಲಿ ರಾಜಿಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿದರೆ ನ್ಯಾಯಾಲಯದ ಮೇಲಿನ ಹೊರೆ ಕಡಿಮೆಯಾಗಲಿದೆ. ಹೀಗಾಗಿ ಜನರಿಗೆ ಮನವರಿಕೆ ಮಾಡುವ ಮೂಲಕ‌ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುವುದು. ಇದಕ್ಕೆ ಸರ್ಕಾರಿ ಅಧಿಕಾರಿಗಳು, ಸಂಘ-ಸಂಸ್ಥೆಗಳು ಕೈಜೋಡಿಸಬೇಕು. ಮುಂಬರುವ ಎರಡ್ಮೂರು ದಿನಗಳಲ್ಲಿ ಪ್ರತಿದಿನ 4ರಿಂದ 6 ಗಂಟೆವರೆಗೆ ಲೋಕ್ ಅದಾಲತ್ ನಡೆಸಲಾಗುತ್ತದೆ.

ಜಿಲ್ಲೆಯ 77 ನ್ಯಾಯಾಲಯಗಳಲ್ಲಿ ಅಂದಾಜು 40 ಸಾವಿರ ಪ್ರಕರಣಗಳು ರಾಜಿಸಂಧಾನ ಆಗುವ ನಿರೀಕ್ಷೆ ಇದ್ದು ಕೋವಿಡ್ ಇರುವ ಕಾರಣ ಕೋರ್ಟ್​​​ಗೆ ಹಾಜರಾಗಲು ಆಗದಿದ್ದರೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಪ್ರಕರಣಗಳನ್ನು ಬಗೆಹರಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ಸಾಹುಕಾರ್​ ಸಿಡಿ ಪ್ರಕರಣ: ಸಿದ್ದರಾಮಯ್ಯ ಸವಾಲ್​ ಹಾಕಿದ ಕೆಲವೇ ಗಂಟೆಯಲ್ಲಿ ರಾಜೀನಾಮೆ ಪಡೆದ ಸರ್ಕಾರ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.