ETV Bharat / state

ರೈತನನ್ನು ಮನೆಗೆ ಕರೆಯಿಸಿ 2 ಲಕ್ಷ ಲಂಚ ಪಡೆಯುತ್ತಿದ್ದ ತಹಶಿಲ್ದಾರ್​.. ರೆಡ್​ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ

ಲೋಕಾಯುಕ್ತ ಸಂಸ್ಥೆ ಭ್ರಷ್ಟರ ಬೇಟೆ ಮುಂದುವರಿಸಿದೆ. ಲಂಚ ಪಡೆಯುವ ಅಧಿಕಾರಿಗಳಿಗೆ ಬಲೆ ಹಾಕಿ ಚಳಿ ಬಿಡಿಸುತ್ತಿದೆ.

lokayukta raid on kitturu tahasildar
ತಹಶಿಲ್ದಾರ್​ ರೆಡ್​ ಹ್ಯಾಂಡಾಗಿ ಲೋಕಾಯಕ್ತ ಬಲೆಗೆ
author img

By

Published : Nov 26, 2022, 7:30 AM IST

ಬೆಳಗಾವಿ: ಜಮೀನು ಖಾತೆ ಬದಲಾವಣೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಿತ್ತೂರು ತಹಶಿಲ್ದಾರ ಮತ್ತು ಕೇಸ್ ವರ್ಕರ್ 2ಲಕ್ಷ ಹಣ ಸ್ವೀಕರಿಸುತ್ತಿದ್ದಾಗ ತಹಶಿಲ್ದಾರ್​ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಜಿಲ್ಲೆಯ ಕಿತ್ತೂರು ತಹಶಿಲ್ದಾರ್​ ಸೋಮಲಿಂಗಪ್ಪ ಹಲಗಿ ಹಾಗೂ ಕೇಸ್ ವರ್ಕರ್ ಪ್ರಸನ್ನ ಜಿ ಎಂಬ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದವರು. ಕಿತ್ತೂರು ತಾಲೂಕಿನ ಖೊದಾನಪೂರ ಗ್ರಾಮದ ಬಾಪುಸಾಹೇಬ ಇನಾಮದಾರ ಎಂಬುವರು ತಮ್ಮ 10ಎಕರೆ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕಿತ್ತೂರು ತಹಶೀಲ್ದಾರ್ 5 ಲಕ್ಷ ರೂ.ಗಳ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ.

ಈ ಬಗ್ಗೆ ಬಾಪುಸಾಹೇಬ್ ಪುತ್ರ ರಾಜೇಂದ್ರ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು, ಮನೆಯಲ್ಲಿಯೇ ಜಮೀನಿನ ಖಾತೆ ಬದಲಾವಣೆ ಮಾಡಲು 2ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಕಿತ್ತೂರು ತಹಶಿಲ್ದಾರ್​ ಮೇಲೆ ದಾಳಿ ಮಾಡಿದ್ದಾರೆ.

ಎರಡು ಲಕ್ಷ ಹಣ ಮತ್ತು ಸೂರಿಟಿಗಾಗಿ 20ಲಕ್ಷ ಮೌಲ್ಯದ ಖಾಲಿ ಚೆಕ್ ಅನ್ನು ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಕಾರ್ಯಾಚರಣೆ ಲೋಕಾಯುಕ್ತ ಬೆಳಗಾವಿ ಎಸ್ಪಿ ಯಶೋಧಾ ವಂಟಗೂಡಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾಗಿ ಅನ್ನಪೂರ್ಣ ಹುಲಗೂರ ತಂಡದ ಸಿಬ್ಬಂದಿ ಭಾಗಿಯಾಗಿದ್ದರು.

ಇದನ್ನೂ ಓದಿ.. ಆ್ಯಪ್​​ ಆಟೋಗಳಿಗೆ ದರ ನಿಗದಿ: ಆದೇಶ ಸ್ವಾಗತಿಸಿದ ಚಾಲಕರ ಸಂಘಟನೆಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.