ETV Bharat / state

ಜುಲೈ 22 ರಿಂದ 2 ವಾರ ಚಿಕ್ಕೋಡಿ ಲಾಕ್​ಡೌನ್​!

ಇಂದು ಮತ್ತು ನಾಳೆ ಎರಡು ದಿನದಲ್ಲಿ ಬೇಕಾದ ದಿನಸಿ ಸಾಮಗ್ರಿಗಳನ್ನು ಖರೀದಿಸಿ ಎಂದು ಜನರಿಗೆ ಸೂಚಿಸಲಾಗಿದೆ. ಚಿಕ್ಕೋಡಿ ನಗರದಲ್ಲಿ ಸುತ್ತಮುತ್ತಲಿನ ಗ್ರಾಮದ ಜನರು ಹಾಗೂ ಪಟ್ಟಣದ ಸಾರ್ವಜನಿಕರು ಅನಗತ್ಯ ಹೊರಗಡೆ ತಿರುಗಾಡುವುದನ್ನು ನಿರ್ಬಂಧಿಸಲಾಗಿದೆ..

lockdown
ಚಿಕ್ಕೋಡಿ ಲಾಕ್​ಡೌನ್
author img

By

Published : Jul 20, 2020, 8:24 PM IST

ಚಿಕ್ಕೋಡಿ : ಚಿಕ್ಕೋಡಿ ಪಟ್ಟಣದಲ್ಲೂ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ 15 ದಿನಗಳ ಕಾಲ 2ನೇ ಹಂತದ ಸ್ವಯಂ ಲಾಕ್​ಡೌನ್​ಗೆ ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ಪುರಸಭೆ ಸದಸ್ಯರು ನಿರ್ಣಯಿಸಿದ್ದಾರೆ.

ಪಟ್ಟಣದ ಪುರಸಭೆ ಸದ್ಯಸರು, ಪಟ್ಟಣದ ಮುಖಂಡರು ಹಾಗೂ ವ್ಯಾಪಾರಸ್ಥರು ಸಭೆ ನಡೆಸಿ ಚಿಕ್ಕೋಡಿ ಪಟ್ಟಣದಲ್ಲಿ ಸ್ವಯಂಪ್ರೇರಿತವಾಗಿ ಜನತಾ ಕರ್ಫ್ಯೂ ಜಾರಿ ಮಾಡುವ ಕುರಿತು ಸಭೆ ನಡೆಸಲಾಯ್ತು. ಇದರ ಪ್ರಕಾರ ಜುಲೈ 22ರಿಂದ 2 ವಾರ ಚಿಕ್ಕೋಡಿ ಲಾಕ್​ಡೌನ್ ಮಾಡಲು ನಿರ್ಧರಿಸಲಾಗಿದೆ. ಲಾಕ್​ಡೌನ್​ಗೆ ಸಹಕರಿಸಿ ಜನರಿಗೆ ತೊಂದರೆಯಾಗುವುದನ್ನು ನಿಲ್ಲಿಸಿ ಎಂದು ವಿಧಾನಸಭಾ ಪರಿಷತ್‌ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಹೇಳಿದ್ದಾರೆ.

ಚಿಕ್ಕೋಡಿ ಲಾಕ್​ಡೌನ್

ಇಂದು ಮತ್ತು ನಾಳೆ ಎರಡು ದಿನದಲ್ಲಿ ಬೇಕಾದ ದಿನಸಿ ಸಾಮಗ್ರಿಗಳನ್ನು ಖರೀದಿಸಿ ಎಂದು ಜನರಿಗೆ ಸೂಚಿಸಲಾಗಿದೆ. ಚಿಕ್ಕೋಡಿ ನಗರದಲ್ಲಿ ಸುತ್ತಮುತ್ತಲಿನ ಗ್ರಾಮದ ಜನರು ಹಾಗೂ ಪಟ್ಟಣದ ಸಾರ್ವಜನಿಕರು ಅನಗತ್ಯ ಹೊರಗಡೆ ತಿರುಗಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.