ETV Bharat / state

ತಹಶೀಲ್ದಾರ್​ ಕಾರು ಚಾಲಕನ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆ ಯತ್ನ: ಆರೋಪಿಗಳಿಗೆ ನ್ಯಾಯಾಂಗ ಬಂಧನ - belagavi news

ಅಕ್ರಮ ಮರಳು ಅಡ್ಡೆ ಮೇಲೆ ದಾಳಿಗೆ ಮುಂದಾದಾಗ ಇಲ್ಲಿನ ತಹಶೀಲ್ದಾರ್ ಕಾರು ಚಾಲಕನ ಮೇಲೆ ಟ್ರ್ಯಾಕ್ಟರ್ ಹರಿಸಲು ಮುಂದಾಗಿದ್ದಲ್ಲದೇ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ವರದಿಯಾಗಿತ್ತು. ಇದೀಗ ಎಲ್ಲ ಆರೋಪಿಗಳನ್ನು ಬಂಧಿಸಿರುವ ಅಥಣಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

locals tries to climb a tractor and murder a Tahsildar's car driver: arrested
ತಹಶೀಲ್ದಾರ್​ ಕಾರು ಚಾಲಕನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆ ಯತ್ನ: ಆರೋಪಿಗಳಿಗೆ ನ್ಯಾಯಾಂಗ ಬಂಧನ
author img

By

Published : Apr 30, 2020, 11:53 PM IST

ಅಥಣಿ (ಬೆಳಗಾವಿ): ತಹಶೀಲ್ದಾರರು ಕಾರು ಚಾಲಕನ ಮೇಲೆ ಟ್ರ್ಯಾಕ್ಟರ್​ ಹಾಯಿಸಿ ಕೊಲೆ ಪ್ರಯತ್ನ ಮಾಡಿರುವ ಘಟನೆ ಅಥಣಿ ತಾಲೂಕಿನ ಶಿರೂರ - ಬಳೆಗಾಂವದ ಬಳಿ ನಡೆದಿತ್ತು. ಸದ್ಯ ಈ ಆರೋಪಿಯನ್ನು ಅಥಣಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಥಣಿ ತಾಲೂಕಿನ ಶಿರೂರ - ಬಳೆಗಾಂವ ಮಧ್ಯದ ಹಳ್ಳದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿದ್ದಾಗ ಅಥಣಿ ತಹಶೀಲ್ದಾರರು ಮತ್ತು ಅವರ ಚಾಲಕ ಅನಿಲ್ ಮಲ್ಲಪ್ಪ ಗಸ್ತಿ ಹಾಗೂ ಆರ್.ವಿ. ಕಲಾಟೆ ರವರೊಂದಿಗೆ ದಾಳಿ ನಡೆಸಿದ್ದರು. ಈ ವೇಳೆ ತಹಶೀಲ್ದಾರ್​ ಮತ್ತು ಅವರ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಒತ್ತಾಯಪೂರ್ವಕವಾಗಿ ಟ್ರ್ಯಾಕ್ಟರ್​ ಅನ್ನು ತೆಗೆದುಕೊಂಡು ಹೋಗುವಾಗ ತಹಶೀಲ್ದಾರ್ ಚಾಲಕನ ಮೇಲೆ ವಾಹನ ಚಲಾಯಿಸಲು ಪ್ರಯತ್ನಿಸಲಾಗಿತ್ತು.

ಈ ಹಿನ್ನೆಲೆ ಅಥಣಿ ಠಾಣೆಯಲ್ಲಿ ಸೆಕ್ಷನ್​ 139/2020 ಕಲಂ 353, 307 ಐಪಿಸಿ ಮತ್ತು 3 ಪ್ರಿವೆನ್ಷನ್​ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಆ್ಯಕ್ಟ್​ ಅಡಿ ಪ್ರಕರಣ ದಾಖಲಾಗಿರುತ್ತದೆ.

ಸದರಿ ಪ್ರಕರಣದಲ್ಲಿ ಭಾಗಿಯಾದ ಆರೋಪಿತರಾದ ಸಾಗರ್ ಮಾರುತಿ, ಗಣಪತಿ ಚನ್ನಪ್ಪ ಮಾನೆ, ನಾರಾಯಣ ಬಾಪು ಹೊನಮೋಲೆ, ಪ್ರಕಾಶ ಲಕ್ಷಣ ಹೊನಮೋರೆ, ಎಲ್ಲರನ್ನೂ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರಪಡಿಸಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.