ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಸ್ಥಾಪನೆಯಾಗುತ್ತಿರುವ ಸ್ಟೋನ್ ಕ್ರಷರ್ ಘಟಕದ ಪರವಾನಗಿ ರದ್ದು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
. ರವಿ ಮಾಳಿ ಎಂಬುವರು ಜೋಡಕುಳಿ ಗ್ರಾಮದ ಸರ್ವೆ ನಂ 120/ಎ ಮತ್ತು ಬಿ ಸರ್ವೆ ನಂಬರನಲ್ಲಿ ಸುಮಾರು 29 ಎಕರೆ ಜಮೀನು ಹೊಂದಿದ್ದಾರೆ. ಸದ್ಯ ಅದೇ ಜಾಗದಲ್ಲಿ ರವಿ ಸ್ಟೋನ್ ಕ್ರಷರ್ ಪ್ರಾರಂಭಿಸಬೇಕು ಅಂತ ಅಧಿಕಾರಿಗಳಿಂದ ಅನುಮತಿ ಪಡೆದು ಸ್ಥಳಕ್ಕೆ ಬಂದಾಗ ಜೋಡಕುರಳಿ ಗ್ರಾಮಸ್ಥರು ಸ್ಥಳದಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಈ ರೀತಿ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಬೆಂಬಲಿಗ ರವಿ ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾವು ಇಲ್ಲಿ ಸ್ಟೋನ್ ಕ್ರಷರ್ ತೆರೆಯಲು ಬಿಡುವುದಿಲ್ಲ ಎಂದು ಸ್ಥಳೀಯರು ವಿರೋಧಿಸುತ್ತಿದ್ದಾರೆ.
ಜೋಡಕುರಳಿ ಗ್ರಾಮದ ಹೊರವಲಯದಲ್ಲಿ ಹೆಚ್ಚಾಗಿ ಕುರುಬ ಜನಾಂಗ ವಾಸವಿದ್ದು, ಆ ಜನಾಂಗಕ್ಕೆ ಇದು ತೊಂದರೆಯಾಗುತ್ತೆ. ಅಲ್ಲದೇ ಕ್ರಷರ್ನಿಂದ ಬರುವ ಧೂಳಿನ ಸಮಸ್ಯೆಯಿಂದ ಪಕ್ಕದಲ್ಲೇ ಇರುವ ದೊಡ್ಡ ಕೆರೆಗೂ ಸಹ ಇದರಿಂದ ಹೊಡೆತ ಬಿದ್ದು ಕುಡಿಯುವ ನೀರಿಗೆ ಬೇಸಿಗೆ ಕಾಲದಲ್ಲಿ ಸಮಸ್ಯೆಯಾಗುತ್ತೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ರವಿ ಮಾಳಿ, ನಾನೂ ಕೂಡಾ 29 ಎಕರೆ ಜಮೀನನ್ನು ಕೃಷಿ ಮಾಡಲು ತೆಗೆದುಕೊಂಡಿದ್ದು, ಅಲ್ಲಿ ಕಲ್ಲುಗಳು ಹೆಚ್ಚಾಗಿರುವುದರಿಂದ ಸ್ಟೋನ್ ಕ್ರಷರ್ ಕೂಡಿಸಲು ಮುಂದಾಗಿದ್ದೇನೆ. ನಾನು ಕೂಡಾ ಬಡ ಕುಟುಂಬದಿಂದ ಬಂದವನು. ಯಾರ ಹೊಟ್ಟೆ ಮೇಲೆ ಹೊಡೆದು ದೊಡ್ಡವನಾಗಲು ಬಂದಿಲ್ಲ. ಈಗಾಗಲೇ ಸರ್ಕಾರದಿಂದ ಪರವಾನಿಗೆ ಪಡೆದುಕೊಂಡಿದ್ದೇನೆ. ಆ ಜಮೀನಿನಲ್ಲಿ ಹೆಚ್ಚಾಗಿ ಕಲ್ಲುಗಳು ಇರುವುದರಿಂದ ಸ್ಟೋನ್ ಕ್ರಷರ್ ಘಟಕ ತೆರೆಯುವುದಾಗಿ ತಿಳಿಸಿದ್ದಾರೆ.