ಅಥಣಿ : ಕೇಂದ್ರ ಸರ್ಕಾರ ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಆದೇಶ ಹೊರಡಿಸಿದರು ರಾಜ್ಯ ಸರ್ಕಾರ ಎಸ್ಟಿ ಪ್ರಮಾಣ ಪತ್ರ ವಿತರಣೆ ಮಾಡುತ್ತಿಲ್ಲ ಎಂದು ಹಳ್ಳಿಯಿಂದ ದಿಲ್ಲಿವರಿಗೆ ಪತ್ರ ಚಳುವಳಿಗೆ ಮಾಡಲು ಅಥಣಿ ತಾಲೂಕಿನ ತಳವಾರ ಸಮಾಜದವರು ಮುಂದಾಗಿದ್ದಾರೆ.
ಅಥಣಿ ತಾಲೂಕಿನಲ್ಲಿ ಸರಿಸುಮಾರು 14,900ಕ್ಕೂ ಹೆಚ್ಚು ತಳವಾರ ಸಮುದಾಯದವರಿದ್ದಾರೆ. ಇವರೆಲ್ಲ ಮೊದಲನೇ ಹಂತವಾಗಿ 2೦೦೦ ಪತ್ರವನ್ನು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳಿಸಿ, ನ್ಯಾಯ ಸಿಗುವವರೆಗೆ ಚಳುವಳಿ ಮುಂದುವರೆಸುತ್ತೇವೆ ಎಂದಿದ್ದಾರೆ.
ಇದೆ ಸಂದರ್ಭದಲ್ಲಿ ಸುನಿತಾ ಈಟಿ ಮಾತನಾಡಿ, ತಳವಾರ ಸಮುದಾಯದವರ ಬಹುದಿನಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸಿ ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಆದೇಶ ಹೊರಡಿಸಿದೆ. ಆದ್ರೆ ರಾಜ್ಯ ಸರ್ಕಾರ ದ್ವಂದ್ವ ನಿಲುವಿಗೆ ಬಂದಿದ್ದುಇದರಿಂದ ತಳವಾರ ಸಮುದಾಯಕ್ಕೆ ಹಿನ್ನಡೆ ಉಂಟಾಗಿದೆ ಎಂದರು.
ಇನ್ನೋರ್ವ ತಳವಾರ ಸಮಾಜದ ಮುಖಂಡ ತಮ್ಮಣ್ಣ ಶಿವಪ್ಪ ಮೀಶಿ ಮಾತನಾಡಿ, ಬಹುದಿನ ಕನಸು ಕೇಂದ್ರ ಸರ್ಕಾರ ಪರಿವಾರ_ತಳವಾರು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಆದೇಶ ಹೊರಡಿಸಿದೆ. ಆದ್ರೆ ರಾಜ್ಯ ಸರ್ಕಾರ ಎಸ್ಟಿ ಪ್ರಮಾಣ ಪತ್ರ ವಿತರಣೆ ಮಾಡುತ್ತಿಲ್ಲ. ಇದರಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಹಾಗೂ ನೌಕರರಿಗೆ ಹಲವು ಯೋಜನೆಗಳಿಂದ ಅನ್ಯಾಯವಾಗಿತ್ತಿದೆ ಎಂದರು.